For Quick Alerts
  ALLOW NOTIFICATIONS  
  For Daily Alerts

  ತನ್ನ ತಂದೆಗೆ ಮತ್ತೊಮ್ಮೆ ಮೋಸ ಮಾಡಿದ ಬಾಲಕೃಷ್ಣ: ಎನ್‌ಟಿಆರ್ 2ನೇ ಪತ್ನಿ ಲಕ್ಷ್ಮಿ

  |

  ಬಾಲಕೃಷ್ಣ ನಡೆಸಿಕೊಡುತ್ತಿರುವ ಟಾಕ್‌ಶೋ 'ಅನ್‌ಸ್ಟಾಪೆಬಲ್' ಎರಡನೇ ಸೀಸನ್ ಪ್ರಸಾರವಾಗುತ್ತಿದೆ. ಮೊದಲ ಎಪಿಸೋಡ್‌ನಲ್ಲಿ ಬಾಕೃಷ್ಣರ ಬಾವ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅತಿಥಿಯಾಗಿ ಆಗಮಿಸಿ ರಾಜಕೀಯ ಹಾಗೂ ಕೌಟುಂಬಿಕ ವಿಷಯಗಳನ್ನು ಮಾತನಾಡಿದ್ದಾರೆ.

  ಚಂದ್ರಬಾಬು ನಾಯ್ಡು ಭಾಗವಹಿಸಿದ್ದ ಮೊದಲ ಎಪಿಸೋಡ್‌, ತೆಲುಗು ರಾಜ್ಯಗಳ ರಾಜಕೀಯ ವಲಯದಲ್ಲಿ ಸಣ್ಣ ಮಟ್ಟಿನ ಸಂಚಲನ ಸೃಷ್ಟಿಸಿದೆ. ಕೆಲವು ರಾಜಕೀಯ ಪ್ರಮುಖರು ಬಾಲಕೃಷ್ಣ ಶೋನಲ್ಲಿ ಚಂದ್ರಬಾಬು ನಾಯ್ಡು ಆಡಿರುವ ಮಾತಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

  ಒಂದೇ ಎಪಿಸೋಡ್‌ಗೆ ಧೂಳೆಬ್ಬಿಸಿದ ಬಾಲಕೃಷ್ಣ: ಅನ್‌ಸ್ಟಾಪೆಬಲ್ 2 ಎಪಿಸೋಡ್ ವೈರಲ್ಒಂದೇ ಎಪಿಸೋಡ್‌ಗೆ ಧೂಳೆಬ್ಬಿಸಿದ ಬಾಲಕೃಷ್ಣ: ಅನ್‌ಸ್ಟಾಪೆಬಲ್ 2 ಎಪಿಸೋಡ್ ವೈರಲ್

  ಬಾಲಕೃಷ್ಣ ತಂದೆ, ಚಂದ್ರಬಾಬು ನಾಯ್ಡು ಮಾವ ಸೀನಿಯರ್ ಎನ್‌ಟಿಆರ್ ಅವರ ಎರಡನೇ ಪತ್ನಿ ಲಕ್ಷ್ಮಿ ಪಾರ್ವತಿ ಸಹ ಇದೀಗ ಈ ಎಪಿಸೋಡ್‌ ಬಗ್ಗೆ ಮಾತನಾಡಿದ್ದು, ನಟ ಬಾಲಕೃಷ್ಣ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಲಕೃಷ್ಣ ಈಗ ಮತ್ತೊಮ್ಮೆ ತಮ್ಮ ತಂದೆಗೆ ಮೋಸ ಮಾಡಿದ್ದಾರೆ ಎಂದಿದ್ದಾರೆ.

  ಚಂದ್ರಬಾಬು ನಾಯ್ಡು ಹೇಳಿದ್ದೇನು?

  ಚಂದ್ರಬಾಬು ನಾಯ್ಡು ಹೇಳಿದ್ದೇನು?

