twitter
    For Quick Alerts
    ALLOW NOTIFICATIONS  
    For Daily Alerts

    Puneeth Rajkumar : ಯುವ ದಸರಾದಲ್ಲಿ ಒಂದು ದಿನ ಅಪ್ಪುಗೆ ಅರ್ಪಣೆ: ಅಣ್ಣಾವ್ರ ಕುಟುಂಬಕ್ಕೆ ಕರೆ!

    |

    "ಮೈಸೂರು ದಸರಾ.. ಎಷ್ಟೊಂದು ಸುಂದರ.." ಈ ಹಾಡನ್ನು ಕೇಳದವರೇ ಇಲ್ಲ. ಹಾಗೇ ವಿಶ್ವ ವಿಖ್ಯಾತ ಮೈಸೂರು ದಸರಾ ಯಾರಿಗೆ ಗೊತ್ತಿಲ್ಲ. ಮೈಸೂರಿನ ಪ್ರತಿಯೊಂದು ಮನೆಯಲ್ಲೂ ಕಳೆದ ಒಂದು ತಿಂಗಳಿನಿಂದಲೇ ದಸರಾ ಸಂಭ್ರಮ ಆರಂಭ ಆಗಿದೆ.

    ವಿಶ್ವವಿಖ್ಯಾತ ಮೈಸೂರು ದಸರಾದ ಮತ್ತೊಂದು ಆಕರ್ಷಣೆ ಯುವ ದಸರಾ. ಪ್ರತಿದಿನ ನಡೆಯುವ ಹತ್ತು ಹಲವು ಕಾರ್ಯಕ್ರಮಗಳಲ್ಲಿ 'ಯುವ ದಸರಾ' ಯುವ ಸಮುದಾಯವನ್ನು ಸೆಳೆಯುತ್ತೆ. ಪ್ರತಿ ದಿನ ಸಂಜೆ ವೇಳೆಗೆ ಸಾಂಸೃತಿಕ ಕಾರ್ಯಕ್ರಮ ನಡೆಯುತ್ತೆ. ಹಾಗೇ ಈ ಬಾರಿಗೆ ಯುವ ದಸರಾಗೆ ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಈ ಬಾರಿಯ ವಿಶೇಷ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್.

    ಯುವ ದಸರಾದಲ್ಲಿ ಪವರ್‌ಸ್ಟಾರ್ ಪುನೀತ್

    ಯುವ ದಸರಾಗೆ ಅದ್ಧೂರಿ ಚಾಲನೆಗೆ ವೇದಿಕೆ ರೆಡಿಯಾಗಿದೆ. ಈ ಬಾರಿ ಸುಮಾರು ಏಳು ದಿನಗಳ ಕಾಲ ಯುವ ದಸರಾ ನಡೆಯಲಿದೆ ಎನ್ನಲಾಗಿದೆ. ವಿಶೇಷ ಅಂದರೆ, ಈ ಸಲ ನಡೆಯೋ ಯುವ ದಸರಾದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದೆ.

    Yuva Dasara 2022: One Day Dedicated to Power Star Puneeth Rajkumar

    ಯುವ ದಸರಾದಲ್ಲಿ ಸೆಪ್ಟೆಂಬರ್ 27 ಅಥವಾ ಸೆಪ್ಟೆಂಬರ್ 28 ಈ ಎರಡು ದಿನಗಳಲ್ಲಿ ಒಂದು ದಿನವನ್ನು ಮೀಸಲಿಡಲಾಗಿದೆ. ಆ ದಿನದಂದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಸಿನಿಮಾಗಳ ಹಾಡುಗಳನ್ನು ಸುಪ್ರಸಿದ್ಧ ಗಾಯಕರು ಹಾಡಲಿದ್ದಾರೆ. ಆ ದಿನದ ಸಂಜೆಯನ್ನು ಅಪ್ಪು ಹಾಗೂ ಅವರ ಅಭಿಮಾನಿಗಳಿಗೆ ಮೀಸಲಿಡಲಾಗಿದೆ.

    ಅಣ್ಣಾವ್ರ ಕುಟುಂಬಕ್ಕೆ ಸನ್ಮಾನ

    ಯುವ ದಸರಾದಲ್ಲಿ ಕೇವಲ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹಾಡುಗಳನ್ನಷ್ಟೇ ಹಾಡುವುದಿಲ್ಲ. ಅಣ್ಣಾವ್ರ ಕುಟುಂಬಕ್ಕೂ ಆಹ್ವಾನ ನೀಡಲಾಗಿದೆ. ಅದೇ ದಿನ ಯುವ ದಸರಾ ವೇದಿಕೆ ಮೇಲೆ ಅಣ್ಣಾವ್ರ ಕುಟುಂಬವನ್ನು ಸನ್ಮಾನ ಮಾಡಲಾಗುತ್ತೆ ಎಂದು ಮೂಲಗಳು ತಿಳಿಸಿವೆ.

    ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಸೇರಿದಂತೆ ಯುವ ರಾಜ್‌ಕುಮಾರ್, ವಿನಯ್ ಜೊತೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಭಾಗವಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಹೀಗಾಗಿ ಈ ಬಾರಿ ಯುವ ದಸರಾ ವೇದಿಕೆ ಮೇಲೆ ಅಪ್ಪು ಗುಣ ಗಾನ ಆಗಲಿದೆ.

    9 ದಿನ 'ಯುವ ಸಂಭ್ರಮ' ಆರಂಭ

    ದಸರಾದ ಈ ಸಂದರ್ಭದಲ್ಲಿ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ದಸರಾ ಯುವ ಸಂಭ್ರಮ ನಡೆಯಲಿದೆ. ಇಂದಿನಿಂದ (ಸೆಪ್ಟೆಂಬರ್ 16) ಯುವ ಸಂಭ್ರಮ ಆರಂಭ ಆಗಿದ್ದು, ಸುಮಾರು 9 ದಿನಗಳ ಕಾಲ ನಡೆಯಲಿದೆ. ಈ ಸಂಭ್ರಮದಲ್ಲಿ 250 ಮಂದಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

    ಪ್ರತಿ ದಿನ ಸಂಜೆ 5.30ರಿಂದ ಆರಂಭ ಆಗಲಿರೋ ಈ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಡಾಲಿ ಧನಂಜಯ್ ಭಾಗವಹಿಸುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾ ಪ್ರದರ್ಶನ, ಹತ್ತು ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಈ ಕಾರ್ಯಕ್ರಮ ಜರುಗಲಿದೆ. ಆ ಬಳಿಕ ಯುವ ದಸರಾ ಆರಂಭ ಆಗಲಿದೆ.

    English summary
    Yuva Dasara 2022: One Day Dedicated to Power Star Puneeth Rajkumar, Know More.
    Friday, September 16, 2022, 13:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X