India
  For Quick Alerts
  ALLOW NOTIFICATIONS  
  For Daily Alerts

  ಈ ವಾರ ಒಟಿಟಿಗೆ ಬರಲಿವೆ ಹಿಟ್ ಸಿನಿಮಾಗಳು: ನಿಮ್ಮ ಆಯ್ಕೆ ಯಾವುದು?

  |

  ಒಟಿಟಿಗಳ ಆಗಮನದಿಂದ ಸಿನಿಮಾ ಕ್ಷೇತ್ರದ 'ಗೇಮ್' ಬದಲಾವಣೆ ಆಗಿದೆ. ಲಾಭಕ್ಕೆ ಚಿತ್ರಮಂದಿರ ಹಾಗೂ ಟಿವಿಯನ್ನು ಮಾತ್ರವೇ ನಂಬಿಕೊಂಡಿದ್ದ ನಿರ್ಮಾಪಕರಿಗೆ ಒಟಿಟಿ ಹೊಸ ದಾರಿ ಒದಗಿಸಿದೆ.

  ಹಲವು ಸಿನಿಮಾಗಳ ನಿರ್ಮಾಪಕರು ತಮ್ಮ ಸಿನಿಮಾದ ಬಿಡುಗಡೆಗೆ ಮುನ್ನವೇ ಒಟಿಟಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಒಟಿಟಿಗೆ ಬರುತ್ತಿವೆ.

  ಈ ವಾರ ಒಟಿಟಿ ವೀಕ್ಷಕರಿಗೆ ಹಬ್ಬ, ಕಾದಿವೆ ಹಿಟ್ ಸಿನಿಮಾಗಳುಈ ವಾರ ಒಟಿಟಿ ವೀಕ್ಷಕರಿಗೆ ಹಬ್ಬ, ಕಾದಿವೆ ಹಿಟ್ ಸಿನಿಮಾಗಳು

  ಪ್ರತಿ ವಾರವೂ ಸುಮಾರು 10 ಹೊಸ ಸಿನಿಮಾಗಳು, ವೆಬ್ ಸರಣಿಗಳು ಒಟಿಟಿಗೆ ಲಗ್ಗೆ ಇಡುತ್ತಿವೆ. ಅಂತೆಯೇ ಈ ವಾರವೂ ಸಹ ಕನ್ನಡದ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ಒಟಿಟಿಗೆ ಲಗ್ಗೆ ಇಟ್ಟಿವೆ. ಈ ವಾರಾಂತ್ಯಕ್ಕೆ ಮನೆಯಲ್ಲೇ ಕೂತು ಸಿನಿಮಾ ನೋಡಬಯಸುವವರಿಗೆ ಒಳ್ಳೆಯ ಆಯ್ಕೆಗಳು ಒಟಿಟಿಯಲ್ಲಿವೆ.

  ಕನ್ನಡದ 'ಡಿಯರ್ ವಿಕ್ರಂ'

  ಕನ್ನಡದ 'ಡಿಯರ್ ವಿಕ್ರಂ'

  ಸತೀಶ್ ನೀನಾಸಂ ನಟನೆಯ 'ಡಿಯರ್ ವಿಕ್ರಂ' ಸಿನಿಮಾ ನಿನ್ನೆಯಷ್ಟೆ (ಜೂನ್ 30) ವೂಟ್‌ನಲ್ಲಿ ಬಿಡುಗಡೆ ಆಗಿದೆ. ನಕ್ಸಲ್ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿದ್ದು ನಟ ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಇನ್ನೂ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ವೂಟ್‌ನಲ್ಲಿ ಬಿಡುಗಡೆ ಆಗಿದೆ.

  ತೆಲುಗಿನ 'ವಿರಾಟ ಪರ್ವಂ', 'ಮೇಜರ್'

  ತೆಲುಗಿನ 'ವಿರಾಟ ಪರ್ವಂ', 'ಮೇಜರ್'

  ಇತ್ತೀಚೆಗೆ ಬಿಡುಗಡೆ ಆದ ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ ನಟಿಸಿರುವ ತೆಲುಗು ಸಿನಿಮಾ 'ವಿರಾಟ ಪರ್ವಂ' ಸಿನಿಮಾ ಜುಲೈ 01 ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಗೆ ಬರುತ್ತಿದೆ. ಇದರ ಜೊತೆಗೆ ಕನ್ನಡಿಗ ಮೇಝರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧರಿಸಿದ 'ಮೇಜರ್' ಸಿನಿಮಾ ಸಹ ನೆಟ್‌ಫ್ಲಿಕ್ಸ್‌ನಲ್ಲಿಯೇ ತೆರೆ ಕಾಣುತ್ತಿದೆ. ಅದರ ಜೊತೆಗೆ 'ಬಾಲ ಭಾರತಮು' ಎಂಬ ತೆಲುಗು ಸಿನಿಮಾ ಆಹಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ.

