For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಕ್ಯಾಪ್ಟೆನ್ಸಿಗಾಗಿ ಬಿಗ್ ಬಾಸ್ ಮನೆಯಲ್ಲಿ ಬಿಗ್ ಫೈಟ್!

  |

  ಬಿಗ್ ಬಾಸ್ ಸ್ಪರ್ಧಿಗಳು ಯಾರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಆಗಸ್ಟ್ 6ರಂದು ಬಿಗ್ ಬಾಸ್ ಕನ್ನಡ ಓಟಿಟಿ ಲಾಂಚ್ ಆಗಿದೆ. ಭಿನ್ನ ವ್ಯಕ್ತಿತ್ವಯುಳ್ಳ ಹಲವು ಸ್ಪರ್ಧಿಗಳು ಈ ಓಟಿಟಿ ಸೀಸನ್‌ಗಳಲ್ಲಿ ಭಾಗಿಯಾಗಿದ್ದಾರೆ.

  ಬಿಗ್ ಬಾಸ್ ಮನೆ ಅಂದ್ಮೇಲೆ ಅಲ್ಲಿನ ಎಲ್ಲಾ ವ್ಯಕ್ತಿತ್ವಗಳು ಒಟ್ಟಿಗೆ ಒಗ್ಗೂಡಲು ಸಾಧ್ಯವಿಲ್ಲ. ಇಲ್ಲಿ ಸೌಹಾರ್ದತೆಗಿಂತಲೂ, ಸಮರವೇ ಹೆಚ್ಚಾಗಿ ಸದ್ದು ಮಾಡುತ್ತದೆ. ಸಣ್ಣ ಪುಟ್ಟ ಜಗಳಗಳು ಶುರುವಾಗುತ್ತಲೇ, ಸ್ಪರ್ಧಿಗಳಿಗೆ ಟಾಸ್ಕ್‌ಗಳು ಕೂಡ ಶುರುವಾಗಿ ಬಿಟ್ಟಿವೆ.

  ಬಿಗ್ ಬಾಸ್‌ನಲ್ಲಿ ಕಿತ್ತಾಟ ಶುರು ಗುರು: ಮೊಟ್ಟೆಗಾಗಿ ಆರ್ಯವರ್ಧನ್ ಎದುರು ಸೋನು ಕಿತ್ತಾಟ!ಬಿಗ್ ಬಾಸ್‌ನಲ್ಲಿ ಕಿತ್ತಾಟ ಶುರು ಗುರು: ಮೊಟ್ಟೆಗಾಗಿ ಆರ್ಯವರ್ಧನ್ ಎದುರು ಸೋನು ಕಿತ್ತಾಟ!

  ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗಳು ನಡೆಯುವುದೇ ಒಂದು ಚೆಂದಾ, ಅದರಲ್ಲಿ ಸ್ಪರ್ಧಿಗಳು ಹೇಗೆ ಭಾಗವಹಿಸುತ್ತಾರೆ ಮತ್ತು ಗೆಲುವು, ಸೋಲಿನ ನಡುವೆ ಹೆಚ್ಚಿನ ಕುತೂಹಲ ಇರುತ್ತದೆ. ಗೆದ್ದವರಿಗೆ ಬೋನಸ್ ಸಿಕ್ಕರೆ, ಸೋತವರಿಗೆ ಕಳಪೆ ಬೋರ್ಡ್ ಪಕ್ಕಾ. ಇನ್ನು ಈ ನಡುವೆ ಬಿಗ್ ಮನೆಯಲ್ಲಿ ಕ್ಯಾಪ್ಟನ್ಸಿ ಆಯ್ಕೆ ಶುರುವಾಗಿದೆ.

  ಕ್ಯಾಪ್ಟೆನ್ಸಿ ಆಯ್ಕೆ ಪ್ರಕ್ರಿಯೆ!

  ಕ್ಯಾಪ್ಟೆನ್ಸಿ ಆಯ್ಕೆ ಪ್ರಕ್ರಿಯೆ!

  ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಯ್ಕೆ ನಡೆಯುವುದೇ ಒಂದು ಸ್ವಾರಸ್ಯಕರ ಸಂಗತಿ. ಕ್ಯಾಪ್ಟೆನ್ಸಿ ಸಿಗಬೇಕು ಎಂದರೆ ಮನೆಯಲ್ಲಿ ಎಲ್ಲರ ಮನ ಗೆಲ್ಲುವುದು ಮುಖ್ಯ ಆಗುತ್ತದೆ. ಮೊದಲ ವಾರದ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆದಿದೆ. ಬಿಗ್ ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಗೆದ್ದ ತಂಡದವರಿಗೆ ಮಾತ್ರವೇ ಕ್ಯಾಪ್ಟನ್‌ ಸ್ಪರ್ಧೆಯಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದೆ. ಈ ಪೈಕಿ ಗೆದ್ದ ತಂಡದ ಸದಸ್ಯರಲ್ಲಿ ಹೆಚ್ಚು ಓಟ್ ಪಡೆದವರಿಗೆ ಮಾತ್ರವೇ ಸ್ಪರ್ಧೆಯಲ್ಲಿ ಭಾಗಿಯಾಗಿ ಕ್ಯಾಪ್ಟನ್ ಆಗುವ ಅವಕಾಶ ಸಿಗಲಿದೆ.

  ಕ್ಯಾಪ್ಟನ್ ರೇಸ್‌ನಲ್ಲಿ ಚೈತ್ರಾ, ಅರ್ಜುನ್!

