ಸಣ್ಣ ಪರದೆಯಲ್ಲಿ ಸಮಂತಾ: 'ದಿ ಫ್ಯಾಮಿಲಿ ಮ್ಯಾನ್ 2' ಬಿಡುಗಡೆ ದಿನಾಂಕ ಘೋಷಣೆ
ನಟಿ ಸಮಂತಾ, ತಮ್ಮನ್ನು ತಾವು ಹಲವು ಪ್ರಯೋಗಗಳಿಗೆ ಈ ವರ್ಷ ಒಡ್ಡಿಕೊಂಡಿದ್ದಾರೆ. ಸಿನಿಮಾಗಳಿಂದ ಒಟಿಟಿ, ಟಿವಿ, ಯೂಟ್ಯೂಬ್‌ಗೂ ಎಂಟ್ರಿ ಕೊಟ್ಟು ಎಲ್ಲೆಡೆ ಸೈ ಎನಿಸಿಕೊಂಡಿದ್ದಾರೆ ಸಮಂತಾ.
ಆಹಾ ಒಟಿಟಿಯಲ್ಲಿ 'ಸ್ಯಾಮ್-ಜ್ಯಾಮ್' ಹೆಸರಿನ ಟಾಕ್ ಶೋ ನಡೆಸಿಕೊಡುವ ಸಮಂತಾ, ತೆಲುಗು ಬಿಗ್‌ಬಾಸ್ 4 ಅನ್ನು ಕೆಲ ಎಪಿಸೋಡ್‌ಗಳಲ್ಲಿ ನಿರೂಪಣೆ ಸಹ ಮಾಡಿದ್ದರು. ಯೂಟ್ಯೂಬ್‌ಗೂ ಬಂದ ಸಮಂತಾ ಅಲ್ಲಿ ಫಿಟ್‌ನೆಸ್ ಪಾಠಗಳನ್ನು ಹೇಳಿಕೊಟ್ಟಿದ್ದರು.
ಅಷ್ಟೇ ಅಲ್ಲ, ಇದೇ ವರ್ಷ ನಟಿ ಸಮಂತಾ ವೆಬ್ ಸರಣಿಗೆ ಸಹ ಪಾದಾರ್ಪಣೆ ಮಾಡಿದ್ದಾರೆ. ಹಿಂದಿಯ 'ದಿ ಫ್ಯಾಮಿಲಿ ಮ್ಯಾನ್ 2' ದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ ನಟಿ ಸಮಂತಾ. ಅಮೆಜಾನ್ ಪ್ರೈಂ ನಲ್ಲಿ ಪ್ರಸಾರವಾಗುವ ಈ ವೆಬ್ ಸರಣಿಯ ಬಿಡುಗಡೆ ದಿನಾಂಕ ಇದೀಗ ಪ್ರಕಟಗೊಂಡಿದೆ.

ಫೆಬ್ರವರಿ 12 ಕ್ಕೆ 'ದಿ ಫ್ಯಾಮಿಲಿ ಮ್ಯಾನ್ ಸೀಸನ್ 2' ವೆಬ್ ಸರಣಿಯು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ. ಫ್ಯಾಮಿಲಿ ಮ್ಯಾನ್ ನ ಮೊದಲ ಸೀಸನ್ ಸಖತ್ ಹಿಟ್ ಆಗಿತ್ತು. ಎರಡನೇ ಸೀಸನ್ ಮೇಲೂ ಸಾಕಷ್ಟು ನಿರೀಕ್ಷೆ ಇದೆ.
ಮನೋಜ್ ಬಾಜಪೇಯಿ, ಪ್ರಿಯಾಮಣಿ, ಶರೀಬ್ ಹಶೀಮ್, ಸಮಂತಾ ಸೇರಿ ಇನ್ನೂ ಹಲವರು ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಸಮಂತಾ, ಪವರ್‌ಫುಲ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಫ್ಯಾಮಿಲಿ ಮ್ಯಾನ್ ನ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ ಎಂದಿದ್ದಾರೆ ಸಮಂತಾ.


Click it and Unblock the Notifications











