twitter
    For Quick Alerts
    ALLOW NOTIFICATIONS  
    For Daily Alerts

    ಮೂರು ದಿನ ಜೀ 5 ಉಚಿತ: 60 ಬ್ಲಾಸ್ಟರ್ ಸಿನಿಮಾ ನೋಡಲು ಅವಕಾಶ

    |

    ಕೊರೊನಾ ಬಂದಾಗಿನಿಂದ ಜನರು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದನ್ನು ಮರೆತಿದ್ದಾರೆ. ಮನೆಯಲ್ಲೇ ಕೂತು ಸಿನಿಮಾ ನೋಡಲು ಒಟಿಟಿ ಒಂದು ವೇದಿಕೆಯಾಗಿದೆ. ಹೊಚ್ಚ ಹೊಸ ಸಿನಿಮಾಗಳಿಂದ ಹಿಡಿದು ವೆಬ್ ಸಿರೀಸ್ ವರೆಗೂ ಒಟಿಟಿಯಲ್ಲಿಯೇ ನೋಡುವ ಅವಕಾಶ ಸಿಕ್ಕಿದೆ. ಈ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ದೇಶದಲ್ಲಿ ಒಟಿಟಿಗೆ ಅಂಟಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಮಧ್ಯೆ ಒಟಿಟಿಗಳ ಮಧ್ಯೆ ಕಾಂಪಿಟೇಷನ್ ಕೂಡ ಹೆಚ್ಚಾಗಿದೆ.

    ಭಾರತದಲ್ಲಿ ಸುಮಾರು 50ಕ್ಕೂ ಹೆಚ್ಚು ಒಟಿಟಿ ವೇದಿಕೆಗಳಿವೆ. ಪ್ರಾದೇಶಿಕ ಒಟಿಟಿ ವೇದಿಕಗಳನ್ನೂ ಸೇರಿಸಿ, ಇಷ್ಟೊಂದು ವೇದಿಕೆಗಳಿಗೆ ಕಂಟೆಂಟ್ ಕೊರತೆ ಎದ್ಡು ಕಾಣುತ್ತಿದೆ. ಹೀಗಾಗಿ ಪ್ರಮುಖ ಒಟಿಟಿಗಳು ಪೈಪೋಟಿಗೆ ಬೀಳಲೇ ಬೇಕಿದೆ. ಈ ಕಾರಣಕ್ಕೆ ಜೀ 5 ಹೊಸ ಪ್ರಯೋಗವನ್ನು ಮಾಡುತ್ತಿದೆ. ಸುಮಾರು 72 ಗಂಟೆಗಳ ಕಾಲ ಸಬ್‌ಸ್ಕ್ರೈಬ್ ಆಗದೆ ಜೀ 5 ನಲ್ಲಿರುವ ಸಿನಿಮಾಗಳನ್ನು ನೋಡಬಹುದಾಗಿದೆ. ಅಸಲಿಗೆ ಈ ಪ್ರಯತ್ನಕ್ಕೆ ಕೈ ಹಾಕಿದ್ದು ಏಕೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

     'ಗೋಲ್ಡನ್ ಗ್ಯಾಂಗ್'ನಲ್ಲಿ ಪ್ರಜ್ವಲ್, ರಾಗಿಣಿ, ಮೇಘನಾ ರಾಜ್: ಅಗಲಿದ ಚಿರು ಸರ್ಜಾಗೆ ಅರ್ಪಣೆ 'ಗೋಲ್ಡನ್ ಗ್ಯಾಂಗ್'ನಲ್ಲಿ ಪ್ರಜ್ವಲ್, ರಾಗಿಣಿ, ಮೇಘನಾ ರಾಜ್: ಅಗಲಿದ ಚಿರು ಸರ್ಜಾಗೆ ಅರ್ಪಣೆ

     ಜೀ 5 ವಿಭಿನ್ನ ಪ್ರಯೋಗ

    ಜೀ 5 ವಿಭಿನ್ನ ಪ್ರಯೋಗ

    ಕನ್ನಡ ಸಿನಿಮಾಗಳನ್ನು ಒಟಿಟಿ ಖರೀದಿ ಮಾಡುತ್ತಿಲ್ಲ ಎಂಬುದು ನಿರ್ಮಾಪಕರ ಅಳಲು. ಇತ್ತೀಚೆಗೆ ಕನ್ನಡದ ಬಹುತೇಕ ನಿರ್ಮಾಪಕರು ಇಂತಹ ಆರೋಪ ಮಾಡುತ್ತಿದ್ದಾರೆ. ಇದರ ಮಧ್ಯೆ ಜೀ 5 ಕನ್ನಡ ಸಿನಿಮಾಗಳನ್ನು ಖರೀದಿ ಮಾಡುತ್ತಿದೆ. ಶಿವಣ್ಣ ನಟನೆಯ 'ಭಜರಂಗಿ 2', 'ಗರುಡ ಗಮನ ವೃಷಭ ವಾಹನ' ಈ ಸಿನಿಮಾಗಳು ಒಟಿಟಿಯಲ್ಲೂ ಗೆದ್ದಿವೆ. ಈ ವಿಷಯವನ್ನು ಜೀ 5 ಸಂಸ್ಥೆಯೇ ಹೇಳಿಕೊಂಡಿದೆ. ಈ ಮಧ್ಯೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ಸಿನಿಪ್ರಿಯರಿಗೆ ಮೂರು ದಿನ ಉಚಿತವಾಗಿ ಸಿನಿಮಾ ವೀಕ್ಷಿಸುವ ಆಫರ್ ನೀಡುತ್ತಿದೆ.

