ಪ್ರತಿಷ್ಠಿತ 'ಎಮಿ' ಪ್ರಶಸ್ತಿ ಗೆದ್ದುಕೊಂಡ ವೆಬ್ ಸರಣಿ 'ಡೆಲ್ಲಿ ಕ್ರೈಂ'
ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಪ್ರಸಾರವಾದ 'ಡೆಲ್ಲಿ ಕ್ರೈಂ' ವೆಬ್ ಸರಣಿಯು ಪ್ರತಿಷ್ಠಿತ ಎಮಿ ಪ್ರಶಸ್ತಿ 2020 ಗೆದ್ದುಕೊಂಡಿದೆ.
ಟಿವಿ ಶೋ, ವೆಬ್ ಸರಣಿಗಳ ಆಸ್ಕರ್ ಎಂದು ಪರಿಗಣಿತವಾಗುವ 'ಎಮಿ' ಯಲ್ಲಿ ಅತ್ಯುತ್ತಮ ಡ್ರಾಮಾ ಸರಣಿ ವಿಭಾಗದಲ್ಲಿ 'ಡೆಲ್ಲಿ ಕ್ರೈಂ' ಪ್ರಶಸ್ತಿಗೆ ಭಾಜನವಾಗಿದೆ.
ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕತೆ ಹೊಂದಿದ್ದ 'ಡೆಲ್ಲಿ ಕ್ರೈಂ' ಅನ್ನು ರಿಚಿ ಮೆಹ್ತಾ ನಿರ್ದೇಶಿಸಿದ್ದರು. ಶಫಾಲಿ ಶಾ, ರಸಿಕಾ ದುಗ್ಗಲ್, ಅದಿಲ್ ಹಸಿನ್, ರಾಜೇಶ್ ತೈಲಾಂಗ್ ಇನ್ನೂ ಹಲವರು ಈ ವೆಬ್ ಸರಣಿಯಲ್ಲಿ ನಟಿಸಿದ್ದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಶಸ್ತಿ ಸಮಾರಂಭ ಜರುಗಿದ್ದು, ಪ್ರಶಸ್ತಿಗೆ ಆಯ್ಕೆಯಾದ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ರಿಚಿ ಮೆಹ್ತಾ, ಈ ಪ್ರಶಸ್ತಿಯನ್ನು ನಿರ್ಭಯಾಳ ತಾಯಿ ಆಶಾ ದೇವಿ ಹಾಗೂ ನಿರ್ಭಯಾಗೆ ಅರ್ಪಣೆ ಮಾಡಿದರು.
Recommended Video
ಈ ಸರಣಿಯು ಮಹಿಳೆಯರಿಂದಲೇ ಆಗಿರುವುದು, ಈ ಸರಣಿಗೆ ಹಣ ಹೂಡಿದ್ದು, ಬಿಡುಗಡೆ ಮಾಡಿದ್ದು ಮಹಿಳೆ, ಈ ಪ್ರಕರಣದಲ್ಲಿ ಕೆಲಸ ಮಾಡಿದ್ದು ಮಹಿಳೆಯರು. ಆ ಎಲ್ಲಾ ಮಹಿಳೆಯರಿಗೆ ಈ ಸಂದರ್ಭದಲ್ಲಿ ಧನ್ಯವಾದ ಎಂದು ರಿಚಿ ಮೆಹ್ತಾ ಹೇಳಿದ್ದಾರೆ.


Click it and Unblock the Notifications