  1995 ರಲ್ಲಿ ಎನ್‌ಟಿಆರ್ ಅವರನ್ನು ಪದವಿಯಿಂದ ಕೆಳಗೆ ಇಳಿಸುವ ಮುನ್ನ ನಾನು ಅವರೊಟ್ಟಿಗೆ ಸುಮಾರು ಬಾರಿ ಮಾತನಾಡಿದೆ. ಅವರ ಕಾಲು ಹಿಡಿದು ಕೇಳಿಕೊಂಡೆ. ಆದರೆ ಅವರು ಒಪ್ಪಲಿಲ್ಲ. ಆನಂತರ ನಾವು ಕಠಿಣವಾದ ತೀರ್ಮಾನ ತೆಗೆದುಕೊಂಡೆವು. ಹನುಮಂತ, ರಾಮನೊಟ್ಟಿಗೆ ಯುದ್ಧ ಮಾಡಿದಂತೆ ನಾನು ನನ್ನ ದೇವರು ಎನ್‌ಟಿಆರ್ ಅವರೊಟ್ಟಿಗೆ ಯುದ್ಧ ಮಾಡಿದೆ ಎಂದು ಬಾಲಕೃಷ್ಣರ ಶೋನಲ್ಲಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಬಾಲಕೃಷ್ಣ, ಹೌದು, ನಾನು ಸಹ ಜೊತೆಯಲ್ಲಿಯೇ ಇದ್ದೆ'' ಎಂದಿದ್ದರು.

  ಚಂದ್ರಬಾಬು ನಾಯ್ಡು ಸುಳ್ಳುಗಾರ: ಲಕ್ಷ್ಮಿ ಪಾರ್ವತಿ

  ಚಂದ್ರಬಾಬು ನಾಯ್ಡು ಸುಳ್ಳುಗಾರ: ಲಕ್ಷ್ಮಿ ಪಾರ್ವತಿ

  ಚಂದ್ರಬಾಬು ನಾಯ್ಡು ಮಾತಿಗೆ ಮಾಧ್ಯಮಗಳ ಬಳಿ ಪ್ರತಿಕ್ರಿಯಿಸಿರುವ ಎನ್‌ಟಿಆರ್ ಎರಡನೇ ಪತ್ನಿ ಲಕ್ಷ್ಮಿ, ''ಚಂದ್ರಬಾಬು ನಾಯ್ಡು, ಬಾಲಕೃಷ್ಣಗಿಂತಲೂ ಉತ್ತಮ ನಟ, ಆತ ತಾನು ಎನ್‌ಟಿಆರ್ ಕಾಲು ಹಿಡಿದೆ ಎಂದಿದ್ದಾರೆ. ಆದರೆ ಯಾವ ದಿನಾಂಕ ಎಂದು ಹೇಳಿಲ್ಲ. ಅಸಲಿಗೆ ಚಂದ್ರಬಾಬು ನಾಯ್ಡು ಬಹಳ ಮೊದಲೇ ಎನ್‌ಟಿಆರ್ ವಿರುದ್ಧ ಗೌಪ್ಯವಾಗಿ ಸಂಚು ರೂಪಿಸಿದ್ದರು. ನಾನೇ ಮುಂದಿನ ಸಿಎಂ ಎಂದು ಮೊದಲೇ ಹೇಳಿಕೊಂಡು ಓಡಾಡಿದ್ದರು. ಎಂಎಲ್‌ಎಗಳಿಗೆ ಹಣ ಕೊಟ್ಟು ಖರೀದಿಸಿದ್ದರು. ಹೋಟೆಲ್‌ಗಳನ್ನು ಬುಕ್ ಮಾಡಿ ತಯಾರಾಗಿದ್ದರು'' ಎಂದಿದ್ದಾರೆ ಲಕ್ಷ್ಮಿ.

