For Quick Alerts
  ALLOW NOTIFICATIONS  
  For Daily Alerts

  Bigg Boss Kannada Ott: ಚಪಾತಿಗಾಗಿ ರೂಪೇಶ್ ಶೆಟ್ಟಿ, ಅರ್ಜುನ್ ಜಗಳ!

  |

  ಬಿಗ್ ಬಾಸ್ ಸ್ಪರ್ಧಿಗಳು ಯಾರು ಎನ್ನುವ ಕುತೂಹಲಕ್ಕೆ ತರೆ ಬಿದ್ದಿದೆ. ಆಗಸ್ಟ್ 6ರಂದು ಬಿಗ್ ಬಾಸ್ ಕನ್ನಡ ಓಟಿಟಿ ಲಾಂಚ್ ಆಗಿದೆ. ಹಲವು ಭಿನ್ನ ವ್ಯಕ್ತಿತ್ವಯುಳ್ಳ ಸ್ಪರ್ಧಿಗಳು ಈ ಓಟಿಟಿ ಸೀಸನ್‌ಗಲ್ಲಿ ಭಾಗಿಯಾಗಿದ್ದಾರೆ.

  ಬಿಗ್ ಬಾಸ್ ಮನೆ ಅಂದ್ಮೇಲೆ ಅಲ್ಲಿನ ಎಲ್ಲಾ ವ್ಯಕ್ತಿತ್ವಗಳು ಒಟ್ಟಿಗೆ ಒಗ್ಗೂಡಲು ಸಾಧ್ಯವಿಲ್ಲ. ಇಲ್ಲಿ ಸೌಹಾರ್ದತೆಗಿಂತಲೂ ಸಮರವೇ ಹೆಚ್ಚಾಗಿ ಸದ್ದು ಮಾಡುತ್ತದೆ. ಇನ್ನೂ ಈ ಬಾರಿಯ ಸೀಸನ್‌ನಲ್ಲಿ ಯಾರೆಲ್ಲಾ ಜಗಳ ಆಡುತ್ತಾರೋ ಏನೋ ಎಂದುಕೊಳ್ಳುವಷ್ಟರಲ್ಲೇ ಜಗಳ ಶುರುವಾಗಿ ಬಿಟ್ಟಿದೆ.

  ವೈರಲ್ ಆಗಿದ್ದ ತನ್ನ ಬೆತ್ತಲೆ ವಿಡಿಯೋ ಬಗ್ಗೆ ಮಾತನಾಡಿದ ಸೋನು ಗೌಡವೈರಲ್ ಆಗಿದ್ದ ತನ್ನ ಬೆತ್ತಲೆ ವಿಡಿಯೋ ಬಗ್ಗೆ ಮಾತನಾಡಿದ ಸೋನು ಗೌಡ

  ಬಿಗ್ ಬಾಸ್ ಮನೆಯಲ್ಲಿ ಪದೇ, ಪದೇ ಜಗಳ ಅಗಯತ್ತಲೇ ಇದೆ. ಸ್ಪರ್ಧಿಗಳ ನಡುವೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತಿವೆ. ಸದ್ಯ ರೂಪೇಶ್ ಶೆಟ್ಟಿ ಮತ್ತು ಅರ್ಜುನ್ ರಮೇಶ್ ನಡುವೆ ಜಗಳ ಉಂಟಾಗಿದೆ. ಅದು ಊಟ ಊಟದ ವಿಚಾರಕ್ಕೆ.

  ಕಸದ ಬುಟ್ಟಿಯಲ್ಲಿ ಚಪಾತಿ!

  ಕಸದ ಬುಟ್ಟಿಯಲ್ಲಿ ಚಪಾತಿ!

  ಬಿಗ್​ ಬಾಸ್ ಮನೆಯಲ್ಲಿ ರಾತ್ರಿ ಊಟದ ಬಳಿಕ ರೂಪೇಶ್​ ಹಾಗೂ ಅರ್ಜುನ್​ ರಮೇಶ್​ ನಡುವೆ ಗಲಾಟೆ ನಡೆದಿದೆ. ರೂಪೇಶ್​ ಚಪಾತಿ ತಿನ್ನಲಾಗದೆ ಕಸದಬುಟ್ಟಿಗೆ ಬಿಸಾಡಿದ್ದಾರೆ. ಕಸದ ಬುಟ್ಟಿಯಲ್ಲಿ ಬಿಸಾಡಿರೋ ಚಪಾತಿ ನೋಡಿ ಸಿಟ್ಟಾದ ಅರ್ಜುನ್​ ರಮೇಶ್​, ಊಟ ಬಿಸಾಡಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ನಾನೇ ಎಂದು ರೂಪೇಶ್ ಉತ್ತರ ಕೊಟ್ಟಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ.

  ಪಾಸಿಟಿವ್ವೊ ನೆಗೆಟಿವ್ವೊ, ಎಲ್ಲರ ಕಣ್ಣು, ಕೆಂಗಣ್ಣು ಸೋನು ಮೇಲೆ!ಪಾಸಿಟಿವ್ವೊ ನೆಗೆಟಿವ್ವೊ, ಎಲ್ಲರ ಕಣ್ಣು, ಕೆಂಗಣ್ಣು ಸೋನು ಮೇಲೆ!

  ಊಡದ ಬೆಲೆ ಗೊತ್ತಿಲ್ಲ- ಅರ್ಜುನ್!

