Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2023ಯಲ್ಲಿ ಮೆಗಾ ಸಿನಿಮಾಗಳ ಜೊತೆ ಬಾಕ್ಸಾಫೀಸ್ ಯುದ್ಧಕ್ಕೆ ಇಳಿಯಲಿರೋ ಜೀ ಸ್ಟುಡಿಯೋ!
2022ರಲ್ಲಿ ದಕ್ಷಿಣ ಭಾರತ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಾಡಿರೋ ಸದ್ದಿಗೆ ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್‌ಗಳು ಬೆಚ್ಚಿಬಿದ್ದಿವೆ. ಇದೂವರೆಗೂ ಬಾಲಿವುಡ್‌ನಿಂದ ಮಾತ್ರ ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಬಹುದು ಎಂದುಕೊಂಡಿದ್ದ ನಿರ್ಮಾಣ ಸಂಸ್ಥೆಗಳು ದಕ್ಷಿಣದ ಕಡೆ ಮುಖ ಮಾಡುತ್ತಿವೆ. ಇದರಲ್ಲಿ ಜೀ ಸ್ಟುಡಿಯೋ ಕೂಡ ಒಂದು.
2022ರಲ್ಲಿ ಜೀ ಸ್ಟುಡಿಯೋಸ್ ಭಾರತದಾದ್ಯಂತ ಕಂಟೆಂಟ್ ಸಿನಿಮಾಗಳ ಕಡೆ ಹೆಚ್ಚು ಹರಿಸಿತ್ತು. ಹೀಗಾಗಿ ಜೀ ರಿಲೀಸ್ ಮಾಡಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಉತ್ತಮ ಬ್ಯುಸಿನೆಸ್ ಮಾಡಿದೆ. ಇವುಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಹೆಚ್ಚು ಲಾಭ ತಂದುಕೊಟ್ಟಿವೆ.
2022ನೇ
ಟಾಪ್
10
ಭಾರತೀಯರ
ನಟ-ನಟಿಯರ
ಪಟ್ಟಿ
ರಿಲೀಸ್:
ಧನುಷ್
ನಂ
1,
ಯಶ್
ಎಷ್ಟನೇ
ಸ್ಥಾನ?
ಇದೇ ಕಾರಣಕ್ಕೆ 2023ಕ್ಕೆ ಮೆಗಾ ಪ್ಲ್ಯಾನ್ ಜೊತೆಗೆ ಅಖಾಡಕ್ಕೆ ಇಳಿಯುತ್ತಿದೆ. ಮೆಗಾ ಸಿನಿಮಾಗಳ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವುದಕ್ಕೆ ಮುಂದಾಗಿದೆ. ಅಲ್ಲದೆ ಹೊಸ ವರ್ಷಕ್ಕೆ ಯಾವ್ಯಾವ ಭಾಷೆಯಲ್ಲಿ ಯಾವ್ಯಾವ ಸಿನಿಮಾವನ್ನು ರಿಲೀಸ್ ಮಾಡಲಿದೆ ಅನ್ನೋ ಪಟ್ಟಿಯನ್ನು ರಿಲೀಸ್ ಮಾಡಿದೆ.

ಈ ವರ್ಷ ಸೌತ್ ಸಿನಿಮಾಗಳಿಂದ 400 ಕೋಟಿ ರೂ. ಬ್ಯುಸಿನೆಸ್
ಲಾಕ್‌ಡೌನ್ ಬಳಿಕ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಿತ್ತು. ಜನರು ಕಂಟೆಂಟ್ ಇರುವ ಸಿನಿಮಾಗಳ ಕಡೆಗೆ ಹೆಚ್ಚು ಆಸಕ್ತಿ ತೋರಿದ್ದರು. ಹೀಗಾಗಿ ಜೀ ಸ್ಡುಡಿಯೋ ಪ್ರೇಕ್ಷಕರ ಆಸಕ್ತಿಗೆ ತಕ್ಕಂತೆ ದಕ್ಷಿಣ ಭಾರತದಲ್ಲಿ ಬಿಗ್ ಸಿನಿಮಾಗಳನ್ನು ರಿಲೀಸ್ ಮಾಡಿದ್ದರು. ಅದರಲ್ಲಿ ಅಜಿತ್ ಅಭಿನಯದ 'ವಲಿಮೈ', 'ಕಲಪುರಂ', ತೆಲುಗು ಸಿನಿಮಾ 'ರಿಪಬ್ಲಿಕ್, 'ಇಟ್ಲು ಮರೆಡುಮಿಲಿ ಪ್ರಜಾನೀಕಂ', 'ಸೊಲೊ ಬ್ರಥುಕೆ ಸೊ ಬೆಟರ್', 'ಬಂಗಾರ್‌ರಾಜು' ಕನ್ನಡದಲ್ಲಿ 'ದೃಶ್ಯ 2', 'ಹೆಡ್ ಬುಷ್' ಹಾಗೂ 'ವೇದ' ಸಿನಿಮಾಗಳನ್ನು ರಿಲೀಸ್ ಮಾಡಿತ್ತು. ಈ ಸಿನಿಮಾಗಳಿಂದ ವಿಶ್ವದಾದ್ಯಂತ ಸುಮಾರು 400 ಕೋಟಿ ರೂ.ಯನ್ನು ಬಾಕ್ಸಾಫೀಸ್‌ನಲ್ಲಿ ಕಲೆಹಾಕಿದೆ. ಹೀಗಾಗಿ ದಕ್ಷಿಣದ ಕಡೆಗೆ ಹೆಚ್ಚು ಗಮನ ಹರಿಸಿದೆ.