  'ಸಾಮ್ರಾಟ್ ಪೃಥ್ವಿರಾಜ್', 'ಧಾಕಡ್'

  'ಸಾಮ್ರಾಟ್ ಪೃಥ್ವಿರಾಜ್', 'ಧಾಕಡ್'

  ಭಾರಿ ಬಜೆಟ್‌ನಲ್ಲಿ ನಿರ್ಮಾಣಗೊಂಡು ಹೀನಾಯ ಸೋಲು ಕಂಡ ಅಕ್ಷಯ್ ಕುಮಾರ್ ಸಿನಿಮಾ 'ಸಾಮ್ರಾಟ್ ಫೃಥ್ವಿರಾಜ್' ಇದೀಗ ಅಮೆಜಾನ್‌ ಪ್ರೈಂಗೆ ಕಾಲಿಟಿದೆ. ಸಿನಿಮಾವು ಜುಲೈ 2 ರಂದು ಅಮೆಜಾನ್ ಪ್ರೈಂನಲ್ಲಿ ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಇನ್ನು ಅಟ್ಟರ್ ಫ್ಲಾಪ್ ಆದ ಮತ್ತೊಂದು ಸಿನಿಮಾ 'ಧಾಕಡ್' ಸಹ ಜುಲೈ 1 ರಿಂದ ಜೀ5 ನಲ್ಲಿ ಪ್ರಸಾರವಾಗಲಿದೆ. ಈ ಸಿನಿಮಾದಲ್ಲಿ ಕಂಗನಾ ರನೌತ್ ಹಾಗೂ ಅರ್ಜುನ್ ರಾಮ್‌ಪಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

  ಮಲಯಾಳಂ, ಬೆಂಗಾಳಿ, ಪಂಜಾಬಿ ಹಾಗೂ ಹಿಂದಿ

  ಮಲಯಾಳಂ, ಬೆಂಗಾಳಿ, ಪಂಜಾಬಿ ಹಾಗೂ ಹಿಂದಿ

  ಮಲಯಾಳಂನ 'ಕೀದಂ' ಜೀ 5 ನಲ್ಲಿ ಜುಲೈ 1 ರಿಂದ ಪ್ರಸಾರವಾಗಲಿದೆ. ಬೆಂಗಾಲಿ ಭಾಷೆಯ 'ರುದ್ರಬಿನಾರ್ ಒಬಿಶಾಪ್' ಹೊಯ್‌ಚೋಯ್ ಒಟಿಟಿಯಲ್ಲಿ ಇದೇ ವಾರಾಂತ್ಯದಿಂದ ಪ್ರಸಾರವಾಗಲಿದೆ. ಪಂಜಾಬಿಯ 'ಬಾಪು ಬಾಹರ್ ಬೇಜ್ದೆ' ಜೀ5ನಲ್ಲಿ ಪ್ರಸಾರವಾಗಲಿದೆ. ಎರಡು ವರ್ಷ ಹಳೆಯ ಹಿಂದಿ ಸಿನಿಮಾ 'ಶಟಪ್ ಸೋನಾ' ಜೀ 5 ನಲ್ಲಿ ಜುಲೈ 1 ರಿಂದ ಸ್ಟ್ರೀಮ್ ಆಗಲಿದೆ. ಹಾಗೂ 'ಮಿಯಾ ಬೀವಿ ಔರ್ ಮರ್ಡರ್' ಹೆಸರಿನ ಹಾಸ್ಯ ಪ್ರಧಾನ ಕ್ರೈಂ ವೆಬ್ ಸರಣಿ ಮ್ಯಾಕ್ಸ್‌ ಪ್ಲೇಯರ್‌ನಲ್ಲಿ ಪ್ರಸಾರವಾಗಲಿದೆ ಇದೇ ಜುಲೈ 1 ರಿಂದ.

  ಇಂಗ್ಲೀಷ್‌ನ ಹಲವು ಸಿನಿಮಾ, ವೆಬ್ ಸರಣಿಗಳಿವೆ

  ಇಂಗ್ಲೀಷ್‌ನ ಹಲವು ಸಿನಿಮಾ, ವೆಬ್ ಸರಣಿಗಳಿವೆ

  ಜನಪ್ರಿಯ 'ಸ್ಟ್ರೇಂಜರ್‌ ಥಿಂಗ್ಸ್‌' ವೆಬ್ ಸರಣಿಯ ನಾಲ್ಕನೇ ಸೀಸನ್‌ನ ಎರಡನೇ ವಾಲ್ಯುಮ್‌ ನೆಟ್‌ಫ್ಲಿಕ್ಸ್‌ನಲ್ಲಿ ಜುಲೈ 1 ಕ್ಕೆ ಬಿಡುಗಡೆ ಆಗಿದೆ. ಆಕ್ಷನ್ ಸಿನಿಮಾ 'ದಿ ಟರ್ಮಿನಲ್ ಲಿಸ್ಟ್' ಪ್ರೈಂ ವಿಡಿಯೋನಲ್ಲಿ ಸ್ಟ್ರೀಮ್ ಆಗುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ 'ಪವರ್‌ ಪ್ಲೇಯರ್ಸ್', 'ಲವ್ ಸಾಂಗ್', 'ಮೈಟಿ ಓಕ್‌' ಸಿನಿಮಾಗಳು ಸ್ಟ್ರೀಮ್ ಆಗಲಿವೆ. ಇನ್ನು ಹಲವು ಇಂಗ್ಲೀಷ್ ವೆಬ್ ಸರಣಿ ಹಾಗೂ ಸಿನಿಮಾಗಳು ವಿವಿಧ ಒಟಿಟಿಗಳಲ್ಲಿ ಈ ವಾರ ತೆರೆಗೆ ಬರಲಿದೆ.

  English summary
  Here is the list of movies, web series releasing this week on OTT. Many English, Hindi, Telugu movies releasing this weekend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X