  ಊಡದ ಬೆಲೆ ಗೊತ್ತಿಲ್ಲ- ಅರ್ಜುನ್!

  ಚಾಪಾತಿ ಬಗ್ಗೆ ಕೇಳಿದಕ್ಕೆ ರೂಪೇಶ್ "ನಂಗೆ ತಿನ್ನಲು ಆಗಲಿಲ್ಲ ಹೀಗಾಗಿ ಬಿಸಾಡಿದೆ" ಎನ್ನುತ್ತಾರೆ. ಅವರ ಮಾತಿಗೆ ಕೋಪಗೊಂಡ ಅರ್ಜುನ್ ರಮೇಶ್, ಊಟದ ಬೆಲೆ ಗೊತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ರೂಪೇಶ್​ ಹಾಗೂ ಅರ್ಜುನ್ ನಡುವೆ ಮಾತಿಗೆ ಮಾತು ಬೆಳೆದಿದೆ. ಎಷ್ಟೋ ಜನರು ಹಸಿವಿನಿಂದ ಸಾಯುತ್ತಿರುತ್ತಾರೆ. ನೀನು ಊಟ ಬಿಸಾಡಿದ್ಯಾ ಎಂದು ಅರ್ಜುನ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಿಮ್​ ಮಾತು ವಾಪಸ್​ ತೆಗೆದುಕೊಳ್ಳಿ ಎಂದು ರೂಪೇಶ್​ ಸಿಟ್ಟಾಗಿದ್ದಾರೆ.

  ನನ್ನ ಕ್ಯಾರೆಕ್ಟರ್​ ಹಾಳು ಮಾಡಿದ್ದಾರೆ- ರೂಪೇಶ್!

  ನನ್ನ ಕ್ಯಾರೆಕ್ಟರ್​ ಹಾಳು ಮಾಡಿದ್ದಾರೆ- ರೂಪೇಶ್!

  ಪ್ರತಿಸಲ ನಾನು ಬುದ್ದಿವಾದ ಹೇಳಿಸಿಕೊಳ್ಳುವಷ್ಟು ಸಣ್ಣವನಲ್ಲ ಎಂದು ರೂಪೇಶ್​ ಕೂಗಾಡಿದ್ರು. ನನ್ನ ಕ್ಯಾರೆಕ್ಟರ್​ ಹಾಳು ಮಾಡ್ತಿದ್ದಾನೆ ಎಂದು ರೂಪೇಶ್​ ಹೇಳಿದ್ದಾರೆ. ಇದಕ್ಕೆ ಯಾರು ಯಾರ ಕ್ಯಾರೆಕ್ಟರ್​ ನನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂದು ಅರ್ಜುನ್ ರಮೇಶ್​ ಹೇಳಿದ್ರು. ಏಕವಚನದಲ್ಲಿ ಇಬ್ಬರು ಬೈಯ್ದಾಡಿಕೊಂಡಿದ್ದಾರೆ. ಅವನು ನನ್ನ ಬಗ್ಗೆ ಮಾತಾಡ್ತಿದ್ದಾನೆ ಎಂದು ರೂಪೇಶ್ ಹೇಳಿದ ಮಾತಿಗೆ ಸಿಟ್ಟಾದ ಅರ್ಜುನ್​, ನೀನು, ತಾನು ಅಂತಿದ್ದೀಯಾ ಎಂದು ಮತ್ತಷ್ಟು ಕೋಪಗೊಂಡರು ಬಳಿಕ ಬಿಗ್​ ಬಾಸ್ ಮನೆ ಮಂದಿಯೆಲ್ಲಾ ಸೇರಿ ಇಬ್ಬರ ಜಗಳ ಬಿಡಿಸಿದ್ದಾರೆ.

  ಗುರು ಜೀ, ಸೋನು ಜಗಳ!

  ಗುರು ಜೀ, ಸೋನು ಜಗಳ!

  ಬಿಗ್​ ಬಾಸ್​ ನೀಡಿದ್ದ ಟಾಸ್ಕ್​ ಆಡುತ್ತಿದ್ದ ವೇಳೆ ಉದಯ್​ರನ್ನು ಆರ್ಯವರ್ಧನ್​ ಗುರೂಜಿ ತಳ್ಳಿದ್ರಂತೆ, ಹೀಗಂತ ಉದಯ್​ ಗಲಾಟೆ ತೆಗೆದಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ನನ್ನ ಯಾಕೆ ತಳ್ಳಿದ್ರಿ ಎಂದು ಉದಯ್ ಪ್ರಶ್ನೆ ಮಾಡಿದ್ರು. ನಾನು ನಿನ್ನನ್ನು ತಳ್ಳಿಲ್ಲ ನಾನು ಗೇಮ್​ ಆಡಿದೆ ಅಷ್ಟೇ ಎಂದು ಆರ್ಯವರ್ಧನ್​ ಗುರೂಜಿ ಹೇಳಿದ್ದರು. ಇದಕ್ಕೂ ಮುನ್ನ ಸೋನು ಶ್ರೀನಿವಾಸ ಗೌಡ ಮತ್ತು ಸ್ಪೂರ್ತಿ ನಡುವೆ ಜಗಳ ಆಗಿತ್ತು.

  English summary
  Bigg Boss Kannada OTT: Roopesh Shetty, Arjun Ramesh Fight For Food At Bigg Boss Houe, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X