twitter
    For Quick Alerts
    ALLOW NOTIFICATIONS  
    For Daily Alerts

    ಒಟಿಟಿಗಳ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರಕ್ಕೆ 21 ಸಂಸದರಿಂದ ಒತ್ತಾಯ

    |

    ಒಟಿಟಿ ವಿರುದ್ಧ ಆಕ್ರೋಶ ದಿನೇ-ದಿನೇ ಹೆಚ್ಚಾಗುತ್ತಿದೆ. ಹಾದಿ ತಪ್ಪುತ್ತಿರುವ ಒಟಿಟಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು 21 ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    'ಲೈಂಗಿಕತೆ, ಹಿಂಸೆ, ನಿಂದನೆ, ಧಾರ್ಮಿಕ ಭಾವನೆಗೆ ಧಕ್ಕೆ, ಅಶ್ಲೀಲ ಭಾಷೆ ಬಳಕೆಗಳು ಒಟಿಟಿಗಳಲ್ಲಿ ಹೆಚ್ಚಾಗಿದ್ದು, ಇವುಗಳ ವಿರುದ್ಧ ಸರ್ಕಾರವು ಕ್ರಮ ಕೈಗೊಳ್ಳಬೇಕು ಅಥವಾ ಒಟಿಟಿ ಕಂಟೆಂಟ್ ಅನ್ನು ನಿಯಂತ್ರಿಸುವ ಕ್ರಮ ಕೈಗೊಳ್ಳಬೇಕು' ಎಂದು ಕೆಲವು ಸಂಸದರು ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಬಂಧನ ಭೀತಿಯಲ್ಲಿ 'ತಾಂಡವ್' ವೆಬ್ ಸರಣಿ ನಿರ್ಮಾಪಕ, ನಿರ್ದೇಶಕಬಂಧನ ಭೀತಿಯಲ್ಲಿ 'ತಾಂಡವ್' ವೆಬ್ ಸರಣಿ ನಿರ್ಮಾಪಕ, ನಿರ್ದೇಶಕ

    ಕೆಲವು ದಿನಗಳ ಹಿಂದಷ್ಟೆ ಇದೇ ವಿಷಯವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, 'ಒಟಿಟಿಗಳ ವಿರುದ್ಧ ಹಲವಾರು ದೂರುಗಳು ಬಂದಿದ್ದು, ಒಟಿಟಿಗಳಿಗೆ ಮಾರ್ಗಸೂಚಿಗಳನ್ನು ಶೀಘ್ರವಾಗಿ ಪ್ರಕಟಿಸಲಾಗುವುದು' ಎಂದಿದ್ದರು.

    ಕೆಲವೇ ದಿನಗಳಲ್ಲಿ ಮಾರ್ಗಸೂಚಿ ಪ್ರಕಟ

    ಕೆಲವೇ ದಿನಗಳಲ್ಲಿ ಮಾರ್ಗಸೂಚಿ ಪ್ರಕಟ

    'ಒಟಿಟಿಗಳ ಸಿನಿಮಾ, ವೆಬ್ ಸರಣಿಗಳ ಕುರಿತಾಗಿ ಮಾರ್ಗಸೂಚಿ ಹೊರಡಿಸಲಾಗುತ್ತಿದ್ದು, ಮಾರ್ಗಸೂಚಿ ತಯಾರಿಕೆಯ ಅಂತಿಮ ಹಂತದಲ್ಲಿ ಇದ್ದೇವೆ. ಕೆಲವೇ ದಿನಗಳಲ್ಲಿ ಮಾರ್ಗಸೂಚಿಯನ್ನು ಪ್ರಕಟಿಸಲಾಗುವುದು' ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವಾಲಯ ಹೇಳಿದೆ.

