For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿ 14 ರಿಂದ 'ಯುವರತ್ನ'ನ ಆಕ್ಷನ್ ಆರಂಭ

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಫೆಬ್ರವರಿ 7 ರಂದು ಅಪ್ಪು ಬಾಸ್ ತೆರೆಮೇಲೆ ಬರ್ತಿದ್ದಾರೆ.

  ಅಷ್ಟರಲ್ಲೇ ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾ ಆರಂಭವಾಗುತ್ತಿದೆ. ಹೌದು, 'ರಾಜಕುಮಾರ' ಸಿನಿಮಾ ಯಶಸ್ಸಿನ ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಶುರುವಾಗ್ತಿರುವ 'ಯುವರತ್ನ' ಚಿತ್ರ ಫೆಬ್ರವರಿ 14 ರಿಂದ ಶೂಟಿಂಗ್ ಶುರು ಮಾಡ್ತಿದೆ.

  ಅದ್ಧೂರಿಯಾಗಿ ಆರಂಭವಾಯ್ತು ಪುನೀತ್ 'ಯುವರತ್ನ'

  ಈಗಾಗಲೇ ಯುವರತ್ನ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಈಗ ಫೆಬ್ರವರಿ 14 ರಿಂದ 'ಯುವರತ್ನ' ಸಿನಿಮಾದ ಶೂಟಿಂಗ್ ಆರಂಭವಾಗುತ್ತಿದ್ದು, ಮೊದಲು ಆಕ್ಷನ್ ದೃಶ್ಯಗಳನ್ನ ಚಿತ್ರೀಕರಿಸಲಾಗ್ತಿದೆಯಂತೆ. ಎಲ್ಲಿ ಎಂಬುದರ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಬಟ್, ಇದೊಂದು ಆಕ್ಷನ್ ಯೂತ್ ಫುಲ್ ಸಿನಿಮಾ ಎಂಬುದನ್ನ ಡೈರೆಕ್ಟರ್ ಬಿಟ್ಟುಕೊಟ್ಟಿದ್ದಾರೆ.

  'ಯುವರತ್ನ' ಅಪ್ಪುಗೆ ಜೋಡಿಯಾಗ್ತಾರೆ ಸ್ಟಾರ್ ನಾಯಕಿ.!

  ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ. ಅಂದ್ಹಾಗೆ, ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 16 ವರ್ಷಗಳ ಹಿಂದೆ ತೆರೆಕಂಡಿದ್ದ 'ಅಭಿ' ಚಿತ್ರದ ಬಳಿಕ ಪುನೀತ್ ಮತ್ತೆ ಕಾಲೇಜ್ ಸ್ಟೂಡೆಂಟ್ ಆಗಿದ್ದಾರೆ.

  ಸದ್ಯಕ್ಕೆ ನಾಯಕಿ ಫೈನಲ್ ಆಗಿಲ್ಲ. ಸೌತ್ ಇಂಡಿಯಾದ ಸ್ಟಾರ್ ನಟಿಯರೊಬ್ಬರನ್ನ ಕರೆತರುವ ಪ್ರಯತ್ನ ಮಾಡಲಾಗುತ್ತಿದೆಯಂತೆ. ಆದ್ರೆ, ಯಾರು ಎಂಬುದು ಸದ್ಯಕ್ಕೆ ಗೌಪ್ಯವಾಗಿದೆ. ಇನ್ನುಳಿದಂತೆ ವಿ ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

  English summary
  Power star puneeth rajkumar starrer 'Yuvarathna' will Roll from february 14 th with a Massive Action sequence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X