»   » ಯುವನ್ ಶಂಕರ್ ರಾಜಾ ಮೂರನೇ ಮದುವೆಗೆ ಗಟ್ಟಿಮೇಳ

ಯುವನ್ ಶಂಕರ್ ರಾಜಾ ಮೂರನೇ ಮದುವೆಗೆ ಗಟ್ಟಿಮೇಳ

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಬಾಳಲ್ಲಿ ಮೂರನೇ ಬಾರಿ ಗಟ್ಟಿಮೇಳ ಮೊಳಗಿದೆ. ಹೊಸ ವರ್ಷದಂದೇ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ ಸಂಗೀತ ಮಾಂತ್ರಿಕ ಇಳಯರಾಜ ಪುತ್ರ ಯುವನ್ ಶಂಕರ್ ರಾಜಾ.

ನಿನ್ನೆ (ಜನವರಿ 1) ರಾತ್ರಿ 9.20 ರ ಸುಮಾರಿಗೆ ರಾಮನಾಥಪುರ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಸರಳವಾಗಿ ಯುವನ್ ಶಂಕರ್ ರಾಜಾ, ತಮ್ಮ ಪ್ರೇಯಸಿ ಝಫ್ರುನ್ ನಿಸ್ಸಾರ್ ರನ್ನ ಕೈಹಿಡಿದಿದ್ದಾರೆ.

ಚಿತ್ರರಂಗದ ಗಣ್ಯರು, ಆಪ್ತೇಷ್ಟರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನವ ವಧು-ವರರನ್ನ ಹರಸಿದರೂ, ಯುವನ್ ಶಂಕರ್ ರಾಜಾ ತಂದೆ ಇಳಯರಾಜ ಮಾತ್ರ ಅತ್ತ ಸುಳಿಯಲೇ ಇಲ್ಲ.

ಕಳೆದ ವರ್ಷವಷ್ಟೇ ದುಬೈಗೆ ತೆರಳಿದ್ದ ವೇಳೆ ವಸ್ತ್ರ ವಿನ್ಯಾಸಕಿ ಝಫ್ರುನ್ ರನ್ನ ನೋಡಿ ಮೆಚ್ಚಿದ್ದ ಯುವನ್ ಶಂಕರ್, ತಮ್ಮ ಎರಡನೇ ಪತ್ನಿ ಶಿಲ್ಪಾ ಮೋಹನ್ ಗೆ ಸೋಡಾ ಚೀಟಿ ಕೊಟ್ಟಿದ್ದರು.

Yuvan Shankar

ಸಾಲದ್ದಕ್ಕೆ ಝಫ್ರುನ್ ಗೋಸ್ಕರ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ, ತಮ್ಮ ಹೆಸರನ್ನ ಅಬ್ದುಲ್ ಹಲಿಖ್ ಅಂತಲೂ ಬದಲಾಯಿಸಿಕೊಂಡಿದ್ದರು. ಇದೇ ಕಾರಣಕ್ಕೆ ಅಪ್ಪ ಮತ್ತು ಮಗನ ಮಧ್ಯೆ ವೈಮನಸ್ಯ ಉಂಟಾಯ್ತು. [ಇಳಯರಾಜಾ ಪುತ್ರ ಇಸ್ಲಾಂಗೆ ಮತಾಂತರ]

ಈಗಾಗ್ಲೇ ಎರಡೂ ಮದುವೆಗಳನ್ನ ಮುರಿದುಕೊಂಡಿರುವ ಯುವನ್ ಶಂಕರ್ ರಾಜಾ ಈಗ ಇಸ್ಲಾಂ ಧರ್ಮದ ಯುವತಿಯನ್ನ ಕೈಹಿಡಿಯುತ್ತಿರುವ ಬಗ್ಗೆ ಇಡೀ ಕುಟುಂಬದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಪ್ರೀತಿಸಿದ ಹುಡುಗಿ ಸುಜಯಾ ಚಂದ್ರನ್ ಜೊತೆ 2005 ರಲ್ಲಿ ಸಪ್ತಪದಿ ತುಳಿದಿದ್ದ ಯುವನ್, ಮೂರೇ ವರ್ಷಕ್ಕೆ ಅಂದ್ರೆ 2008 ರಲ್ಲಿ ಸುಜಯಾಗೆ ಗೇಟ್ ಪಾಸ್ ನೀಡಿದ್ದರು. ಅದಾದ ನಂತ್ರ ಶಿಲ್ಪಾ ಮೋಹನ್ ಜೊತೆ ಹಸೆಮಣೆ ಏರಿದ್ದ ಯುವನ್, ಇದೀಗ ಝಫ್ರುನ್ ಗೋಸ್ಕರ ಎರಡನೇ ಮದುವೆಗೆ ಎಳ್ಳು ನೀರು ಬಿಟ್ಟಿದ್ದಾರೆ.

ಮಗನ ಈ ವರ್ತನೆ ಬಗ್ಗೆ ಬೇಸರಗೊಂಡಿರುವ ಇಳಯರಾಜ, ಮದುವೆಗೆ ಗೈರು ಹಾಜರಾಗಿದ್ದಾರೆ. ಯುವನ್ ಶಂಕರ್ ರಾಜಾ ಸಹೋದರಿ ಭಾವಧರಣಿ ಒಬ್ಬರನ್ನ ಬಿಟ್ಟರೆ, ಬಂಧುಮಿತ್ರರಾರೂ ಸಮಾರಂಭದಲ್ಲಿ ಭಾಗವಹಿಸಿಲ್ಲ.

ಯಾರೇನೇ ಅಂದರೂ, ಹೊಸ ಸಂಗಾತಿಯೊಂದಿಗೆ ಮೂರನೇ ಬಾರಿ ವೈವಾಹಿಕ ಬದುಕಿಗೆ ಕಾಲಿಟ್ಟಿರುವ ಯುವನ್ ಶಂಕರ್ ರಾಜಾ ಮಾತ್ರ ಹೊಸ ಹೊಸ ಹುರುಪಿನೊಂದಿಗೆ ಖುಷಿಯಾಗಿದ್ದಾರೆ.

English summary
Yuvan Shankar Raja ties not for the third time with a Muslim girl named Zafrun Nissar in a private ceremony held last night (Jan 1st). The wedding saw some important personalities bless the newly-weds except Ilayaraja, Yuvan's father who did not attend the event.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada