For Quick Alerts
  ALLOW NOTIFICATIONS  
  For Daily Alerts

  BBK OTT Grand Finale : ಬಿಗ್ ಬಾಸ್ ಓಟಿಟಿ ಟಾಪರ್ ಆದ ರೂಪೇಶ್ ಶೆಟ್ಟಿಗೆ ಸಿಕ್ಕ ಹಣವೆಷ್ಟು?

  |

  42 ದಿನಗಳ ಕಾಲ ನಡೆದ ಬಿಗ್ ಬಾಸ್ ಕನ್ನಡ ಮೊದಲನೇ ಒಟಿಟಿ ಆವೃತ್ತಿಗೆ ನಿನ್ನೆ ( ಸೆಪ್ಟೆಂಬರ್‌ 16 ) ಅಧಿಕೃತವಾಗಿ ತೆರೆಬಿದ್ದಿದೆ. ಈ ಚೊಚ್ಚಲ ಬಿಗ್ ಬಾಸ್ ಕನ್ನಡ ಒಟಿಟಿ ಆವೃತ್ತಿಯಲ್ಲಿ ಭಾಗವಹಿಸಿದ್ದ ಹದಿನಾರು ಸ್ಪರ್ಧಿಗಳ ಪೈಕಿ ರೂಪೇಶ್ ಶೆಟ್ಟಿ ಟಾಪರ್ ಎನಿಸಿಕೊಂಡಿದ್ದಾರೆ ಹಾಗೂ ಟಿವಿ ಬಿಗ್ ಬಾಸ್ ಸೀಸನ್ 9ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.

  ಹದಿನಾರು ಸ್ಪರ್ಧಿಗಳ ಪೈಕಿ ಜಸ್ವಂತ್, ಜಯಶ್ರೀ, ಸೋಮಣ್ಣ ಮಾಚಿಮಾಡ, ಸೋನು ಶ್ರೀನಿವಾಸ್ ಗೌಡ, ಸಾನ್ಯಾ ಅಯ್ಯರ್, ಆರ್ಯವರ್ಧನ್, ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಈ 8 ಸ್ಪರ್ಧಿಗಳು ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮೊದಲೇ ತಿಳಿಸಿದಂತೆ ಒಟಿಟಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಟಾಪ್ 4 ಸ್ಥಾನಗಳನ್ನು ಪಡೆದುಕೊಂಡಿರುವ ಸ್ಪರ್ಧಿಗಳು ಟಿವಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.

  ಆರ್ಯವರ್ಧನ್, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್ ಹಾಗೂ ರಾಕೇಶ್ ಅಡಿಗ ಟಿವಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ವೀಕ್ಷಕರಿಂದ ಹೆಚ್ಚು ಮತ ಪಡೆದುಕೊಳ್ಳದ ಜಶ್ವಂತ್, ಸೋಮಣ್ಣ ಮಾಚಿಮಾಡ, ಜಯಶ್ರೀ ಹಾಗೂ ಸೋನು ಶ್ರೀನಿವಾಸ್ ಗೌಡ ಒಟಿಟಿ ಬಿಗ್ ಬಾಸ್ ಕಾರ್ಯಕ್ರಮದ ಅಂತಿಮ ದಿನದಂದು ಎಲಿಮಿನೇಟ್ ಆಗಿ ಹೊರಬಿದ್ದಿದ್ದಾರೆ.

  ಟಾಪರ್ ಆದ ರೂಪೇಶ್ ಶೆಟ್ಟಿಗೆ ಸಿಕ್ಕ ಹಣವೆಷ್ಟು?

  ಟಾಪರ್ ಆದ ರೂಪೇಶ್ ಶೆಟ್ಟಿಗೆ ಸಿಕ್ಕ ಹಣವೆಷ್ಟು?

  ಇನ್ನು ಈ ಬಿಗ್ ಬಾಸ್ ಒಟಿಟಿ ಸೀಸನ್‌ನಲ್ಲಿ ಟಾಪರ್ ಆಗಿ ಹೊರಹೊಮ್ಮಿದ ರೂಪೇಶ್ ಶೆಟ್ಟಿ 5 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ಪಡೆದುಕೊಂಡಿದ್ದಾರೆ. ವೇದಿಕೆಯಲ್ಲಿ ರೂಪೇಶ್ ಶೆಟ್ಟಿ ಟಾಪರ್ ಎಂದು ಘೋಷಿಸಿದ ಕಿಚ್ಚ ಸುದೀಪ್ ಚೆಕ್ ನೀಡಿ ಅಭಿನಂದಿಸಿದರು.

