Don't Miss!
- News
ನೋಡ ಬನ್ನಿರಾ ಪರಶುರಾಮ ಥೀಮ್ ಪಾರ್ಕ್: ಸಚಿವ ಸುನಿಲ್ ಕುಮಾರ್ ಸಂದರ್ಶನ
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'KGF'ಗಿಂತ ಹೆಚ್ಚಿನ ಬೆಲೆಗೆ 'ಅಮೆಜಾನ್'ಗೆ ಸೇಲ್ ಆದ 'ಯುವರತ್ನ'
ಕಳೆದ ವಾರವಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದ್ದ 'ಯುವರತ್ನ' ಸಿನಿಮಾ 'ಅಮೆಜಾನ್ ಪ್ರೈಮ್'ನಲ್ಲಿ ಬಿಡುಗಡೆ ಆಗುತ್ತಿದೆ.
ಇಂದು (ಏಪ್ರಿಲ್ 08) ನಡೆದ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ನಟ ಪುನೀತ್ ರಾಜ್‌ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ಮಾಪಕ ವಿಜಯ್ ಕಿರಗಂದೂರು ಈ ವಿಷಯವನ್ನು ಘೋಷಿಸಿದ್ದಾರೆ. 'ಯುವರತ್ನ' ಸಿನಿಮಾ ಏಪ್ರಿಲ್ 09 ರಿಂದ ಅಮೆಜಾನ್ ಪ್ರೈಂ ನಲ್ಲಿ ಪ್ರಸಾರವಾಗಲಿದೆ.
ಉತ್ತಮ ಪ್ರದರ್ಶನ ಕಾಣುತ್ತಿರುವಾಗಲೇ ಅಮೆಜಾನ್ ನಲ್ಲಿ ಪ್ರಸಾರ ಮಾಡುವ ನಿರ್ಧಾರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೊಂದು ಕ್ಲಿಷ್ಟಕರ ಸನ್ನಿವೇಶ, ಸಿನಿಮಾ ಬಿಡುಗಡೆ ಆದಾಗಿನಿಂದಲೂ ಬಹಳ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಆದರೆ ಕೊರೊನಾ ಕಾರಣದಿಂದ ಈ ಕಷ್ಟದ ಸನ್ನಿವೇಶದಲ್ಲಿ ಸಿನಿಮಾವನ್ನು ಅಮೆಜಾನ್‌ನಲ್ಲಿ ಬಿಡುಗಡೆ ಮಾಡಬೇಕಾಯಿತು ಎಂದು ಸಿನಿಮಾತಂಡ ಹೇಳುತ್ತಿದೆ.
8
ದಿನದಲ್ಲೇ
ಅಮೇಜಾನ್ಗೆ
ಬಂದ
ಯುವರತ್ನ:
ಅಪ್ಪು
ಫ್ಯಾನ್ಸ್
ಬೇಸರ
ಬಿಡುಗಡೆಯಾಗಿ ಒಂದು ವಾರದಲ್ಲೇ ಒಟಿಟಿಯಲ್ಲಿ ಬರ್ತಿರುವ ಯುವರತ್ನ ಸಿನಿಮಾವನ್ನು ಅಮೆಜಾನ್ ಪ್ರೈಂ ಅತೀ ಹೆಚ್ಚು ಬೆಲೆಗೆ ಕೊಂಡುಕೊಂಡಿದೆ ಎನ್ನವ ಸುದ್ದಿ ಕೇಳಿಬರುತ್ತಿದೆ. ಈ ಮೂಲಕ ಕನ್ನಡದಲ್ಲಿ ಡಿಜಿಟಲ್ ರೈಟ್ಸ್ ವಿಚಾರದಲ್ಲಿ ಇದುವರೆಗೂ ದಾಖಲೆ ನಿರ್ಮಿಸಿದ್ದ ಯಶ್ ನಟನೆಯ ಕೆಜಿಎಫ್ ಸಿನಿಮಾದ ದಾಖಲೆಯನ್ನು ಯುವರತ್ನ ಚಿತ್ರ ಬ್ರೇಕ್ ಮಾಡಿದೆ.
ಅಂದಹಾಗೆ ಹೊಂಬಾಳೆ ಬ್ಯಾನರ್‌ನಲ್ಲಿ ಬಂದ ಕೆಜಿಎಫ್ ಸಿನಿಮಾವನ್ನು 18 ಕೋಟಿ ರೂ.ಗೆ ಅಮೇಜಾನ್ ಪ್ರೈಮ್ ಖರೀದಿ ಮಾಡಿತ್ತು ಎಂದು ವರದಿಯಾಗಿದೆ. ಆದರೆ ಯುವರತ್ನ ಸಿನಿಮಾ ಕೆಜಿಎಫ್‌ಗಿಂತ ಹೆಚ್ಚು ಬೆಲೆಗೆ ಸೇಲ್ ಆಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಎಷ್ಟು ಮೊತ್ತ ಎನ್ನುವುದನ್ನು ಸಿನಿಮಾತಂಡ ರಿವೀಲ್ ಮಾಡಿಲ್ಲ.
ಯುವರತ್ನ ಸಿನಿಮಾ ರಿಲೀಸ್ ಬೆನ್ನಲ್ಲೇ ಸರ್ಕಾರ ಕೊರೊನಾ ನಿಯಮದ ಪ್ರಕಾರ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಅವಕಾಶ ನೀಡಿತ್ತು. ಆದರೆ ಚಿತ್ರತಂಡ ಮತ್ತು ಇಡೀ ಚಿತ್ರರಂಗದ ಒತ್ತಡಕ್ಕೆ ಮಣಿದು ಏಪ್ರಿಲ್ 7ವರೆಗೂ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡಿತ್ತು. ಹಾಗಾಗಿ ಯುವರತ್ನ ತಂಡ ಸಿನಿಮಾವನ್ನು ಒಟಿಟಿಯಲ್ಲಿ ಪ್ರಸಾರ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಏಪ್ರಿಲ್ 9ರಿಂದ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ.