For Quick Alerts
  ALLOW NOTIFICATIONS  
  For Daily Alerts

  ಬರ್ತ್ ಡೇ ದಿನ ಮಲ್ಲಿಗೆ ಇಡ್ಲಿ ಕಟ್ ಮಾಡಿದ ಭಟ್ಟರು

  By ಉದಯರವಿ
  |

  ಹುಟ್ಟುಹಬ್ಬ ಆಚರಿಸುವುದರಲ್ಲೂ ಭಿನ್ನತೆಯನ್ನು ಮೆರೆದಿದ್ದಾರೆ ನಮ್ಮ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್. ಇದನ್ನೇನು ಅವರು ಪಕ್ಕಾ ಪ್ಲಾನ್ ಮಾಡಿ ಪ್ರಚಾರಕ್ಕಾಗಿ ಮಾಡಿದ್ದಲ್ಲ. ಬರ್ತ್ ಡೇ ದಿನ ಮನೆಯಲ್ಲಿ ಎಲ್ಲರೊಂದಿಗೆ ಬೆರೆದು ಸಿಂಪಲ್ಲಾಗಿ ಮಲ್ಲಿಗೆ ಇಡ್ಲಿ ತಿಂದು ಕೈ ತೊಳೆದುಕೊಂಡಿದ್ದಾರೆ ಅಷ್ಟೇ.

  ಆದರೆ ಇದೇ ಈಗ ಭಾರಿ ಸುದ್ದಿಯಾಗಿದೆ. ಭಟ್ಟರು ಕೇಕ್ ಬದಲಿಗೆ ಇಡ್ಲಿ ಕಟ್ ಮಾಡಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎಂಬುದು. ಸದ್ಯಕ್ಕೆ ಸ್ಯಾಂಡಲ್ ವುಡ್ ನಿಂದ ಕೊಂಚ ಬಿಡುವು ತೆಗೆದುಕೊಂಡಿರುವ ಭಟ್ಟರು ಈಗ ಬಾಲಿವುಡ್ ನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.

  ಅವರ ಹೊಸ ಬಾಲಿವುಡ್ ಚಿತ್ರದ ತಯಾರಿ ಜೋರಾಗಿ ನಡೆಯುತ್ತಿದೆ. ಇದಕ್ಕಾಗಿ ಅವರು ಮುಂಬೈನಲ್ಲೇ ಆಫೀಸ್ ಓಪನ್ ಮಾಡಿ ಅಲ್ಲೇ ಪಕ್ಕಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 8ಕ್ಕೆ ಅವರು 39ರ ಪ್ರಾಯಕ್ಕೆ ಅಡಿಯಿಟ್ಟರು. ಈ ಸಂದರ್ಭದಲ್ಲಿ ಅವರಿಗೆ ಮನೆಯವರೊಂದಿಗೆ ದಿನ ಕಳೆಯಬೇಕು ಅನ್ನಿಸಿ ಬೆಂಗಳೂರಿಗೆ ಬಂದು ಇಡ್ಲಿ ತಿಂದು ಹೋಗಿದ್ದಾರೆ.

  ಅದು ಮಲ್ಲಿಗೆ ಇಡ್ಲಿನೋ, ತಟ್ಟೆ ಇಡ್ಲಿನೋ, ಬಟನ್ ಇಡ್ಲಿನೋ, ರವೆ ಇಡ್ಲಿನೋ ಮತ್ತೊಂದೋ ಮಗದೊಂದೋ ಗೊತ್ತಿಲ್ಲ. ತಟ್ಟೆಯಲ್ಲಂತೂ ತಿಂದಿದ್ದಾರೆ ಹಾಗಾಗಿ ಇದನ್ನು ತಟ್ಟೆ ಇಡ್ಲಿ ಎನ್ನಲು ಅಡ್ಡಿಯಿಲ್ಲ. ಕೇಕ್ ಎಲ್ಲಿ ಬೇಕಾದರೂ ಸಿಗುತ್ತದೆ ಆದರೆ ಈ ಇಡ್ಲಿ ಸಾಂಬಾರ್ ಸಿಗಬೇಕಲ್ಲಾ. ಅದೂ ಮನೆಯಲ್ಲಿ ಮಾಡಿದ ಇಡ್ಲಿಯನ್ನು ಮನೆಗೇ ಬಂದು ತಿನ್ನಬೇಕಲ್ಲವೇ?

  English summary
  Director-lyricist Yogaraj Bhat celebrated his 39th birthday on October 8 with his family in Bangalore. He ate his favourite idlis with chutney. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X