    ಸುಮಾರು 40 ಒಟಿಟಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ

    ಸುಮಾರು 40 ಒಟಿಟಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ

    ನೆಟ್‌ಫ್ಲಿಕ್ಸ್, ಅಮೆಜಾನ್, ವೂಟ್, ಆಲ್ಟ್ ಬಾಲಾಜಿ, ಸೋನಿ ಲಿವ್, ಆಹಾ ಇನ್ನೂ ಸುಮಾರು 40 ಒಟಿಟಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಒಟಿಟಿಗಳು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಡಿಯಲ್ಲಿ ನಿಯಂತ್ರಣಕ್ಕೆ ಬರುತ್ತವೆ. ಈ ಆದೇಶವನ್ನು ಕಳೆದ ವರ್ಷ ನವೆಂಬರ್ ನಲ್ಲಿ ಮಾಡಲಾಗಿದೆ.

    The Great Indian Kitchen Review: ಅಡುಗೆಮನೆಯಲ್ಲಿ ಬೆತ್ತಲಾಗುವ 'ಗಂಡಸು'The Great Indian Kitchen Review: ಅಡುಗೆಮನೆಯಲ್ಲಿ ಬೆತ್ತಲಾಗುವ 'ಗಂಡಸು'

    ತಾಂಡವ್ ವೆಬ್ ಸರಣಿ ವಿರುದ್ಧ ದೂರು

    ತಾಂಡವ್ ವೆಬ್ ಸರಣಿ ವಿರುದ್ಧ ದೂರು

    ಕೆಲವು ದಿನಗಳ ಹಿಂದಷ್ಟೆ ಅಮೆಜಾನ್ ಪ್ರೈಂ ನಲ್ಲಿ ಪ್ರಸಾರವಾದ 'ತಾಂಡವ್' ವೆಬ್ ಸರಣಿಯಲ್ಲಿ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಹಲವರು ದೂರು ನೀಡಿದ್ದರು. 'ತಾಂಡವ್' ನಿರ್ಮಾಪಕ, ನಿರ್ದೇಶಕರ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿದೆ. ಪ್ರಕರಣದ ನ್ಯಾಯಾಲಯದಲ್ಲಿದೆ.

    ಕಳೆದ ವರ್ಷ 'ಮಾರ್ಗಸೂಚಿ ಇಲ್ಲ' ಎಂದಿದ್ದರು

    ಕಳೆದ ವರ್ಷ 'ಮಾರ್ಗಸೂಚಿ ಇಲ್ಲ' ಎಂದಿದ್ದರು

    'ತಾಂಡವ್' ವಿವಾದದ ಬಳಿಕ ಒಟಿಟಿಗಳ ಮೇಲೆ ನಿಯಂತ್ರಣ ಹೇರಬೇಕು ಎಂಬ ಒತ್ತಡ ಹೆಚ್ಚಾಯಿತು. ಕಳೆದ ವರ್ಷ ನವೆಂಬರ್ ನಲ್ಲಿ 'ಒಟಿಟಿಗಳಿಗೆ ಮಾರ್ಗಸೂಚಿಗಳು ಇಲ್ಲ' ಎಂದಿದ್ದ ಕೇಂದ್ರ ಸಚಿವರು ಇದೀಗ ಒಟಿಟಿ ವಿರುದ್ಧ ದೂರುಗಳು ಹೆಚ್ಚಾದ ಕಾರಣದಿಂದ ಒಟಿಟಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಲು ನಿರ್ಧರಿಸಿದ್ದಾರೆ.

    'ತಾಂಡವ್' ವಿವಾದ: ಒಟಿಟಿಗೆ ಶೀಘ್ರ ಹೊಸ ಮಾರ್ಗಸೂಚಿ'ತಾಂಡವ್' ವಿವಾದ: ಒಟಿಟಿಗೆ ಶೀಘ್ರ ಹೊಸ ಮಾರ್ಗಸೂಚಿ

    English summary
    21 MPs ask government to take action against OTT. Information and Broadcast ministry said will release guidelines soon.
    Saturday, February 6, 2021, 18:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X