For Quick Alerts
  ALLOW NOTIFICATIONS  
  For Daily Alerts

  'ಅಭಯಹಸ್ತ' ಚಿತ್ರಕ್ಕಾಗಿ ಮತ್ತೆ ಒಂದಾದ ಅಲೆಮಾರಿ ಜೋಡಿ

  By Pavithra
  |

  ಅಲೆಮಾರಿ ಸಿನಿಮಾದಲ್ಲಿ ಒಟ್ಟಿಗೆ ಅಭಿನಯ ಮಾಡಿದ ಜೋಡಿ ಲೂಸ್ ಮಾದ ಯೋಗಿ ಹಾಗೂ ರಾಕೇಶ್ ಅಡಿಗ ಮತ್ತೆ ಒಂದಾಗಿದೆ. ಗುರು ರಾಜೇಂದ್ರ ಸೂರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ನವಿಲುಗರಿ ಸಿನಿಮಾ ಸಹಯೋಗದೊಂದಿಗೆ ನಿರ್ಮಾಣ ಆಗಿರುವ ಅಭಯಹಸ್ತ' ಚಿತ್ರಕ್ಕೆ ನಟರಾದ ಯೋಗಿ ಹಾಗೂ ರಾಕೇಶ್ ಅಡಿಗ ಧ್ವನಿ ನೀಡಿದ್ದಾರೆ.

  ಅಲೆಮಾರಿ ನಂತರ ಯಾವ ಚಿತ್ರದಲ್ಲೂ ಯೋಗಿ ಹಾಗೂ ರಾಕೇಶ್ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಅಭಯಹಸ್ತ' ಚಿತ್ರಕ್ಕೆ ಇಬ್ಬರೂ ಧ್ವನಿ ನೀಡಿರುವುದು ವಿಶೇಷ. ಸೆಂಚುರಿ ಸ್ಟಾರ್ ಶಿವರಾಜಕುಮಾರ್, ಪವರ್‌ಸ್ಟಾರ್ ಪುನೀತ್ ರಾಜಕುಮಾರ್, ದಿನಕರ್ ತೂಗುದೀಪ್, ಕವಿರಾಜ್, ಸುಧಾರಾಣಿ ಮುಂತಾದವರಿಂದ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಸಿದ್ದರು ನಿರ್ದೇಶಕರು.

  ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ವಿನಯ್ ರಾಜ್ ಕುಮಾರ್ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ವಿನಯ್ ರಾಜ್ ಕುಮಾರ್

  ನಿರ್ದೇಶಕ ನವೀನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಛಾಯಾಗ್ರಹಣ, ಸಂಕಲನದೊಂದಿಗೆ ಕಲಾ ನಿರ್ದೇಶನವನ್ನು ಮಾಡಿರುವ ಈ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಹಾಗೂ ಪ್ರವೀಣ್ ಸಂಗೀತ ನೀಡಿದ್ದಾರೆ.

  ಪದ್ಮಶ್ರೀ ಡಾ||ದೊಡ್ದರಂಗೇಗೌಡ, ಶಿವು, ನವೀನ್ ಅವರು ಬರೆದಿರುವ ಈ ಚಿತ್ರದ ಹಾಡುಗಳನ್ನು ಸೆಂಚುರಿ ಸ್ಟಾರ್ ಶಿವರಾಜಕುಮಾರ್, ನವೀನ್‌ಕೃಷ್ಣ ಹಾಗೂ ಮನೋಜವಂ ಹಾಡಿದ್ದಾರೆ.

  Yogi and Rakesh Adiga sing for Kannada Abhayashastha movie

  ಜಿ.ಕೆ.ಗೋವಿಂದರಾವ್, ಸಾಹಿತಿ ಚಂಪ, ಪದ್ಮಶ್ರೀ ಡಾ||ದೊಡ್ಡರಂಗೇಗೌಡ, ಹುಲಿಕಲ್ ನಟರಾಜ್, ಮಹೇಂದರ್ ಮನೋತ್, ಜೇಡ್ರಳ್ಳಿ ಕೃಷ್ಣಪ್ಪ, ಕಪಾಲಿ ಆನಂದ್ ಹಾಗೂ ವಾಟಾಳ್ ನಾಗರಾಜ್ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸಿನಿಮಾಗೆ ಈಗ ರಾಕೇಶ್ ಅಡಿಗ ಹಾಗೂ ಲೂಸ್ ಮಾದಾ ಯೋಗಿ ಒಟ್ಟಿಗೆ ಸೇರಿ ಹಾಡಿರುವುದು ಮತ್ತಷ್ಟು ವಿಶೇಷತೆಗಳಿಗೆ ಕಾರಣ ಆಗಿದೆ.

  English summary
  Actor Yogi and Rakesh Adiga sing for Kannada Abhayashastha movie, Naveen directed the Abhayashastha film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X