  ರೂಪೇಶ್ ಶೆಟ್ಟಿ ಸಂತಸ, ಕುಟುಂಬಸ್ಥರ ಆನಂದಭಾಷ್ಪ

  ರೂಪೇಶ್ ಶೆಟ್ಟಿ ಸಂತಸ, ಕುಟುಂಬಸ್ಥರ ಆನಂದಭಾಷ್ಪ

  ಬಿಗ್ ಬಾಸ್ ಓಟಿಟಿ ಟಾಪರ್ ಆಗಿ ಹೊರಹೊಮ್ಮಿದ ರೂಪೇಶ್ ಶೆಟ್ಟಿ ತುಂಬಾ ಖುಷಿಯಾಗ್ತಿದೆ ಎಂದು ತಮ್ಮದೇ ಆದ ಶೈಲಿಯಲ್ಲಿ ಇಡೀ ಕರ್ನಾಟಕದ ಜನತೆಗೆ ತನಗೆ ವೋಟ್ ಮಾಡಿದ ಕಾರಣಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಹಾಗೂ ವೇದಿಕೆಯಲ್ಲಿದ್ದ ಉಳಿದ ಮೂವರು ಆಟಗಾರರು ಸಹ ನಂಬರ್ 1 ಆಗಲು ನಿಜವಾಗಿಯೂ ಅರ್ಹರಿದ್ದಾರೆ ಎಂದು ರೂಪೇಶ್ ಶೆಟ್ಟಿ ತಿಳಿಸಿದರು. ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ್ದ ರೂಪೇಶ್ ಶೆಟ್ಟಿ ಕುಟುಂಬಸ್ಥರು ಈ ಸಂದರ್ಭದಲ್ಲಿ ಆನಂದ ಭಾಷ್ಪ ಸುರಿಸಿದರು.

  ರಾಕೇಶ್ ಅಡಿಗ ನಿಜವಾದ ವಿನ್ನರ್ ಎಂದ ವೀಕ್ಷಕರು

  ರಾಕೇಶ್ ಅಡಿಗ ನಿಜವಾದ ವಿನ್ನರ್ ಎಂದ ವೀಕ್ಷಕರು

  ಇನ್ನು ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದಲ್ಲಿ ರಾಕೇಶ್ ಅಡಿಗ ವಿನ್ನರ್ ಆಗಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂಬ ಅಭಿಪ್ರಾಯ ಸಾಕಷ್ಟು ದೊಡ್ಡ ಮಟ್ಟದಲ್ಲಿ ವ್ಯಕ್ತವಾಗಿತ್ತು. ಹೀಗಾಗಿ ಕೆಲ ಬಿಗ್ ಬಾಸ್ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೇಸರ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ರಾಕೇಶ್ ಅಡಿಗ ನಿಜವಾದ ವಿನ್ನರ್ ಎಂದು ಟ್ವೀಟ್ ಮಾಡಿದ್ದಾರೆ.

  ರಾಕೇಶ್ ಟಿವಿ ಸೀಸನ್ ವಿನ್ನರ್ ಆಗ್ತಾರೆ

  ರಾಕೇಶ್ ಟಿವಿ ಸೀಸನ್ ವಿನ್ನರ್ ಆಗ್ತಾರೆ

  ಇನ್ನೂ ಕೆಲವರು ರಾಕೇಶ್ ಅಡಿಗ ಅವರಿಗೆ ಒಟಿಟಿ ಬಿಗ್ ಬಾಸ್ ಗೆಲ್ಲುವ ಎಲ್ಲ ಅರ್ಹತೆಗಳಿದ್ದರೂ ಜಯ ಸಿಗಲಿಲ್ಲ, ಆದರೂ ಪರವಾಗಿಲ್ಲ ಒಟಿಟಿ ಹೋದರೆ ಹೋಯ್ತು ಟಿವಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ರಾಕೇಶ್ ಅಡಿಗ ಅವರೇ ವಿನ್ನರ್ ಆಗಿ ಹೊರಹೊಮ್ಮುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  English summary
  BBK OTT Finale: How much prize money won by the winner Roopesh Shetty? Read on,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X