For Quick Alerts
  ALLOW NOTIFICATIONS  
  For Daily Alerts

  ಫೀಲಿಂಗ್‌ಗೆ ಬೆಲೆನೇ ಇಲ್ವಾ? ನಿನ್ನೆ ಫೀಲಿಂಗು ಅಂದಿದ್ದ ಸೋನು ಗೌಡ ಇಂದು ಅಣ್ಣಾ ಅಂದ್ರೆ ಹೆಂಗೆ?

  By ಫಿಲ್ಮಿಬೀಟ್ ಡೆಸ್ಕ್
  |

  ಈ ಬಿಗ್‌ ಬಾಸ್ ಮನೆಯೊಳಗೆ ಹೋದರೆ ಒಬ್ಬೊಬ್ಬರು ಒಂದೊಂದು ರೀತಿ ಆಡ್ತಾರೆ. ಇದು ಕೇವಲ ಕ್ಯಾಮರಾ ಮುಂದೆ ಮಾಡೋ ನಾಟಕನೋ? ಇಲ್ಲಾ ನಿಜನೋ ಅನ್ನೋದು ಮಾತ್ರ ಇನ್ನು ಬಿಗ್ ಬಾಸ್‌ಗೆ ಗೊತ್ತಾಗಿಲ್ಲ. ಓಟಿಟಿಯಲ್ಲಿ ಬಿಗ್ ಬಾಸ್ ಶುರುವಾಗಿ ಇನ್ನೂ ಒಂದು ವಾರನೂ ಆಗಿಲ್ಲ. ಆಗಲೇ ಸ್ಪರ್ಧಿಗಳು ತಮ್ಮ ಇನ್ನೊಂದು ಮುಖ ತೋರಿಸುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ.

  Recommended Video

  ರಾಕೇಶ್ ಗಾಗಿ ಸೋನು - ಸ್ಪೂರ್ತಿ ಕಿತ್ತಾಟ. | Bigg boss OTT *Bigg Boss

  ಬಿಗ್ ಬಾಸ್ ಕನ್ನಡ ಓಟಿಟಿಯ ಮೊದಲ ಸೀಸನ್‌ನಲ್ಲಿ 16 ಸ್ಪರ್ಧಿಗಳು ಅಖಾಡಕ್ಕಿಳಿಸಿದ್ದಾರೆ. ಇವರಲ್ಲಿ ಆರ್ಯವರ್ಧನ್, ಸೋನು ಗೌಡ, ರಾಕೇಶ್ ಅಡಿಗ ಮೊದಲ ವಾರದಲ್ಲಿಯೇ ಗಮನ ಸೆಳೆದಿದ್ದಾರೆ. ವಾರ ಕಳೆಯೋದ್ರೊಳಗೆ ಯುದ್ಧನೂ ನಡೆದಿದೆ. ಆರೋಪ-ಪ್ರತ್ಯಾರೋಪಗಳೂ ನಡೆದಿವೆ. ಜೊತೆಗೆ ಲವ್‌ ಸ್ಟೋರಿಗಳೂ ಶುರುವಾಗಿವೆ.

  ಆರ್ಯವರ್ಧನ್‌ಗೆ ಪುಟ್ಟಗೌರಿ ಪ್ರಪೋಸ್: 2 ದಿನ ಟೈಂ ಕೇಳಿದ ನಂಬರ್ ಗುರೂಜಿ!ಆರ್ಯವರ್ಧನ್‌ಗೆ ಪುಟ್ಟಗೌರಿ ಪ್ರಪೋಸ್: 2 ದಿನ ಟೈಂ ಕೇಳಿದ ನಂಬರ್ ಗುರೂಜಿ!

