For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್‌ಗೆ ಬನ್ನಿ ಅಂತ ಬೇಡಿದ್ರು, ಅವರೊಬ್ಬರ ಮಾತಿಗೆ ಬೆಲೆ ಕೊಟ್ಟು ಹೊರಟೆ ಎಂದ ಸೋನು ಶ್ರೀನಿವಾಸ್ ಗೌಡ!

  |

  ತನ್ನ ವೈಯಕ್ತಿಕ ವಿಷಯಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗೂ ಟ್ರೋಲ್ ಆಗಿದ್ದ ಟಿಕ್ ಟಾಕ್ ಸೋನು ಶ್ರೀನಿವಾಸ್ ಗೌಡ ಈ ಬಾರಿಯ ಓಟಿಟಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಯ್ಕೆ ಆಗಿದ್ದರು. ಕಾರ್ಯಕ್ರಮದ ಆರಂಭದಲ್ಲೇ ತನ್ನ ವೈಯಕ್ತಿಯ ವಿವಾದದ ಕುರಿತು ಮುಕ್ತವಾಗಿ ಮಾತನಾಡಿ ಕಣ್ಣೀರು ಹಾಕಿದ್ದ ಸೋನು ಶ್ರೀನಿವಾಸ್ ಗೌಡ 42 ದಿನಗಳವರೆಗೆ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಅಂತಿಮ ದಿನದವರೆಗೂ ಮನೆಯಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

  ಅಂತಿಮ ದಿನದವರೆಗೂ ಇದ್ದ ಸೋನು ಶ್ರೀನಿವಾಸ್ ಗೌಡ ಮನೆಯಲ್ಲಿದ್ದಾಗ ತನ್ನ ಪ್ರತಿಸ್ಪರ್ಧಿ ಸಾನ್ಯಾ ಐಯ್ಯರ್ ಜತೆಗೆ ಸಾಕಷ್ಟು ಬಾರಿ ಜಗಳ ಆಡಿದ್ದ ಉದಾಹರಣೆಗಳಿವೆ. ಮತ್ತೋರ್ವ ಸ್ಪರ್ಧಿ ಆರ್ಯವರ್ಧನ್ ಜತೆ ಕೂಡ ಮಿತಿ ಮೀರಿ ಮಾತನಾಡಿದ ಉದಾಹರಣೆಗಳಿವೆ. ಹೀಗೆ ಮನೆಯಲ್ಲಿದ್ದಾಗ ತನಗೆ ತೋಚಿದ್ದನ್ನು ನೇರವಾಗಿ ಹೇಳಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಸೋನು ಶ್ರೀನಿವಾಸ್ ಗೌಡ ಸದ್ಯ ಬಿಗ್‌ಬಾಸ್ ಓಟಿಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡು ಮನೆಯಿಂದ ಹೊರಬಿದ್ದ ನಂತರ ಇದೀಗ ಸಂದರ್ಶನ ನೀಡುವುದರಲ್ಲಿ ನಿರತರಾಗಿದ್ದಾರೆ.

  ಸದ್ಯ ಕನ್ನಡ ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ಸಂದರ್ಶನದಲ್ಲಿ ತಾನು ಬಿಗ್‌ಬಾಸ್‌ಗೆ ಹೋಗಿದ್ದು ಹೇಗೆ ಎಂಬ ವಿಚಾರವನ್ನು ಟಿಕ್ ಟಾಕ್ ನಟಿ ಸೋನು ಗೌಡ ಬಿಚ್ಚಿಟ್ಟಿದ್ದಾರೆ.

  ಮೈಂಡ್ ಫ್ರೆಶ್‌ಗೋಸ್ಕರ ಆಸ್ಟ್ರೇಲಿಯಾ ಹೊರಟಿದ್ದೆ!

  ಮೈಂಡ್ ಫ್ರೆಶ್‌ಗೋಸ್ಕರ ಆಸ್ಟ್ರೇಲಿಯಾ ಹೊರಟಿದ್ದೆ!