  'ಎನ್‌ಟಿಆರ್ ಬಗ್ಗೆ ನೀಚವಾಗಿ ನಡೆದುಕೊಂಡ ಚಂದ್ರಬಾಬು ನಾಯ್ಡು'

  'ಎನ್‌ಟಿಆರ್ ಬಗ್ಗೆ ನೀಚವಾಗಿ ನಡೆದುಕೊಂಡ ಚಂದ್ರಬಾಬು ನಾಯ್ಡು'

  ''ಚಂದ್ರಬಾಬು ನಾಯ್ಡು ಬಹಳ ಸುಳ್ಳು ಹೇಳುತ್ತಾರೆ. ಎನ್‌ಟಿಆರ್ ಅನ್ನು ಕೆಳಗೆ ಇಳಿಸಿದ ಬಳಿಕವೂ ಅವರ ವಿರುದ್ಧ ಹಲವು ಕಡೆ ಕೆಟ್ಟದಾಗಿ ಮಾತನಾಡಿದರು. ಪತ್ರಿಕೆಗಳಿಗೆ ಹೇಳಿಕೆಗಳನ್ನು ನೀಡಿದರು. ತಮ್ಮದೇ ಪತ್ರಿಕೆಯಲ್ಲಿ ಕೆಟ್ಟದಾಗಿ ಆರ್ಟಿಕಲ್‌ಗಳನ್ನು ಬರೆಸಿದರು. ಎನ್‌ಟಿಆರ್ ಅನ್ನು ಇಷ್ಟೋಂದು ದ್ವೇಷಿಸಿದ ಮತ್ತೊಬ್ಬ ವ್ಯಕ್ತಿಯನ್ನು ನಾನು ನೋಡಿಲ್ಲ. ಆದರೆ ಈಗ ನನಗೆ ಎನ್‌ಟಿಆರ್ ಮೇಲೆ ಪ್ರೀತಿ, ಗೌರವ ಇತ್ತು ಎಂದು ಸುಳ್ಳು ಹೇಳುತ್ತಿದ್ದಾರೆ'' ಎಂದಿದ್ದಾರೆ ಲಕ್ಷ್ಮಿ.

  ಬಾಲಕೃಷ್ಣ ಸಹ ಬೆನ್ನಿಗೆ ಚೂರಿ ಹಾಕಿದರು: ಲಕ್ಷ್ಮಿ

  ಬಾಲಕೃಷ್ಣ ಸಹ ಬೆನ್ನಿಗೆ ಚೂರಿ ಹಾಕಿದರು: ಲಕ್ಷ್ಮಿ

  ''ಎನ್‌ಟಿಆರ್‌ ಬೆನ್ನಿಗೆ ಚೂರಿ ಹಾಕಿದ ಚಂದ್ರಬಾಬು ನಾಯ್ಡುಗೆ ಜೊತೆಯಾಗಿದ್ದಿದ್ದು ಬಾಲಕೃಷ್ಣ, ಈಗ ಅವರಿಬ್ಬರೇ ಸೇರಿಕೊಂಡು ತಮ್ಮದು ತಪ್ಪಿಲ್ಲ ಎನ್ನುವಂತೆ ಮಾತನಾಡಿಕೊಂಡಿದ್ದಾರೆ. ಇದು ಹಾಸ್ಯಾಸ್ಪದ. ಬಾಲಕೃಷ್ಣ ಬಗ್ಗೆ ನನಗೆ ಗೌರವ ಇತ್ತು. ಆದರೆ ಚಂದ್ರಬಾಬು ನಾಯ್ಡು ಜೊತೆಗೆ ಸೇರಿಕೊಂಡು ಆತ ಮತ್ತೊಮ್ಮೆ ತನ್ನ ತಂದೆಗೆ ಬೆನ್ನಿಗೆ ಚೂರಿ ಹಾಕಿದ್ದಾರೆ. ಈಗ ಎಲೆಕ್ಷನ್‌ ಹತ್ತಿರ ಬರುತ್ತಿದೆ ಎಂದು ಬಾವ ಭಾಮೈದ ಸೇರಿಕೊಂಡು ಈ ಟಾಕ್‌ಶೋ ಮೂಲಕ ಹೊಸ ನಾಟಕವಾಡಿದ್ದಾರೆ'' ಎಂದಿದ್ದಾರೆ ಲಕ್ಷ್ಮಿ ಪಾರ್ವತಿ.

  English summary
  NTR's second wife Laxmi Parvathi lambasted on former CM Chandrababu Naidu and Nandamuri Balakrishna for talking about NTR in talk show.
  Monday, October 17, 2022, 19:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X