     ಫೆ. 12 ರಿಂದ 14ರವರೆಗೆ ಜೀ5 ಫ್ರೀ

    ಫೆ. 12 ರಿಂದ 14ರವರೆಗೆ ಜೀ5 ಫ್ರೀ

    ಜೀ 5 ಫೆಬ್ರವರಿ 12 ರಿಂದ 14ರವರೆಗೆ ಉಚಿತವಾಗಿ ಸಿನಿಮಾ ನೋಡಲು ಅವಕಾಶ ನೀಡುತ್ತಿದೆ. ಜೀ 5 ಸಬ್‌ಸ್ಕ್ರೈಬ್ ಆಗದೆ ಇರುವವರೂ ಜೀ 5ನಲ್ಲಿ ಈ ಮೂರು ದಿನ ಸಿನಿಮಾವನ್ನು ನೋಡಬಹುದಾಗಿದೆ. ಹಣ ನೀಡದೆ ಉಚಿತವಾಗಿ 3 ಫ್ರೀಯಾಗಿ ಸಿನಿಮಾ ನೋಡಬಹುದು. ಸುಮಾರು 72 ಗಂಟೆಗಳ ಕಾಲ ಜೀ 5 ಉಚಿತ ಸೇವೆ ಒದಗಿಸಲಿದೆ. ಈ ವಿಭಿನ್ನ ಪ್ರಯತ್ನಕ್ಕೆ ಕಾರಣ ಜೀ 5 ಇದೇ ಫೆಬ್ರವರಿ 12ಕ್ಕೆ ನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಲಿದೆ.

     60 ಬ್ಲಾಕ್ ಬಸ್ಟರ್ ಸಿನಿಮಾ ಉಚಿತ

    60 ಬ್ಲಾಕ್ ಬಸ್ಟರ್ ಸಿನಿಮಾ ಉಚಿತ

    ಜೀ 5ನಲ್ಲಿ ಸಾಕಷ್ಟು ಉತ್ತಮ ಸಿನಿಮಾಗಳಿವೆ. ಈ ಮೂರು ಸುಮಾರು 60ಕ್ಕೂ ಹೆಚ್ಚು ವಿವಿಧ ಭಾಷೆಯಲ್ಲಿ ಬ್ಲಾಕ್‌ಬಸ್ಟರ್ ಆಗಿರುವ ಸಿನಿಮಾಗಳನ್ನು ವೀಕ್ಷಿಸ ಬಹುದಾಗಿದೆ. ಕನ್ನಡದಲ್ಲಿ 'ಕುರುಕ್ಷೇತ್ರ', ರಿಷಬ್ ಶೆಟ್ಟಿಯ 'ಹೀರೋ', ಜಗ್ಗೇಶ್ ಅಭಿನಯದ 'ಕಾಳಿದಾಸ ಕನ್ನಡ‌‌ ಮೇಷ್ಟ್ರು', 'ದಿ ವಿಲನ್', 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಇಂತಹ ಸಾಕಷ್ಟು ಸಿನಿಮಾಗಳಿದ್ದು, ವೆಬ್ ಸೀರೀಸ್‌ನಲ್ಲಿ 'ಕೈಲಾಸಪುರ', 'ಹೈ ಪ್ರಿಸ್ಟ್' ಅಂತಹ ಸಿನಿಮಾಗಳಿವೆ. ಆದರೆ, 72 ಗಂಟೆಗಳಲ್ಲಿ ಎಷ್ಟು ಸಿನಿಮಾಗಳನ್ನು ನೋಡುತ್ತೀರಾ ಅನ್ನುವುದು ನಿಮಗೆ ಬಿಟ್ಟಿದ್ದು.

     ಜೀ 5 Vs ಅಮೆಜಾನ್

    ಜೀ 5 Vs ಅಮೆಜಾನ್

    ಜೀ 5 ನಂತಯೇ ಅಮೆಜಾನ್ ಕೂಡ ಇಂತಹದ್ದೇ ಒಂದು ಪ್ರಯತ್ನಕ್ಕೆ ಕೈ ಹಾಕಿದೆ. ಫೆಬ್ರವರಿ ತಿಂಗಳು ಪೂರ್ತಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾವನ್ನು ಉಚಿತವಾಗಿ ವೀಕ್ಷಿಸುವ ಅವಕಾಶ ನೀಡಿದೆ. ಆದರೆ, ಜೀ 5 ಒಂದು ತಿಂಗಳ ಬದಲಾಗಿ ಮೂರು ದಿನ 60 ಸಿನಿಮಾ ವೀಕ್ಷಣೆ ಮಾಡುವ ಅವಕಾಶ ನೀಡಿದೆ. ಈ ಮೂಲಕ ಎರಡು ಒಟಿಟಿಗಳು ಪೈಪೋಟಿಗೆ ಬಿದ್ದಿವೆ. ಅಮೆಜಾನ್ ಹಾಗೂ ಜೀ 5 ಕನ್ನಡದ ವೀಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದು, ಈ ವಿನೂತನ ಪ್ರಯತ್ನದಿಂದ ಯಾರಿಗೆ ಹೆಜ್ಜೆ ಸಬ್‌ಸ್ಕ್ರೈಬರ್ ಸಿಗುತ್ತಾರೆ ಅನ್ನುವುದು ಕುತೂಹಲ.

    Read more about: ott ಒಟಿಟಿ amazon prime
    English summary
    From February 12th to 14th audience can watch 60 movies free in zee 5. Members can access free for 72 hours. After amazon zee 5 also experimenting.
    Saturday, February 12, 2022, 10:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X