twitter
    For Quick Alerts
    ALLOW NOTIFICATIONS  
    For Daily Alerts

    ಭಾರತದಲ್ಲಿ ನೆಟ್‌ಫ್ಲಿಕ್ಸ್‌ಗಿಂತ 'ಟ್ವಿಟರ್' ದುಬಾರಿ: ನೆಟ್‌ಫ್ಲಿಕ್ಸ್‌ಗೆ ₹649.. ನೀಲಿ ಟಿಕ್‌ಗೆ ಎಷ್ಟು?

    |

    ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಅದರಲ್ಲೂ ಟ್ವಿಟರ್ ಅನ್ನು ಖರೀದಿ ಮಾಡಿದ ದಿನದಿಂದ ಎಲ್ಲಾ ಕಡೆಗೆ ಮಸ್ಕ್ ಬಗ್ಗೆನೇ ಚರ್ಚೆ. ಟ್ವಿಟರ್‌ನಲ್ಲಿ ನೀಲಿ ಟಿಕ್‌ಗೆ ಹಣ ಕಟ್ಟುವ ವಿಷಯದಿಂದ ಹಿಡಿದು ತನ್ನ ಸಿಬ್ಬಂದಿಗಳನ್ನು ಮನೆಗೆ ಕಳಿಸಿರೋವರೆಗೂ ಈ ಚರ್ಚೆ ನಡೆಯುತ್ತಲೇ ಇದೆ.

    ಎಲಾನ್ ಮಸ್ಕ್ ಟ್ವಿಟರ್ ನೀಲಿ ಟಿಕ್‌ಗೆ ಬೆಲೆ ನಿಗದಿ ಮಾಡಿದ್ದಲ್ಲಿಂದ ಟ್ರೋಲ್ ಆಗುತ್ತಿದ್ದಾರೆ. ವಿಶ್ವದ ಹಲವಡೆ ಎಲಾನ್ ಮಸ್ಕ್ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಅದೇ ಇನ್ನೊಂದು ಕಡೆ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

    ಪ್ರಭಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ನೆಟ್‌ಫ್ಲಿಕ್ಸ್‌: ಕಾರಣ ಆ ವಿಡಿಯೋಪ್ರಭಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ನೆಟ್‌ಫ್ಲಿಕ್ಸ್‌: ಕಾರಣ ಆ ವಿಡಿಯೋ

    ಆರಂಭದಲ್ಲಿ ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾದಲ್ಲಿ ಟ್ಟಿಟರ್ ನೀಲಿ ಟಿಕ್‌ಗೆ ಬೆಲೆಯನ್ನು ಘೋಷಣೆ ಮಾಡಿದ್ದರು. ಆದ್ರೀಗ ಭಾರತದಲ್ಲೂ ಬೆಲೆಯನ್ನು ನಿಗದಿ ಮಾಡಲಾಗಿದೆ. ಈ ಬೆಲೆಯ ಬಗ್ಗೆ ಭಾರತದಲ್ಲಿ ದೊಡ್ಡ ಮಟ್ಟಿಗೆ ಚರ್ಚೆಯಾಗುತ್ತಿದೆ.

    ಟ್ವಿಟರ್ ನೀಲಿ ಟಿಕ್‌ಗೆ ಎಷ್ಟು ಕೊಡಬೇಕು?

    ಟ್ವಿಟರ್ ನೀಲಿ ಟಿಕ್‌ಗೆ ಎಷ್ಟು ಕೊಡಬೇಕು?

    ಸೆಲೆಬ್ರೆಟಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳು ಟ್ವಿಟರ್ ಅಕೌಂಟ್ ಅನ್ನು ಹೊಂದಿದೆ. ಟ್ವಿಟರ್ ಮೈಕ್ರೋ ಬ್ಲಾಗಿಂಗ್‌ ಸೈಟ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲ ಕಿಡಿಗೇಡಿಗಳು ಇಂತಹ ಸೆಲೆಬ್ರೆಟಿಗಳ ಹೆಸರಲ್ಲಿ ಫೇಕ್ ಅಕೌಂಟ್ ತೆರೆದು ಬಳಸುತ್ತಿದ್ದರು. ಈ ಕಾರಣಕ್ಕೆ ಟ್ಟಿಟರ್ ನೀಲಿ ಟಿಕ್ ಅನ್ನು ಪರಿಚಯಿಸಿತ್ತು. ಈ ಮೂಲಕ ನೀಲಿ ಟಿಕ್ ಇರುವ ಟ್ವಿಟರ್ ಖಾತೆ ಅಧಿಕೃತ ಎಂದು ನಂಬಬಹುದಾಗಿತ್ತು. ಈಗ ಎಲಾನ್ ಮಸ್ಕ್ ಟ್ವಿಟರ್ ಕೊಂಡು ಕೊಂಡ ಬಳಿಕ ಆ ನೀಲಿ ಟಿಕ್‌ಗೆ ಬೆಲೆ ಕಟ್ಟಬೇಕಿದೆ. ಸದ್ಯ ಭಾರತದಲ್ಲಿ ಈ ನೀಲಿ ಟಿಕ್‌ನ ಬೆಲೆ ತಿಂಗಳಿಗೆ ₹719 ಎಂದು ನಿಗದಿಯಾಗಿದೆ. ಈ ಬೆಲೆನೇ ಈಗ ಭಾರತದಲ್ಲಿ ಟ್ರೋಲ್ ಆಗುತ್ತಿದೆ.