  ಬಿಗ್‌ ಬಾಸ್ ಮನೆಗೆ ಆಮಂತ್ರಣ ಹೇಗೆ ಬಂತು ಎಂಬ ಪ್ರಶ್ನೆ ಎದುರಾದಾಗ ಉತ್ತರಿಸಿದ ಸೋನು ಶ್ರೀನಿವಾಸ್ ಗೌಡ ತಾನು ಮೈಂಡ್ ಫ್ರೆಶ್ ಮಾಡಿಕೊಳ್ಳುವುದಕ್ಕೋಸ್ಕರ ಆಸ್ಟ್ರೇಲಿಯಾಗೆ ಟಿಕೆಟ್ ಬುಕ್ ಮಾಡಿದ್ದೆ, ಕುಟುಂಬಸ್ಥರಿಗೆಲ್ಲಾ ಹೇಳಿದ್ದೆ ಆ ಸಮಯದಲ್ಲಿ ತನಗೆ ಬಿಗ್ ಬಾಸ್ ಕಡೆಯಿಂದ ಸಡನ್ ಆಗಿ ಕರೆ ಬಂದಿತ್ತು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಹೀಗೆ ಕಾಲ್ ಬಂದಾಗಲೂ ತಾನು ಬಿಗ್ ಬಾಸ್‌ಗೆ ಹೋಗಲು ಸಿದ್ಧಳಿರಲಿಲ್ಲ ಎಂಬುದನ್ನು ಸೋನು ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

  'ಕಾಲ್ ಇಗ್ನೋರ್ ಮಾಡಿದ್ದೆ!'

  'ಕಾಲ್ ಇಗ್ನೋರ್ ಮಾಡಿದ್ದೆ!'

  ಇನ್ನೂ ಮುಂದುವರೆದು ಮಾತನಾಡಿದ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಕಡೆಯಿಂದ ಕರೆಯನ್ನು ಆಸ್ಟ್ರೇಲಿಯಾಗೆ ಹೋಗುವ ಸಲುವಾಗಿ ತಳ್ಳಿಹಾಕಿದ್ದೆ ಎಂದಿದ್ದಾರೆ. ಆದರೂ ಬೆಂಬಿಡದ ಚಾನೆಲ್‌ನವರು 'ಪ್ಲೀಸ್ ಮೇಡಂ ಕಾಲ್ ಪಿಕ್ ಮಾಡಿ ಮಾತನಾಡಿ' ಎಂದು ಮನವಿ ಮಾಡಿಕೊಂಡರು ಎಂದು ಸೋನು ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದಾರೆ.

  ಅಮ್ಮನ ಮಾತಿನಿಂದ ಬಿಗ್ ಬಾಸ್‌ಗೆ ಹೊರಟೆ

  ಅಮ್ಮನ ಮಾತಿನಿಂದ ಬಿಗ್ ಬಾಸ್‌ಗೆ ಹೊರಟೆ

  ಇನ್ನು ಕರೆಗಳು ಹೆಚ್ಚಾದಂತೆ ಅಮ್ಮನಿಗೆ ಈ ವಿಷಯ ತಿಳಿಸಿದೆ ಎಂದ ಸೋನು ಶ್ರೀನಿವಾಸ್ ಗೌಡ ತಮ್ಮ ತಾಯಿ ಬಿಗ್ ಬಾಸ್‌ಗೆ ಹೋಗಿ ನಿನ್ನಲ್ಲಿನ ನೆಗೆಟಿವ್ ಅಂಶಗಳನ್ನು ದೂರ ಮಾಡಿಕೊ, ನಿಂಗೆ ಸಿಕ್ಕಿರುವ ಒಳ್ಳೆ ವೇದಿಕೆ ಇದು ಎಂದು ಸಲಹೆ ಕೊಟ್ರು ಎಂದಿದ್ದಾರೆ. ಆನಂತರ ಚಾನೆಲ್ ಅವರನ್ನು ಸಾಕಷ್ಟು ಕಾಡಿಸಿ ಬೇಡಿಸಿ ಕೊನೆಯಲ್ಲಿ ಒಪ್ಪಿಕೊಂಡೆ ಎಂದಿದ್ದಾರೆ.

  English summary
  Firstly I rejected the bigg boss offer and agreed later says Sonu Srinivas Gowda, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X