Just In
Don't Miss!
- News
ಮಸ್ಕಿಯಲ್ಲಿ ಬಿಜೆಪಿ ಪರ ಮತಬೇಟೆಗೆ ಬರಲಿದ್ದಾರೆ ಮಂಗ್ಲಿ!
- Sports
ಮೊದಲ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಕಣಕ್ಕಿಳಿಯದ ಬಗ್ಗೆ ಕಾರಣ ಹೇಳಿದ ಕೋಚ್
- Automobiles
ಪ್ರಮುಖ ಕಾರು ಮಾದರಿಗಳಿಗೆ ಹೊಸ ಮಾದರಿಯ ಟೈರ್ ಮತ್ತು ಬ್ಯಾಟರಿ ಬಿಡುಗಡೆ ಮಾಡಿದ ಮಾರುತಿ ಸುಜುಕಿ
- Finance
ಏಪ್ರಿಲ್ 12ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Lifestyle
ಇಂದು ಸೋಮಾವತಿ ಅಮಾವಾಸ್ಯೆ: ಇದರ ಮಹತ್ವ ಹಾಗೂ ಪ್ರಯೋಜನಗಳು
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ವಕೀಲ್ ಸಾಬ್'ಗಾಗಿ 'ಯುವರತ್ನ'ವನ್ನು ಬಲಿ ಪಡೆದ ಹೊಂಬಾಳೆ!
ಕನ್ನಡ ಸಿನಿಮಾರಂಗದ ಅತ್ಯುತ್ತಮ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದು ಹೊಂಬಾಳೆ ಫಿಲಮ್ಸ್. ಕನ್ನಡಕ್ಕೆ ಹಲವು ಅತ್ಯುತ್ತಮ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ನೀಡಿದೆ. ಆದರೆ 'ಯುವರತ್ನ' ಸಿನಿಮಾದ ವಿಷಯದಲ್ಲಿ ಹೊಂಬಾಳೆ ಫಿಲಮ್ಸ್‌ನ ನಡೆ ಕನ್ನಡ ಚಿತ್ರಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.
ಪವನ್ ಕಲ್ಯಾಣ್ ನಟನೆಯ ತೆಲುಗಿನ 'ವಕೀಲ್ ಸಾಬ್' ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಹಕ್ಕನ್ನು ಹೊಂಬಾಳೆ ಫಿಲಮ್ಸ್ ಪಡೆದುಕೊಂಡಿದೆ. ಇದೀಗ 'ವಕೀಲ್ ಸಾಬ್'ಗಾಗಿ, ಹೊಂಬಾಳೆ ಫಿಲಮ್ಸ್ ಅವರೇ ನಿರ್ಮಾಣ ಮಾಡಿರುವ ಪುನೀತ್ ರಾಜ್‌ಕುಮಾರ್ ನಟನೆಯ 'ಯುವರತ್ನ' ಸಿನಿಮಾವನ್ನು ಬಲವಂತದ ಬಲಿ ಪಡೆಯಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ.
ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದ್ದ, ಕುಟುಂಬದವರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದ್ದ 'ಯುವರತ್ನ' ಸಿನಿಮಾವನ್ನು ಹಠಾತ್ತನೆ ಅಮೆಜಾನ್ ಪ್ರೈಂಗೆ ಮಾರಾಟ ಮಾಡಲಾಗಿದೆ. 'ಯುವರತ್ನ' ಸಿನಿಮಾ ಯಾವ-ಯಾವ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿತ್ತೊ ಬಹುತೇಕ ಅದೇ ಚಿತ್ರಮಂದಿರಗಳಲ್ಲಿ 'ವಕೀಲ್ ಸಾಬ್' ಬಿಡುಗಡೆ ಮಾಡಲಾಗುತ್ತಿದೆ.

