For Quick Alerts
  ALLOW NOTIFICATIONS  
  For Daily Alerts

  ಹಸೆಮಣೆ ಏರಿದ ಯುವರಾಜ್ ಕುಮಾರ್ - ಶ್ರೀದೇವಿ

  |
  ಶ್ರೀದೇವಿ ಭೈರಪ್ಪ ಜತೆ ಸಪ್ತಪದಿ ತುಳಿದ ಅಣ್ಣಾವ್ರ ಮೊಮ್ಮಗ | FILMIBEAT KANNADA

  ಡಾ ರಾಜ್ ಕುಮಾರ್ ಮೊಮ್ಮಗ, ನಟ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ವಿವಾಹ ಇಂದು ನೆರವೇರಿದೆ. ಯುವರಾಜ್ ಕುಮಾರ್ ತಮ್ಮ ಪ್ರೀತಿಯ ಗೆಳತಿ ಶ್ರೀದೇವಿ ಭೈರಪ್ಪ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಇಂದು ಬೆಳಗ್ಗೆ 10 ಗಂಟೆಗೆ ಕಟಕ ಲಗ್ನದಲ್ಲಿ ಮಾಂಗಲ್ಯಧಾರಣೆ ನೆರವೇರಿದೆ. ಒಗ್ಗಲಿಗರ ಸಂಪ್ರದಾಯದಂತೆ ಶಾಸ್ತ್ರಗಳು ನಡೆದಿದೆ. ಅರಮನೆ ಮೈದಾನದಲ್ಲಿ ವಿವಾಹ ಮಹೋತ್ಸವ ಜರುಗಿದೆ. ಗಣ್ಯಾತಿಗಣ್ಯರ ಜೊತೆಗೆ ಅಭಿಮಾನಿಗಳು ಸಹ ಮದುವೆಯಲ್ಲಿ ಭಾಗಿಯಾಗಿದ್ದಾರೆ.

  ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಶ್ರೀಮುರಳಿ ಸೇರಿದಂತೆ ಇಡೀ ಕುಟುಂಬ ಮದುವೆ ಸಂತಸದಲ್ಲಿ ಇದೆ. ಮದುವೆಗೆ ಬಂದ ಅತಿಥಿಗಳಿಗೆ 30 ವಿವಿಧ ಖಾದ್ಯಗಳು ಸಿದ್ಧವಾಗಿವೆ.

  ಇಂದೇ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಕಳೆದ ಕೆಲ ದಿನಗಳಿಂದ ಮದುವೆ ಸಂಭ್ರಮ ಜೋರಾಗಿದ್ದು, ಸಂಗೀತ, ಮೆಹಂದಿ ಶಾಸ್ತ್ರಗಳಲ್ಲಿ ಇಡೀ ಕುಟುಂಬ ಭಾಗಿಯಾಗಿತ್ತು.

  ಶಿವರಾಜ್ ಕುಮಾರ್ ಮಗಳ ಮದುವೆ ಕೂಡ ಇದೇ ಜಾಗದಲ್ಲಿ ನಡೆದಿದ್ದು, ಈಗ ಯುವರಾಜ್ ಮದುವೆ ಕೂಡ ಅಲ್ಲಿಯೇ ನಡೆಯುತ್ತಿದೆ.

  ಅಂದಹಾಗೆ, ಶ್ರೀದೇವಿ ಭೈರಪ್ಪ ಮೂಲತಃ ಮೈಸೂರಿನವರು. ಸಾಂಸ್ಕೃತಿಕ ನಗರದಲ್ಲಿಯೇ ಹುಟ್ಟಿ ಬೆಳೆದು, ಉನ್ನತ ಶಿಕ್ಷಣ ಮುಗಿಸಿದ್ದಾರೆ. ಇನ್ನು ಮದುವೆಯ ಬಳಿಕ ಅಣ್ಣನ ರೀತಿ ಯುವರಾಜ್ ಕುಮಾರ್ ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ.

  English summary
  Actor Raghavendra Rajkumar son Yuvaraj got married with Sridevi Byrappa today (May 26th). The wedding ceremony held palace ground bangalore

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X