twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್ 2' ನೋಡಲು ಅಮೆಜಾನ್‌ಗೆ ಹಣವೇಕೆ ಕೊಡಬೇಕು: ನೆಟ್ಟಿಗರ ಪ್ರಶ್ನೆ

    |

    'ಕೆಜಿಎಫ್ 2' ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವಾಗಲೇ ಒಟಿಟಿಗೆ ಕಾಲಿಟ್ಟಿದೆ. ಸಿನಿಮಾ ಬಿಡುಗಡೆ ಆದ ಕೇವಲ ಒಂದು ತಿಂಗಳಲ್ಲಿಯೇ ಒಟಿಟಿಗೆ ಕಾಲಿಟ್ಟಿದೆ. ಆದರೆ ಇಲ್ಲಿಯೂ 'ಕೆಜಿಎಫ್' ತಂಡ ಬುದ್ಧಿವಂತಿಕೆ ಪ್ರದರ್ಶಿಸಿದೆ.

    'ಕೆಜಿಎಫ್ 2' ಸಿನಿಮಾ ಒಟಿಟಿಗೆ ಬಂದಿದೆಯಾದರೂ ಸಿನಿಮಾವನ್ನು ಒಟಿಟಿಯಲ್ಲಿ ಉಚಿತವಾಗಿ ನೋಡುವಂತಿಲ್ಲ. ಬದಲಿಗೆ ಹಣ ಕೊಟ್ಟು ನೋಡಬೇಕು. ಹಣ ಕೊಟ್ಟರೂ ಸಹ ಸಿನಿಮಾ ಬಳಕೆದಾರನ ಬಳಿ ಉಳಿಯುವುದಿಲ್ಲ ಬದಲಿಗೆ ಸಿನಿಮಾ ಬಾಡಿಗೆಗೆ ಅಷ್ಟೆ ದೊರಕುತ್ತದೆ.

    ಅಮೆಜಾನ್ ಪ್ರೈಂನಲ್ಲಿ 'ಅರ್ಲಿ ಆಕ್ಸಸ್' ಅಡಿಯಲ್ಲಿ 'ಕೆಜಿಎಫ್ 2' ಸಿನಿಮಾ ಸ್ಟ್ರೀಮ್ ಮಾಡಲಾಗುತ್ತಿದೆ. ಅಮೆಜಾನ್ ಪ್ರೈಂನಲ್ಲಿ 'ಕೆಜಿಎಫ್ 2' ಸಿನಿಮಾ ನೋಡಲು 199 ರುಪಾಯಿ ಪಾವತಿ ಮಾಡಬೇಕು. ಹಣ ಪಾವತಿ ಮಾಡಿದರೂ ಸಿನಿಮಾ ನೋಡಲು ಹಲವು ಷರತ್ತುಗಳು ಸಹ ಇವೆ. ಆದರೆ ನೆಟ್ಟಿಗರು ಈ ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಕೆಜಿಎಫ್ 2' ಸಿನಿಮಾ ನೋಡಲು ಹೆಚ್ಚುವರಿ ಹಣ ಕೇಳುತ್ತಿರುವದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮತ್ತೆ ಏಕೆ ಹಣ ಕೊಡಬೇಕು? ಪ್ರಶ್ನೆ

    ಮತ್ತೆ ಏಕೆ ಹಣ ಕೊಡಬೇಕು? ಪ್ರಶ್ನೆ

    ಈಗಾಗಲೇ ವರ್ಷಕ್ಕೆ 1000 ರುಪಾಯಿ ನೀಡಿ ಅಮೆಜಾನ್ ಪ್ರೈಂ ಚಂದಾದಾರಿಕೆ ಖರೀದಿಸಿರುವಾಗ ಸಿನಿಮಾ ನೋಡಲು ಮತ್ತೆ ಹಣ ಕೇಳುವುದು ಸರಿಯಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರದಲ್ಲಿ ಈಗಾಗಲೇ ಸಾವಿರಾರು ಕೋಟಿ ಗಳಿಸಿರುವ ಸಿನಿಮಾ, ಇನ್ನಷ್ಟು ಲಾಲಸೆಗೆ ಒಳಗಾಗಿ ಅಮೆಜಾನ್ ಮೂಲಕವೂ ಲಾಭ ಮಾಡಲು ಪೇ ಪರ್ ವೀವ್ ಮಾದರಿಯಲ್ಲಿ ಸಿನಿಮಾವನ್ನು ಸ್ಟ್ರೀಮ್‌ಗೆ ಬಿಟ್ಟಿದೆ ಎಂದು ಆರೋಪಿಸಿದ್ದಾರೆ.

    Recommended Video

    KGF 2 | ಈ ದಾಖಲೆ ಮಾಡಿದ ಎರಡನೇ ಸಿನಿಮಾ KGF 2 | Yash | Prashanth Neel
    ಕೆಲವು ಷರತ್ತುಗಳು ಸಹ ಇವೆ

