Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೆಕ್ಸ್ ಅಂದರೆ ತಪ್ಪಂತೆ, ಆದರೆ ರೇಪ್ ಅಂದರೆ ಸರಿಯೇ?: ಕಿಡಿ ಕಾರಿದ ನಿರ್ಮಾಪಕಿ
ವೆಬ್ ಸಿರೀಸ್ ಟ್ರಿಪಲ್ ಎಕ್ಸ್-2ದಲ್ಲಿ ಸೇನೆಯನ್ನು ಕೀಳಾಗಿ ಚಿತ್ರಿಸಲಾಗಿದ್ದು, ಇಲ್ಲಿ ಸೆಕ್ಸ್ಅನ್ನು ವೈಭವೀಕರಿಸಲಾಗಿದೆ ಎಂದು ನಿರ್ಮಾಪಕಿ ಏಕ್ತಾ ಕಪೂರ್ ಹಾಗೂ ಅವರ ತಾಯಿ ಶೋಭಾ ಕಪೂರ್ ವಿರುದ್ಧ ಭಾರತೀಯ ಸೇನೆಯ ಕೆಲವು ಮಾಜಿ ಸೈನಿಕರು ಪೊಲೀಸರಿಗೆ ದೂರು ನೀಡಿದ್ದರು. ಈ ವೆಬ್ ಸೀರೀಸ್ ತನ್ನ ಕಂಟೆಂಟ್ ಕಾರಣಗಳಿಂದ ವಿವಾದ ಸೃಷ್ಟಿಸಿದ್ದು, ಏಕ್ತಾ ಕಪೂರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಏಕ್ತಾ ಕಪೂರ್ ಮೌನ ಮುರಿದಿದ್ದು, ವೆಬ್ ಸೀರೀಸ್‌ನಲ್ಲಿನ ಎಲ್ಲ ಆಕ್ಷೇಪಾರ್ಹ ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ತಮ್ಮ ವೆಬ್ ಸೀರೀಸ್ ಮೂಲಕ ಯಾರ ಭಾವನೆಗಳಿಗೆ ಧಕ್ಕೆಯಾಗಿದೆಯೋ ಅವರೆಲ್ಲರ ಕ್ಷಮೆ ಯಾಚಿಸುವುದಾಗಿ ಹೇಳಿದ್ದಾರೆ. ಮುಂದೆ ಓದಿ...
ಸೆಕ್ಸ್
ದೃಶ್ಯಗಳ
ಮೂಲಕ
ಸೇನೆಗೆ
ಅವಮಾನ:
ಏಕ್ತಾ
ಕಪೂರ್
ವಿರುದ್ಧ
ದೂರು

ದೃಶ್ಯಗಳನ್ನು ಡಿಲೀಟ್ ಮಾಡಿದ್ದೇವೆ
'ಎಫ್‌ಐಆರ್ ದಾಖಲಾಗಿದೆ ಎನ್ನುವುದು ತಿಳಿಯುತ್ತಿದ್ದಂತೆಯೇ ನಾವು ಆ ಕಂಟೆಂಟ್‌ಗಳನ್ನು ಡಿಲೀಟ್ ಮಾಡಿದ್ದೇವೆ. ಕಂಟೆಂಟ್ ಆಚೆಗೆ ಸೇನಾಧಿಕಾರಿಗಳ ಕ್ಷಮೆ ಕೋರಲು ನಾನು ಹಿಂದೇಟು ಹಾಕುವುದಿಲ್ಲ. ಏಕೆಂದರೆ ನಮಗೆ ಅವರ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ನನಗೆ ಬಹಳ ಕಿರಿಕಿರಿ ಉಂಟುಮಾಡುತ್ತಿರುವುದು ಸೈಬರ್ ದಾಳಿ' ಎಂದು ತಿಳಿಸಿದ್ದಾರೆ.

ಅತ್ಯಾಚಾರದ ಬೆದರಿಕೆ
'ವರ್ಷದ ದೇಶಭಕ್ತ ಎಂದು ತನ್ನನ್ನು ತಾನು ಭಾವಿಸಿಕೊಂಡಿರುವ ವ್ಯಕ್ತಿಯೊಬ್ಬ ಈ ವಿಚಾರದಲ್ಲಿ ಮುಂದುವರಿದು ನನ್ನ ತಾಯಿಯನ್ನು ನಿಂದಿಸಿದ, ನನ್ನನ್ನು ಬೈಯ್ದ. ಸಾಮಾಜಿಕ ವೇದಿಕೆಯಲ್ಲಿಯೇ ಬಹಿರಂಗವಾಗಿ ಈಗ ನನಗೆ ಅತ್ಯಾಚಾರದ ಬೆದರಿಕೆ ಹಾಕುತ್ತಿದ್ದಾನೆ'.
ಜನಪ್ರಿಯ
ಸೀರಿಯಲ್
'ನಾಗಿನ್'
ಸಿನಿಮಾ
ಮಾಡಲು
ಬಯಸಿದ್ದರು
ಏಕ್ತಾ
ಕಪೂರ್,
ಆದರೆ...

