For Quick Alerts
  ALLOW NOTIFICATIONS  
  For Daily Alerts

  ಖಾತರಿ ಆಯ್ತು ಯುವ ರಾಜ್ ಕುಮಾರ್ ಪಟ್ಟಾಭಿಷೇಕ

  By Pavithra
  |
  ಯುವ ರಾಜ್‌ಕುಮಾರ್ ಬಗ್ಗೆ ಬಂತು ಮತ್ತೊಂದು ಸುದ್ದಿ..! | Filmibeat Kannada

  ಡಾ ರಾಜ್ ಕುಮಾರ್ ಕುಟುಂಬದಿಂದ ಇಬ್ಬರು ನಾಯಕ ನಟರು ಕನ್ನಡ ಸಿನಿಮಾರಂಗಕ್ಕೆ ಕಾಲಿಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವರಾಜ್ ಕುಮಾರ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಾರೆ ಎನ್ನುವ ಸುದ್ದಿಗಳು ಬಹಳ ದಿನಗಳಿಂದ ಕೇಳಿ ಬರುತ್ತಿದೆ.

  ಸಿನಿಮಾರಂಗಕ್ಕೆ ಬರುವ ನಿಟ್ಟಿನಲ್ಲಿಯೇ ಹೆಸರನ್ನು ಬದಲಾವಣೆ ಮಾಡಿಕೊಂಡರು ಯುವ ರಾಜ್ ಕುಮಾರ್. ಇತ್ತೀಚಿಗಷ್ಟೆ ಮೈಸೂರಿನ ಹುಡುಗಿ ಶ್ರೀದೇವಿ ಭೈರಪ್ಪ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಯುವರಾಜ್ ಕುಮಾರ್ ಇನ್ನು ಕೆಲವೇ ದಿನಗಳಲ್ಲಿ ಚಂದನವನಕ್ಕೆ ಎಂಟ್ರಿ ಕೊಡಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

  ಯುವರಾಜಕುಮಾರನ ನಿಶ್ಚಿತಾರ್ಥದಲ್ಲಿ ಕಂಡ ಗಣ್ಯರಿವರು

  ಆದರೆ ಯಾವಾಗ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೆ? ಹೊಸ ಚಿತ್ರ ಸೆಟ್ಟೇರುವುದು ಯಾವಾಗ? ಎನ್ನುವ ಪ್ರಶ್ನೆಗಳಿಗೆ ಯುವರಾಜ್ ಕುಮಾರ್ ಉತ್ತರ ನೀಡಿದ್ದಾರೆ. ಹಾಗಾದ್ರೆ ಯುವರಾಜಕುಮಾರನ ಪಟ್ಟಾಭಿಷೇಕ ಯಾವಾಗ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ...

  ಚಂದನವನದಲ್ಲಿ ಯುವ ರಾಜ್ ಕುಮಾರ್

  ಚಂದನವನದಲ್ಲಿ ಯುವ ರಾಜ್ ಕುಮಾರ್

  ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವ ರಾಜ್ ಕುಮಾರ್ ಸಿನಿಮಾ ರಂಗಕ್ಕೆ ಕಾಲಿಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಅದು ಯಾವಾಗ ಎನ್ನುವುದಕ್ಕೆ ಯುವ ರಾಜ್ ಕುಮಾರ್ ಉತ್ತರಿಸಿದ್ದಾರೆ. 2019ರ ಆರಂಭದಲ್ಲಿ ಯುವ ರಾಜ್ ಕುಮಾರ್ ಚಿತ್ರರಂಗದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸುವುದು ಪಕ್ಕಾ ಆಗಿದೆ.

  ತಯಾರಿಯಲ್ಲಿ ಬ್ಯುಸಿ ಆಗಿರುವ ಯುವ

  ತಯಾರಿಯಲ್ಲಿ ಬ್ಯುಸಿ ಆಗಿರುವ ಯುವ

  ಯುವ ರಾಜ್ ಕುಮಾರ್ ಚಿತ್ರರಂಗಕ್ಕೆ ಬರುವ ಮುನ್ನ ಎಲ್ಲಾ ರೀತಿಯಲ್ಲಿ ತಯಾರಿ ಮಾಡಿಕೊಂಡೇ ಬರಬೇಕು ಎನ್ನುವ ನಿರ್ಧಾರ ಮಾಡಿ. ಈಗಾಗಲೇ ಅದಕ್ಕಾಗಿಯೇ ಸಾಕಷ್ಟು ದಿನಗಳಿಂದ ಮುಂಬೈನಲ್ಲಿಯೇ ಬೀಡು ಬಿಟ್ಟಿದ್ದಾರೆ.

  ಟ್ರೈನಿಂಗ್ ನಂತರ ಕಥೆ ಆಯ್ಕೆ

  ಟ್ರೈನಿಂಗ್ ನಂತರ ಕಥೆ ಆಯ್ಕೆ

  ಸದ್ಯ ಮಂಬೈನಲ್ಲಿ ಟ್ರೈನಿಂಗ್ ಪಡೆಯುತ್ತಿರುವ ಯುವ ರಾಜ್ ಕುಮಾರ್ ಸಿನಿಮಾ ಕಥೆ ಬಗ್ಗೆ ಇನ್ನು ತಲೆ ಕೆಡಿಸಿಕೊಂಡಿಲ್ಲ. ತರಬೇತಿ ಮುಗಿಸಿದ ನಂತರ ಕಥೆ ಕೇಳಲು ಆರಂಭಿಸುತ್ತಾರಂತೆ.

  ಕಮರ್ಷಿಯಲ್ ಹೀರೋ ಆಗಿ ಯುವ

  ಕಮರ್ಷಿಯಲ್ ಹೀರೋ ಆಗಿ ಯುವ

  ಯುವ ರಾಜ್ ಕುಮಾರ್ ಚೊಚ್ಚಲ ಸಿನಿಮಾವೇ ಕಮರ್ಷಿಯಲ್ ಆಗಿರಬೇಕು ಎನ್ನುವುದು ಅಭಿಮಾನಿಗಳ ಆಸೆ. ಅಷ್ಟೇ ಅಲ್ಲದೆ ಮಾಸ್ ಎಲಿಮೆಂಟ್ಸ್ ಇದ್ದರೆ ಇನ್ನು ಚೆನ್ನಾಗಿರುತ್ತೆ ಎನ್ನುತ್ತಾರೆ. ಆದರೆ ಯವ ರಾಜ್ ಕುಮಾರ್ ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

  English summary
  Raghavendra rajkumar son Yuvaraj Kumar debut movie will be start in 2019. That is why Yuvraj Kumar is training in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X