Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಧನಂಜಯ್ 'ಹೆಡ್ ಬುಷ್' ಓಟಿಟಿ ಬಿಡುಗಡೆ ದಿನಾಂಕ ಪ್ರಕಟ; ಯಾವಾಗ, ಎಲ್ಲಿ? ಇಲ್ಲಿದೆ ಮಾಹಿತಿ
2021ರಲ್ಲಿ ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ನಲ್ಲಿ ಮಿಂಚಿದ್ದ ಡಾಲಿ ಧನಂಜಯ್ ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಮೊದಲ ಚಿತ್ರದಲ್ಲೇ ಗೆದ್ದು ಫಸ್ಟ್ ಬಾಲ್ ಸಿಕ್ಸರ್ ಚಚ್ಚಿದ್ದರು. ಆದರೆ 2022 ಮಾತ್ರ ಧನಂಜಯ್ ಪಾಲಿಗೆ ನೆಮ್ಮದಿಯ ವರ್ಷವಂತೂ ಆಗಿರಲಿಲ್ಲ. ಈ ವರ್ಷ ತೆರೆಕಂಡ ಧನಂಯ್ ನಟನೆಯ ಚಿತ್ರಗಳೆಲ್ಲಾ ಹೇಳಿಕೊಳ್ಳುವಂತಹ ಯಶಸ್ಸು ಗಳಿಸುವಲ್ಲಿ ಸೋತವು.
ಅದರಲ್ಲಿಯೂ ಮುಖ್ಯವಾಗಿ ಧನಂಜಯ್ ನಿರ್ಮಾಣದ ಎರಡನೇ ಚಿತ್ರ ಬಹು ನಿರೀಕ್ಷಿತ ಹೆಡ್ ಬುಷ್ ನಿರೀಕ್ಷೆ ತಲುಪುವಲ್ಲಿ ವಿಫಲವಾದದ್ದು ದೊಡ್ಡ ಹಿನ್ನಡೆ ಎಂದೇ ಹೇಳಬಹುದು. ಡಾನ್ ಜಯರಾಜ್ ಜೀವನಾಧಾರಿತ ಚಿತ್ರವಾಗಿದ್ದ ಈ ಚಿತ್ರದಲ್ಲಿ ಧನಂಜಯ್ ಜಯರಾಜ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ರೌಡಿಸಂ ಚಿತ್ರಗಳ ಪ್ರೇಮಿಗಳು ಮೊದಲ ದಿನ ಚಿತ್ರ ವೀಕ್ಷಿಸಿ ಸೂಪರ್ ಎಂದಿದ್ದರು.
ಆದರೆ ನಂತರದ ದಿನಗಳಲ್ಲಿ ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆತರುವಲ್ಲಿ ಸೋತಿತ್ತು. ಜತೆಗೆ ಚಿತ್ರದಲ್ಲಿನ ಕೆಲ ದೃಶ್ಯಗಳಿಂದ ಉಂಟಾದ ವಿವಾದಗಳೂ ಸಹ ಚಿತ್ರದ ಮೇಲೆ ಪರಿಣಾಮ ಬೀರಿದವು. ಚಿತ್ರದಲ್ಲಿ ವೀರಗಾಸೆಗೆ ಅವಮಾನಿಸಲಾಗಿದೆ ಹಾಗೂ ಕರಗಕ್ಕೆ ಅವಮಾನಿಸಲಾಗಿದೆ ಎಂಬ ಕಾರಣಕ್ಕೆ ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಯಿತು ಹಾಗೂ ಚಿತ್ರಮಂದಿರಗಳಿಗೆ ನುಗ್ಗಿ ಡಾಲಿ ಕಟ್‌ಔಟ್‌ಗೆ ಮಸಿಯನ್ನೂ ಸಹ ಬಳಿಯಲಾಗಿತ್ತು. ಹೀಗಾಗಿ ಚಿತ್ರಮಂದಿರದಲ್ಲಿ ನಿರೀಕ್ಷಿಸಿದ್ದ ಯಶಸ್ಸನ್ನು ಗಳಿಸುವಲ್ಲಿ ವಿಫಲವಾದ ಹೆಡ್ ಬುಷ್ ಚಿತ್ರ ಇದೀಗ ಓಟಿಟಿಗೆ ಬರುತ್ತಿದೆ.