ನಾಳೆಗೆ ಕೇವಲ 31 ಚಿತ್ರಮಂದಿರದಲ್ಲಿ 'ಯುವರತ್ನ'
ಇಂದು (ಏಪ್ರಿಲ್ 08) ಬುಕ್‌ಮೈಶೋ ಮಾಹಿತಿ ಪ್ರಕಾರ ಬೆಂಗಳೂರು ವ್ಯಾಪ್ತಿಯ 88 ಮಲ್ಟಿಫ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ 'ಯುವರತ್ನ' ಪ್ರದರ್ಶನ ಆಗುತ್ತಿದೆ. ಕೆಲವು ಚಿತ್ರಮಂದಿರಗಳಲ್ಲಿ ಎಲ್ಲಾ ಶೋಗಳು ಬಹುತೇಕ ಟಿಕೆಟ್ ಬುಕ್ ಆಗಿವೆ. ಆದರೆ 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ಆಗಲಿರುವ ಏಪ್ರಿಲ್ 09ನೇ ತಾರೀಖಿಗೆ ಕೇವಲ 31 ಚಿತ್ರಮಂದಿರದಲ್ಲಷ್ಟೆ 'ಯುವರತ್ನ' ಇರಲಿದೆ. ಅದರಲ್ಲಿಯೂ ಹಲವು ಚಿತ್ರಮಂದಿರಗಳಲ್ಲಿ ಒಂದು, ಎರಡು ಶೋ ಅನ್ನಷ್ಟೆ 'ಯುವರತ್ನ' ಸಿನಿಮಾಕ್ಕೆ ಮೀಸಲಿಡಲಾಗಿದೆ. ಇದು ಕೇವಲ ಬೆಂಗಳೂರು ನಗರ ವ್ಯಾಪ್ತಿಯ ಚಿತ್ರಮಂದಿರ, ಮಲ್ಟಿಫ್ಲೆಕ್ಸ್‌ಗಳ ಲೆಕ್ಕಾಚಾರವಷ್ಟೆ.

ಬೆಂಗಳೂರಿನಲ್ಲೇ 85ಕ್ಕೂ ಹೆಚ್ಚು ಚಿತ್ರಮಂದಿರ
'ಯುವರತ್ನ' ಸಿನಿಮಾ ಪ್ರದರ್ಶನವಾಗುತ್ತಿರುವ ಬಹುತೇಕ ಚಿತ್ರಮಂದಿರಗಳಲ್ಲಿಯೇ 'ವಕೀಲ್ ಸಾಬ್' ಸಿನಿಮಾ ನಾಳೆ (ಏಪ್ರಿಲ್ 09) ಬಿಡುಗಡೆ ಆಗುತ್ತಿದೆ. ಬುಕ್‌ಮೈ ಶೋ ಮಾಹಿತಿಯಂತೆ ಬೆಂಗಳೂರು ವ್ಯಾಪ್ತಿಯ 85 ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು 'ವಕೀಲ್ ಸಾಬ್'ಗೆ ನೀಡಲಾಗಿದೆ.

ಬೇರೆಡೆಯೂ ಇದೇ ಕತೆ
ಇದು ಬೆಂಗಳೂರು ಒಂದರ ಕತೆಯಲ್ಲ ಆಂಧ್ರ ಗಡಿಯಾದ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಗಳ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಎಲ್ಲೆಲ್ಲಿ 'ಯುವರತ್ನ' ಸಿನಿಮಾ ತೆರೆ ಕಂಡಿತ್ತೊ ಅಲ್ಲೆಲ್ಲಾ 'ವಕೀಲ್ ಸಾಬ್' ತೆರೆಗೆ ಬರಲಿದೆ. ತೆಲುಗು ಸಿನಿಮಾಗಾಗಿ ಕನ್ನಡದ ಒಳ್ಳೆಯ ಸಂದೇಶವುಳ್ಳ ಸಿನಿಮಾವನ್ನು ಬಲಿಕೊಟ್ಟಂತಾಗಿದೆ.

ಅಮೆಜಾನ್ ಪ್ರೈಂನಲ್ಲಿ 'ಯುವರತ್ನ' ಬಿಡುಗಡೆ
'ಯುವರತ್ನ' ಸಿನಿಮಾವು ಏಪ್ರಿಲ್ 09 ರಿಂದ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಉತ್ತಮ ಪ್ರದರ್ಶನ ಕಾಣುತ್ತಿದ್ದ ಸಿನಿಮಾವನ್ನು ಚಿತ್ರಮಂದಿರಗಳ ಮೇಲಿನ ನಿರ್ಬಂಧ ಇನ್ನಿತರೆ ಕಾರಣ ನೀಡಿ ಬಿಡುಗಡೆ ಆದ ಕೇವಲ ಎಂಟೇ ದಿನಕ್ಕೆ ಅಮೆಜಾನ್ ಪ್ರೈಂಗೆ ಕೊಟ್ಟಿರುವ ಬಗ್ಗೆ ಈಗಾಗಲೇ ಪುನೀತ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.