2023ಯಲ್ಲಿ ರಿಲೀಸ್ ಆಗ್ತಿರೋ ಸೌತ್ ಸಿನಿಮಾ
2022ರಲ್ಲಿ ಯಶಸ್ಸು ಕಂಡಿರೋ ಜೀ ಸ್ಟುಡಿಯೋ ಹೊಸ ವರ್ಷಕ್ಕೆ ಮೆಗಾ ಸಿನಿಮಾಗಳನ್ನು ರಿಲೀಸ್ ಮಾಡೋಕೆ ಸ್ಕೆಚ್ ಹಾಕಿಕೊಂಡಿದೆ. ದಕ್ಷಿಣ ಭಾರತದಲ್ಲಿ ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅಭಿನಯದ 'ಥುನಿವು' ಸಿನಿಮಾದಿಂದ ಆರಂಭ ಆಗಲಿದೆ. ಮಲಯಾಳಂನಲ್ಲಿ ದುಲ್ಖರ್ ಸಲ್ಮಾನ್ ಅಭಿನಯದ 'ಕಿಂಗ್ ಆಫ್ ಕೋಥಾ', ಆರ್ಯ ಅಭಿನಯದ ದಥರ್‌ಬಾಷಾ ಎಂಡ್ರಾ ಮುಥುರಮಲಿಂಗಂ, ಕನ್ನಡದಲ್ಲಿ ಜಗ್ಗೇಶ್ ಸಿನಿಮಾ 'ರಂಗನಾಯಕ' ಸೇರಿದಂತೆ ಹಲವು ಸಿನಿಮಾಗಳನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ.

2021ರಲ್ಲಿ ಸಕ್ಸಸ್‌ಫುಲ್ ಸಿನಿಮಾ
2022 ಅಷ್ಟೇ ಅಲ್ಲ. 2021ರಲ್ಲೂ ಜೀ ಸ್ಟುಡಿಯೋ ನಿರ್ಮಾಣ ಮಾಡಿದ್ದ ದಕ್ಷಿಣದ ಸಿನಿಮಾಗಳಿಗೆ ಯಶಸ್ಸು ಸಿಕ್ಕಿತ್ತು. ದಕ್ಷಿಣ ಭಾರತದಲ್ಲಿಯೇ ಸುಮಾರು 10ಕ್ಕೂ ಅಧಿಕ ಯಶಸ್ವಿ ಸಿನಿಮಾಗಳನ್ನು ಜೀ ಸ್ಟುಡಿಯೋ ನೀಡಿತ್ತು. ಹೀಗಾಗಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳ ನಿರ್ಮಾಣದ ಕಡೆ ಹೆಚ್ಚು ಆಸಕ್ತಿ ತೋರಿಸಿದೆ ಎಂದು ಮೂಲಗಳು ಹೇಳುತ್ತಿವೆ.

2022 ಗೆದ್ದು ಬೀಗಿದ ಸೌತ್ ಸಿನಿಮಾಗಳು
2022ರಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೆಚ್ಚು ಲಾಭ ಗಳಿಸಿವೆ. ಅದರಲ್ಲೂ ಸ್ಯಾಂಡಲ್‌ವುಡ್ ಐದು ಮೆಗಾ ಸಿನಿಮಾಗಳನ್ನು ನೀಡಿದೆ. ಹೀಗಾಗಿ ದಕ್ಷಿಣ ಭಾರತದ ಕಡೆ ದೊಡ್ಡ ದೊಡ್ಡ ಸಂಸ್ಥೆಗಳು ಸಿನಿಮಾ ನಿರ್ಮಾಣದ ಕಡೆಗೆ ಮುಖ ಮಾಡುತ್ತಿವೆ. ಜೀ ಸ್ಟುಡಿಯೋ ಕೂಡ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡಲು ಮುಂದಾಗಿದೆ.