    ನೆಟ್‌ಫ್ಲಿಕ್ಸ್‌ಗಿಂತ ಟಿಕ್ ದುಬಾರಿ

    ನೆಟ್‌ಫ್ಲಿಕ್ಸ್‌ಗಿಂತ ಟಿಕ್ ದುಬಾರಿ

    ಎಲಾನ್ ಮಸ್ಕ್‌ ಮೊದಲು ಟ್ವಿಟರ್ ನೀಲಿ ಟಿಕ್ ಸೇವೆಗೆ 8 ಡಾಲರ್ ನೀಡಬೇಕು ಎಂದು ಹೇಳಿದ್ದರು. ಆದ್ರೀಗ ಬೆಲೆ ಏರಿಸಿದ್ದು, ಟ್ವಿಟರ್ ನೀಲಿ ಟಿಕ್‌ಗೆ 719 ರೂಪಾಯಿ ಏರಿಕೆ ಮಾಡಲಾಗಿತ್ತು. ಇದು 8 ಡಾಲರ್‌ಗಿಂತ ಹೆಚ್ಚು ಎಂದು ಹೇಳಲಾಗಿದೆ. ಈಗ ದುಬಾರಿ ಓಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ಗಿಂತ ಟ್ವಿಟರ್ ನೀಲಿ ಟಿಕ್ ದುಬಾರಿ ಎಂದು ಟ್ರೋಲ್ ಮಾಡಲಾಗುತ್ತಿದೆ. ಅಸಲಿಗೆ ಭಾರತದಲ್ಲಿ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರೈಬ್ ಆಗಲು ದುಬಾರಿ ಅಂದರೆ, 649ರೂಪಾಯಿ ಕಟ್ಟಬೇಕು. ಆದ್ರೀಗ ಟ್ಟಿಟರ್ ನೀಲಿ ಟಿಕ್ ಅದಕ್ಕಿಂತಲೂ ದುಬಾರಿ ಎಂದು ಹೇಳಲಾಗಿದೆ.

    ನೀಲಿ ಟಿಕ್ ಬೆಲೆ ಏಕೆ ದುಬಾರಿ?

    ನೀಲಿ ಟಿಕ್ ಬೆಲೆ ಏಕೆ ದುಬಾರಿ?

    ನೆಟ್‌ಫ್ಲಿಕ್ಸ್ ಪ್ರಿಮಿಯಮ್‌ ₹649 ಪ್ಲ್ಯಾನ್‌ನಲ್ಲಿ ಸಾಕಷ್ಟು ಸವಲತ್ತುಗಳನ್ನು ನೀಡಿದೆ. 4ಕೆ ರೆಸಲ್ಯೂಷನ್‌ನಲ್ಲಿ ಸಿನಿಮಾ ಹಾಗೂ ವೆಬ್‌ ಸೀರಿಸ್‌ ಅನ್ನು ನೋಡಬಹುದು. ಅಲ್ಲದೆ ಒಂದು ಅಕೌಂಟ್‌ನಿಂದ ನಾಲ್ಕು ಮಂದಿಗೆ ಕಂಟೆಂಟ್ ನೋಡಲು ನೀಡಬಹುದು. ಹೆಚ್‌ಡಿಯಲ್ಲಿ ಸಿನಿಮಾ ಹಾಗೂ ವೆಬ್‌ ಸೀರಿಸ್‌ ಅನ್ನು ನೋಡಬಹುದು. ಇಷ್ಟೆಲ್ಲಾ ಆಫರ್ ಕೊಟ್ಟು 649 ರೂಪಾಯಿ ಚಾರ್ಜ್ ಮಾಡುತ್ತಿದೆ. ಅದೇ ಕೇವಲ ನೀಲಿ ಟಿಕ್‌ಗೆ 719 ರೂಪಾಯಿ ಚಾರ್ಜ್ ಮಾಡಿದ್ದು, ಕೆಲವರ ಕಣ್ಣು ಕೆಂಪಾಗುವಂತೆ ಮಾಡಿದೆ.

    ಸೆಲೆಬ್ರೆಟಿಗಳ ನಿರ್ಧಾರವೇನು?

    ಸೆಲೆಬ್ರೆಟಿಗಳ ನಿರ್ಧಾರವೇನು?

    ಈಗಾಗಲೇ ಅಧಿಕೃತವಾಗಿ ನೀಲಿ ಟಿಕ್ ಹೊಂದಿರೋ ಸೆಲೆಬ್ರೆಟಿಗಳು ಏನು ಮಾಡುತ್ತಾರೆ? ಪ್ರತಿ ತಿಂಗಳು ₹719 ಕೊಟ್ಟು ನೀಲಿ ಟಿಕ್ ಅನ್ನು ಉಳಿಸಿಕೊಳ್ಳುತ್ತಾರಾ? ಅನ್ನೋ ಅನುಮಾನವಂತೂ ಇದೆ. ಆದರೆ, ಟ್ವಿಟರ್‌ನಲ್ಲಿ ಉಳಿಯಬೇಕು ಅಂದರೆ, ವಿಧಿಯಿಲ್ಲದೆ ನೀಲಿ ಟಿಕ್‌ ಅನ್ನು ಉಳಿಸಿಕೊಳ್ಳಲೇಬೇಕಿದೆ. ಇಲ್ಲದೆ ಹೋದರೆ, ಬೇರೆಯವರೂ ಕೂಡ ನಕಲಿ ಖಾತೆಯನ್ನು ಬಳಸಿ ಇಮೇಜ್ ಡ್ಯಾಮೇಜ್ ಮಾಡಬಹುದು. ಹೀಗಾಗಿ ಸೆಲೆಬ್ರೆಟಿಗಳು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋ ಆತಂಕವಿದೆ.

    English summary
    Elon Musk's Twitter Blue Tick Is Costlier Than Netflix Subscription In India, Know More.
    Friday, November 11, 2022, 18:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X