    ಕೆಲವು ಷರತ್ತುಗಳು ಸಹ ಇವೆ

    ಅಮೆಜಾನ್‌ನಲ್ಲಿ 'ಕೆಜಿಎಫ್ 2' ಸಿನಿಮಾ ನೋಡಲು 199 ರು ಹಣ ನೀಡಬೇಕಿದೆ. ಹಣ ಪಾವತಿ ಮಾಡಿ ಸಿನಿಮಾವನ್ನು ಬಾಡಿಗೆಗೆ ಪಡೆದ ಬಳಿಕ ಮೂವತ್ತು ದಿನದ ಒಳಗಾಗಿ ಸಿನಿಮಾ ನೋಡಿ ಮುಗಿಸಬೇಕು. ಅದೂ ಒಮ್ಮೆ ಸಿನಿಮಾ ನೋಡಲು ಪ್ರಾರಂಭಿಸಿದರೆ 48 ಗಂಟೆ ಒಳಗೆ ಸಿನಿಮಾವನ್ನು ಮುಗಿಸಬೇಕು. 48 ಗಂಟೆ ಒಳಗೆ ಸಿನಿಮಾ ನೋಡುವುದು ಮುಗಿಸದಿದ್ದರೆ ಸಿನಿಮಾ ನಿಮ್ಮ ಖಾತೆಯಿಂದ ಹೊರಟು ಹೋಗುತ್ತದೆ. ಅಥವಾ ಹಣ ಕೊಟ್ಟು 30 ದಿನಗಳ ಒಳಗೆ ಸಿನಿಮಾ ನೋಡದಿದ್ದರೂ ಬಳಕೆದಾರರ ಖಾತೆಯಿಂದ ಸಿನಿಮಾ ಮಾಯವಾಗುತ್ತದೆ.

    ದುಬಾರಿ ಮೊತ್ತ ಪಾವತಿಸಬೇಕಿದೆ

    ದುಬಾರಿ ಮೊತ್ತ ಪಾವತಿಸಬೇಕಿದೆ

    ಅಮೆಜಾನ್‌ನಲ್ಲಿ ಈ ಹಿಂದೆಯೂ ಕೆಲವು ಸಿನಿಮಗಳನ್ನು ಹೀಗೆ ಬಾಡಿಗೆ ನೀಡಿದೆ. 'ಸ್ಪೈಡರ್‌ಮ್ಯಾನ್: ನೋ ವೇ ಹೋಮ್', ಆಸ್ಕರ್ ವಿಜೇತ 'ಡ್ರೈವ್ ಮೈ ಕಾರ್' ಇನ್ನೂ ಕೆಲವು ಸಿನಿಮಾಗಳನ್ನು, ವೆಬ್ ಸರಣಿಗಳನ್ನು ಬಾಡಿಗೆಗೆ ನೀಡಿದೆ. ಆದರೆ ಅವಕ್ಕೆಲ್ಲ ಇಷ್ಟು ದೊಡ್ಡ ಮೊತ್ತದ ಬೆಲೆ ನಿಗದಿ ಮಾಡಿಲ್ಲ. ಆದರೆ 'ಕೆಜಿಎಫ್ 2' ಸಿನಿಮಾಕ್ಕೆ 200 ರುಪಾಯಿ ಬೆಲೆ ನಿಗದಿ ಮಾಡಿರುವ ಬಗ್ಗೆಯೂ ನೆಟ್ಟಿಗರು ತಕರಾರು ತೆಗೆದಿದ್ದಾರೆ. ಈಗಾಗಲೇ ವಾರ್ಷಿಕ ಚಂದಾದಾರಿಕೆ ಹಣ ತೆತ್ತು ಮತ್ತೆ ಸಿನಿಮಾ ನೋಡಲು ಹಣ ನೀಡಬೇಕಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಾಕ್ಸ್‌ ಆಫೀಸ್ ಬ್ಲಾಕ್ ಬಸ್ಟರ್ ಆಗಿರುವ ಸಿನಿಮಾ

    ಬಾಕ್ಸ್‌ ಆಫೀಸ್ ಬ್ಲಾಕ್ ಬಸ್ಟರ್ ಆಗಿರುವ ಸಿನಿಮಾ

    'ಕೆಜಿಎಫ್ 2' ಸಿನಿಮಾ ಈಗಾಗಲೇ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಚಿತ್ರಮಂದಿರಗಳಲ್ಲಿ 1200 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ. ಆದರೆ ಈಗಲೂ ಸಿನಿಮಾವನ್ನು ಪೇ ಪರ್ ವೀವ್ ಮಾದರಿಯಲ್ಲಿ ಬಿಡುಗಡೆ ಮಾಡಿರುವುದು ಹಲವರ ಬೇಸರಕ್ಕೆ ಕಾರಣವಾಗಿದೆ. ಆದರೆ ಈ ಪೇ ಪರ್ ವೀವ್ ಅಥವಾ ರೆಂಟಲ್ ಮಾಡೆಲ್‌ ಎಷ್ಟು ದಿನ ಇರುತ್ತದೆಯೋ ಗೊತ್ತಿಲ್ಲ. ರೆಂಟಲ್ ಮಾದರಿ ಮುಗಿದ ಬಳಿಕ ಉಚಿತವಾಗಿ ಅಮೆಜಾನ್‌ನಲ್ಲಿಯೇ 'ಕೆಜಿಎಫ್ 2' ಸಿನಿಮಾ ಲಭ್ಯವಾಗುವ ಸಾಧ್ಯತೆ ಇದೆ. ಈಗಾಗಲೇ 'ಕೆಜಿಎಫ್; ಚಾಪ್ಟರ್ 1' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಉಚಿತ ವೀಕ್ಷಣೆಗೆ ಲಭ್ಯವಿದೆ.

    English summary
    KGF 2 movie streaming in rent movie model in Amazon prime. people need to pay 199 rs to watch KGF 2 movie in Amazon prime even they were a subscribers of Amazon prime.
    Tuesday, May 17, 2022, 14:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X