  ಸೋನು ಶ್ರೀನಿವಾಸ್ ಗೌಡ ಸದ್ಯ ಬಿಗ್ ಬಾಸ್ ಮನೆಯಲ್ಲಿ ಸುದ್ದಿಯಾಗುತ್ತಿದ್ದಾರೆ. ಬಡ ಬಡ ಅಂತ ಮಾಡುತ್ತಾ? ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಲೇ ಚಾಲ್ತಿಯಲ್ಲಿದ್ದಾರೆ. ಇತ್ತ ರಾಕೇಶ್ ಅಡಿಗ ಪ್ರಬುದ್ಧತೆ ತೋರುತ್ತಿದ್ದರೂ, ಫ್ಲರ್ಟ್ ಮಾಡುವ ವಿಚಾರದಲ್ಲಿ ಮುಂದಿದ್ದಾರೆ. ಸದ್ಯ ಸೋನು ಶ್ರೀನಿವಾಸ್‌ ಗೌಡಗೆ ಜೋಶ್ ಹುಡುಗನ ಮೇಲೆ ಲವ್ ಆಗಿರೋ ಹಾಗೇ ಕಾಣಿಸುತ್ತಿದೆ. ಇನ್ನೊಂದ್ಕಡೆ ಸ್ಪೂರ್ತಿಗೌಡ ವಿರುದ್ಧ ಸೇಡಿನಾಟ ಆಡಿದ್ರಾ ಅಂತ ಅನಿಸ್ತಿದೆ.

  ಮನೆಯಲ್ಲಿ ರಾಕೇಶ್ ಅಡಿಗ ಅಟ್ರ್ಯಾಕ್ಷನ್

  ಮನೆಯಲ್ಲಿ ರಾಕೇಶ್ ಅಡಿಗ ಅಟ್ರ್ಯಾಕ್ಷನ್

  ರಾಕೇಶ್ ಅಡಿಗ ನಿಧಾನವಾಗಿ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡೋಕೆ ಶುರು ಮಾಡಿದ್ದಾರೆ. ಈ ವಾರ ರಾಕೇಶ್ ಅಡಿಗ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಗಮನ ಸೆಳೆಯುವಲ್ಲಿ ಯಶಸ್ಸಿಯಾಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯೊಳಗೆ ತ್ರಿಕೋನ ಪ್ರೇಮಕಥೆ ಶುರುವಾಗಿದ್ಯಾ? ಅನ್ನೋ ಅನುಮಾವಂತೂ ಕಾಡುತ್ತಿದೆ. ರಾಕೇಶ್ ಅಡಿಗ ಹಾಗೂ ಸ್ಪೂರ್ತಿ ಗೌಡ ಮಧ್ಯೆ ಏನೋ ನಡಿತೀದೆ ಅನಿಸುತ್ತಿದೆ. ಈ ಮಧ್ಯೆನೇ ಸೋನು ಗೌಡ ಫೀಲಿಂಗು ಅಂತೇನೇನೋ ಹೇಳಿಕೊಂಡಿದ್ದಾರೆ. ಹೀಗಾಗಿ ಬಿಗ್ ಬಾಸ್‌ ಮನೆಯಲ್ಲಿ ಪ್ರೀತಿ ಆಟ ಶುರುವಾದಂತಿದೆ.

  ಬಿಗ್‌ಬಾಸ್ ಮನೆಯಲ್ಲೊಂದು ತ್ರಿಕೋನ ಪ್ರೇಮಕತೆ! ರಾಕೇಶ್ ಯಾರ ಪಾಲು?

  ಇದು ಸೋನು ಗೌಡನ ಸೇಡಿನಾಟವೇ?

  ಇದು ಸೋನು ಗೌಡನ ಸೇಡಿನಾಟವೇ?

  ರಾಕೇಶ್ ಅಡಿಗ ಸ್ವತ: ಎಲ್ಲರನ್ನೂ ಫ್ಲರ್ಟ್ ಮಾಡುತ್ತೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ಮಧ್ಯೆ ಸ್ಪೂರ್ತಿ ಗೌಡ ಹಾಗೂ ರಾಕೇಶ್ ಇಬ್ಬರೂ ಕ್ಲೋಸ್ ಆಗಿದ್ದು, ಸೋನು ಗೌಡ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ನೇರವಾಗಿ ಬಂದು " ನಿನ್ನ ಮೇಲೆ ಫೀಲಿಂಗ್ ಇದೆ" ಎಂದು ಹೇಳಿದ್ದರು. ದಿಢೀರನೇ ಸೋನು ಗೌಡ ಹೀಗ್ಯಾಕೆ ಅಂದರು ಅನ್ನೋ ಅನುಮಾನವಂತೂ ಮೂಡಿದೆ. ಕೆಲವು ದಿನಗಳ ಹಿಂದೆ ಸ್ಪೂರ್ತಿ ಗೌಡ " ನಾವು ಇಲ್ಲಿ ಆಡೋಕೆ ಬಂದಿದ್ದು, ಫೀಲಿಂಗ್ ಬಗ್ಗೆ ಮಾತಾಡೋಕೆ ಅಲ್ಲ" ಅಂತ ಖಡಕ್ ಆಗಿ ಹೇಳಿದ್ದರು. ಅದರ ಹಿಂದೆನೇ ಸ್ಪೂರ್ತಿ ಗೌಡಗೆ ಕ್ಲೋಸ್ ಆಗಿದ್ದ ರಾಕೇಶ್ ಅಡಿಗಗೆ "ಫೀಲಿಂಗು" ಅಂತ ಹೇಳಿದ್ದು ಸೇಡಿನ ಆಟವೇ ಎಂಬ ಅನುಮಾನ ಮೂಡಿದೆ.