ಅತ್ಯಾಚಾರ ಸರಿಯೇ?
'ಸೇನೆ ಅಥವಾ ಲೈಂಗಿಕತೆಯ ವಸ್ತುವಿನ ವಿಚಾರಕ್ಕೆ ಬೆದರಿಕೆ ಉಳಿದಿಲ್ಲ. ಏಕೆಂದರೆ ವ್ಯಂಗ್ಯವೆಂದರೆ ಲೈಂಗಿಕತೆಯ ವಸ್ತುವನ್ನು ಮಾಡಿದ್ದಕ್ಕಾಗಿ ಒಬ್ಬ ಮಹಿಳೆಯನ್ನು, ಆಕೆಯ ಮಗನನ್ನು ಮತ್ತು 71 ವರ್ಷದ ವೃದ್ಧ ತಾಯಿಯನ್ನೂ ಅತ್ಯಾಚಾರ ಮಾಡಲು ಬಯಸಿದ್ದೀರಿ. ಇದರ ಅರ್ಥ ಸೆಕ್ಸ್ ಎಂದರೆ ಕೆಟ್ಟದ್ದು, ಆದರೆ ಅತ್ಯಾಚಾರ ಎಂದರೆ ಸರಿಯೇ?' ಎಂದು ಏಕ್ತಾ ಪ್ರಶ್ನಿಸಿದ್ದಾರೆ.

ತಪ್ಪನ್ನು ಸರಿ ಮಾಡಿದ್ದೇವೆ
'ನಾನು ಬಹಳ ಹಿಂದೆಯೇ ಕ್ಷಮೆ ಕೇಳುತ್ತಿದ್ದೆ. ಏಕೆಂದರೆ ನನಗದು ದೊಡ್ಡ ಸಂಗತಿಯಲ್ಲ. ಕ್ಷಮೆ ಕೇಳುವುದು ಸಣ್ಣ ಸಂಗತಿ. ನಾನು ಮಾಡುವುದರಲ್ಲಿ ಸೇನೆಗೆ ಗೌರವ ಇದ್ದೇ ಇರುತ್ತದೆ. ಅದು ಚಿತ್ರಿತವಾದ ಪಾತ್ರ. ಇದು ನಮ್ಮ ಕಡೆಯಿಂದ ಆದ ತಪ್ಪು ಮತ್ತು ಅದನ್ನು ಸರಿಪಡಿಸಿದ್ದೇವೆ. ಈಗ ನಾನು ಸೈಬರ್ ದಾಳಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೇನೆ' ಎಂದು ಹೇಳಿದ್ದಾರೆ.
''ಬಾಲ್ಯದಲ್ಲಿಯೇ
ಅತ್ಯಾಚಾರಕ್ಕೆ
ಒಳಗಾಗಿದ್ದೆ''
ತೆಲುಗು
ಹಾಸ್ಯ
ನಟ
ಹೇಳಿಕೆ

ನಿಮ್ಮಿಂದ ಸಾಧ್ಯವಿಲ್ಲ
'ನನ್ನ ನಗ್ನ ಚಿತ್ರಗಳನ್ನು ತೆಗೆಯಲು ಅವರು ಬಯಸಿದ್ದರೆ, ಅಂತರ್ಜಾಲದಲ್ಲಿ ನನ್ನ ನಗ್ನ ಚಿತ್ರಗಳನ್ನು ಹಾಕಲು ಬಯಸಿದ್ದರೆ, ನನ್ನನ್ನು ವೇಶ್ಯೆ ಎಂದು ಕರೆಯಲು ಬಯಸಿದ್ದರೆ, ನಾಳೆ ಅವರು ಯಾವ ಮಹಿಳೆಗೆ ಬೇಕಾದರೂ ಹೀಗೆ ಮಾಡಬಹುದು. ನೀವು ನನ್ನನ್ನು ನೆಲಕ್ಕೆ ಬಗ್ಗಿಸಲು ಬಯಸಿದ್ದೀರಾ? ನಿಮಗೆ ಖಂಡಿತಾ ಆ ಅವಕಾಶ ಸಿಗುವುದಿಲ್ಲ' ಎಂದು ತಮ್ಮ ವಿರುದ್ಧ ಅಶ್ಲೀಲ ಚಿತ್ರಗಳನ್ನು, ಮಾತುಗಳನ್ನು ಹಂಚಿಕೊಳ್ಳುತ್ತಿರುವ ಜನರ ವಿರುದ್ಧ ಕಿಡಿಕಾರಿದ್ದಾರೆ.