ಜೀ ಫೈವ್‌ನಲ್ಲಿ ಹೆಡ್ ಬುಷ್
ಡಾಲಿ ಧನಂಜಯ್ ನಟನೆಯ ಹಾಗೂ ನಿರ್ಮಾಣದ ಹೆಡ್ ಬುಷ್ ಚಿತ್ರವನ್ನು ಜೀ ಸ್ಟುಡಿಯೋಸ್ ಖರೀದಿಸಿ ಬಿಡುಗಡೆಗೊಳಿಸಿತ್ತು. ಇನ್ನು ಚಿತ್ರದ ಓಟಿಟಿ ಹಕ್ಕನ್ನೂ ಸಹ ಜೀ ಸಂಸ್ಥೆಯೇ ಖರೀದಿಸಿದ್ದು, ಚಿತ್ರವು ಜೀ ಫೈವ್ ಅಪ್ಲಿಕೇಶನ್‌ನಲ್ಲಿ ಸ್ಟ್ರೀಮ್ ಆಗಲಿದೆ. ಇದೇ ತಿಂಗಳ ಅಂದರೆ ಜನವರಿ 13ರಂದು ಹೆಡ್ ಬುಷ್ ಜೀ ಫೈವ್ ಅಪ್ಲಿಕೇಶನ್‌ನಲ್ಲಿ ಪ್ರಸಾರವಾಗಲಿದೆ.

ಆರೂ ಚಿತ್ರಗಳೂ ನಿರೀಕ್ಷೆ ಮುಟ್ಟಲಿಲ್ಲ
2022ರಲ್ಲಿ ಧನಂಜಯ್ ನಟನೆಯ ಒಟ್ಟು ಆರು ಚಿತ್ರಗಳು ಬಿಡುಗಡೆಗೊಂಡವು. ಮೊದಲಿಗೆ ಟ್ವೆಂಟಿ ಒನ್ ಅವರ್ಸ್ ಎಂಬ ಚಿತ್ರದ ಮೂಲಕ ಹೀನಾಯವಾಗಿ ಸೋತ ಧನಂಜಯ್ ನಂತರ ರಿಮೇಕ್ ಚಿತ್ರಗಳಾದ ಬೈರಾಗಿ ಹಾಗೂ ಮಾನ್ಸೂನ್ ರಾಗ ಚಿತ್ರಗಳಲ್ಲಿ ನಟಿಸಿ ಕೈ ಸುಟ್ಟುಕೊಂಡರು. ಬೈರಾಗಿ ತಮಿಳಿನ ಕಡಗು ಚಿತ್ರದ ರಿಮೇಕ್ ಆದರೆ, ಮಾನ್ಸೂನ್ ರಾಗ ತೆಲುಗಿನ ಕೇರ್ ಆಫ್ ಕಾಂಚೆರಪಾಲೆಂ ಚಿತ್ರದ ರಿಮೇಕ್. ಇನ್ನುಳಿದಂತೆ ತೋತಾಪುರಿ ಹಾಗೂ ಹೆಡ್ ಬುಷ್ ನಿರೀಕ್ಷೆ ತಲುಪುವಲ್ಲಿ ವಿಫಲವಾದರೆ, ವರ್ಷಾಂತ್ಯದಲ್ಲಿ ಬಿಡುಗಡೆಯಾದ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಒಳ್ಳೆಯ ವಿಮರ್ಶೆ ಪಡೆದುಕೊಂಡರೂ ಸಹ ಜನರು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಕ್ಕೆ ತೆರಳುತ್ತಿಲ್ಲ.

ಧನಂಜಯ್ ಮುಂದಿನ ಚಿತ್ರಗಳು
ಒಂದೆಡೆ ಜನವರಿ 13ರಂದು ಹೆಡ್ ಬುಷ್ ಓಟಿಟಿಯಲ್ಲಿ ಬಿಡುಗಡೆಯಾದರೆ ಧನಂಜಯ್ ಸಾಹಿತ್ಯ ಬರೆದಿರುವ ಆರ್ಕೆಸ್ಟ್ರಾ ಮೈಸೂರು ಚಿತ್ರ ಜನವರಿ 12ರಂದು ತೆರೆಗೆ ಬರಲಿದೆ. ಇನ್ನು ಈ ಚಿತ್ರದ ಬಳಿಕ ಡಾಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ನಟಿಸಿರುವ ಹೊಯ್ಸಳ ಚಿತ್ರ ಮಾರ್ಚ್ 30ರಂದು ತೆರೆಗೆ ಬರಲಿದೆ ಹಾಗೂ ಈ ಚಿತ್ರ ಧನಂಜಯ್‌ಗೆ ಕಮ್‌ಬ್ಯಾಕ್ ಚಿತ್ರವಾಗಲಿದೆ ಎಂಬ ಅಭಿಪ್ರಾಯವನ್ನು ಸಿನಿ ರಸಿಕರು ವ್ಯಕ್ತಪಡಿಸಿದ್ದಾರೆ.