  ರಾಕೇಶ್ ಅಡಿಗಗೆ ಅಣ್ಣಾ ಎಂದಿದ್ದೇಕೆ?

  ರಾಕೇಶ್ ಅಡಿಗಗೆ ಅಣ್ಣಾ ಎಂದಿದ್ದೇಕೆ?

  ಸೋನು ಶ್ರೀನಿವಾಸ್ ಗೌಡ ವೀಕ್ಷಕರನ್ನು ಕನ್ಫ್ಯೂಸ್ ಮಾಡುತ್ತಿದ್ದಾರೋ..? ಇಲ್ಲಾ ಇರಿಟೇಟ್ ಮಾಡುತ್ತಿದ್ದಾರೋ ಗೊತ್ತಿಲ್ಲ. ನಿನ್ನೆ ರಾಕೇಶ್ ಅಡಿಗ ಮುಂದೆ ಹೋಗಿ "ನಿನ್ನ ಮೇಲೆ ಫೀಲಿಂಗ್ ಇದೆ. ಬೇಕು ಅಂದ್ರೆ ಒಪ್ಪಿಕೋ. ಇಲ್ಲ ಬಿಡು" ಅಂತ ನೇರವಾಗಿ ಹೇಳಿದ್ರು. ಇಂದು ( ಆಗಸ್ಟ್ 12) ನೋಡಿದ್ರೆ, ರಾಕೇಶ್ ಅಡಿಗನನ್ನು ಅಣ್ಣಾ ಅಂತಿದ್ದಾರೆ. ಅದಕ್ಕೆ ಸೋನು ಗೌಡ ವರಸೆ ನೋಡಿ ಫೀಲಿಂಗ್‌ಗೆ ಬೆಲೆ ಇಲ್ವಾ? ಅನ್ನೋ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.

  ಎಲಿಮಿನೇಟ್ ಆಗೋದ್ಯಾರು?

  ಎಲಿಮಿನೇಟ್ ಆಗೋದ್ಯಾರು?

  ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸಂಚಿಕೆ ಒಂದು ವಾರ ಯಶಸ್ವಿಯಾಗಿ ಮುಗಿಸುತ್ತಿದೆ. 16 ಮಂದಿ ಸ್ಪರ್ಧಿಗಳಲ್ಲಿ ಈ ವಾರ ಬಿಗ್ ಬಾಸ್ ಮನೆಯಿಂದ ಒಬ್ಬರು ಹೊರ ಹೋಗೋದು ಪಕ್ಕಾ. ಒಟ್ಟು ಎಂಟು ಮಂದಿ ನಾಮಿನೇಟ್ ಆಗಿದ್ದಾರೆ. ಸೋನು ಗೌಡ, ಆರ್ಯವರ್ಧನ್, ಸ್ಪೂರ್ತಿ ಗೌಡ, ಜಯಶ್ರೀ ಆರಾಧ್ಯ, ನಂದಿನಿ, ಜಸ್ವಂತ್, ಕಿರಣ್ ಯೋಗೇಶ್ವರ್, ಅಕ್ಷತಾ ಕುಕ್ಕಿ ಅವರುಗಳನ್ನು ನಾಮಿನೇಟ್ ಆಗಿದ್ದು, ಯಾರು ಬಿಗ್‌ಬಾಸ್ ಮನೆಯಿಂದ ಹೊರ ಬರುತ್ತಾರೆ ಅನ್ನೋ ಕುತೂಹಲವಿದೆ.

  English summary
  Bigg Boss Kannada Ott: Sonu Gowda Revenge Against Spoorthi Gowda Over Rakesh Adiga, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X