  ಕ್ಯಾಪ್ಟನ್ ರೇಸ್‌ನಲ್ಲಿ ಚೈತ್ರಾ, ಅರ್ಜುನ್!

  ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಜನ ಕ್ಯಾಪ್ಟನ್‌ಗಾಗಿ ಓಟ್ ಮಾಡಿದ್ದು, ಅರ್ಜುನ್ ಮತ್ತು ಚೈತ್ರಾ ಹಳ್ಳಿಕೇರಿ ಅವರಿಗೆ. ಈ ಇಬ್ಬರಿಗೆ ಹೆಚ್ಚಿನ ಓಟ್ ಬಂದಿವೆ. ಇಬ್ಬರಿಗು ಮನೆ ಮಂದಿ ಕಡೆಯಿಂದ ಸಮನಾದ ಓಟುಗಳು ಬಂದಿವೆ. ತಲಾ 11 ಓಟ್ ಪಡೆದ ಕಾರಣ ಟೈ ಆಗಿದೆ. ಇವರನ್ನು ಬಿಟ್ಟರೆ ನಂದಿನಿ ಮತ್ತು ಸೋಮಣ್ಣ ಇಬ್ಬರಿಗೂ ತಲಾ 7 ಓಟುಗಳು ಬಂದಿವೆ. ಹಾಗೆ ಸಾನಿಯಾ ಮತ್ತು ಉದಯ್‌ಗೆ ಕಡಿಮೆ ಓಟ್ ಬಂದಿವೆ. ಸ್ಪೂರ್ತಿಗೌಡಗೆ ಯಾವುದೇ ಓಟ್‌ ಕೂಡ ಬಂದಿಲ್ಲ.

  ಟಾಸ್ಕ್ ಗೆಲ್ಲುವವರಾರು?

  ಟಾಸ್ಕ್ ಗೆಲ್ಲುವವರಾರು?

  ಹೆಚ್ಚು ಓಟ್ ಪಡೆದ ನಾಲ್ಕು ಮಂದಿಗೆ ಕ್ಯಾಪ್ಟೆನ್ಸಿ ಟಾಸ್ಕ್ ನೀಡಲಾಯಿತು. ಈ ಟಾಸ್ಕ್‌ನಲ್ಲಿ ನಂದಿನಿ, ಸೋಮಣ್ಣ, ಚೈತ್ರಾ, ಅರ್ಜುನ್ ಭಾಗಿಯಾಗಿದ್ದಾರೆ. ವೃತ್ತದಲ್ಲಿ ನಂಬರ್‌ಗಳನ್ನು ಇಟ್ಟು. ಆ ನಂಬರ್‌ಗಳಲ್ಲಿ ಹೆಚ್ಚು ನಂಬರ್ ಸಂಗ್ರಹಿಸುವ ಸ್ಪರ್ಧಿ ಮನೆಯ ಕ್ಯಾಪ್ಟನ್ ಆಗುತ್ತಾರೆ ಎನ್ನುವ ಟಾಸ್ಟ್ ಇತ್ತು. ಇದರಲ್ಲಿ ಎಲ್ಲರೂ ಸ್ಪೋರ್ಟಿವ್ ಆಗಿ ಆಟವಾಡಿದ್ದಾರೆ. ದೈಹಿಕವಾಗಿ ತೊಂದರೆ ಆದರೂ ಆಟವಾಡಿ ಪಟ್ಟು ಬಿಡದೇ ಎಲ್ಲರೂ ಆಡಿದ್ದಾರೆ.

  ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಯಾರು?

  ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಯಾರು?

  ಬಿಗ್ ಬಾಸ್ ಮನೆಗೆ ಬರುವ ಸ್ಪರ್ಧಿಗಳಲ್ಲಿ ಮನೆಯ ಕ್ಯಾಪ್ಟನ್ ಯಾರಾಗುತ್ತಾರೆ ಎನ್ನುವ ಕುತೂಹಲ ಒಂದು ಕಡೆ ಆದರೆ, ಕ್ಯಾಪ್ಟನ್ ಆಗುವ ಆಸೆ ಮನೆಯ ಎಲ್ಲರಿಗೂ ಇದ್ದೇ ಇರುತ್ತದೆ. ಮನೆಯಲ್ಲಿ ಎಲ್ಲರೂ ಕ್ಯಾಪ್ಟನ್ ಆಗುವ ತವಕದಲ್ಲಿ ಇರುತ್ತಾರೆ. ಆಟದ ಬರದಲ್ಲಿ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ ಅರ್ಜುನ್‌. ಹಾಗಾಗಿ ಸದ್ಯಕ್ಕೆ ತಾತ್ಕಾಲಿಕವಾಗಿ ಈ ಟಾಸ್ಕ್ ನಿಲ್ಲಿಸಲಾಗಿದೆ. ಆದರೆ ಯಾರು ಮನೆಯ ಮೊದಲ ಕ್ಯಾಪ್ಟನ್ ಆಗುತ್ತಾರೆ ಎನ್ನುವುದನ್ನು ನೋಡಬೇಕಿದೆ.

  Recommended Video

  ಗುರೂಜಿ ಮೇಲೆ ಉದಯ್ ಚೀರಾಡಿದ್ದು ಯಾಕೆ? | Bigg boss OTT | Aaryavardhan | Uday *Bigg Boss
  English summary
  Who Is Become First Captain Of Bigg Boss kannada ott Season 1 , Know More,
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X