For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬರುತ್ತಿದೆ 'ಸ್ಕ್ಯಾಮ್': ಈ ಬಾರಿ ತೆಲಗಿ ಕರ್ಮಕಾಂಡ

  |

  'ಸ್ಕ್ಯಾಮ್-1992' ವೆಬ್ ಸರಣಿ ಭಾರತದ ಅತ್ಯುತ್ತಮ ವೆಬ್ ಸರಣಿಗಳಲ್ಲೊಂದು. ಹನ್ಸಲ್ ಮೆಹ್ತಾ ನಿರ್ದೇಶಿಸಿದ್ದ ಈ ವೆಬ್ ಸರಣಿ ಹರ್ಷದ್ ಮೆಹ್ತಾ ನ ಷೇರುಪೇಟೆ ಹಗರಣವನ್ನು ಅದ್ಭುತವಾಗಿ ಚಿತ್ರಿಸಿಕೊಟ್ಟಿತ್ತು.

  ಇದೀಗ ಹನ್ಸಲ್ ಮೆಹ್ತಾ ಹೊಸ 'ಸ್ಕ್ಯಾಮ್' ಅನ್ನು ಘೋಷಿಸಿದ್ದಾರೆ. ಹರ್ಷದ್ ಮೆಹ್ತಾ ಪ್ರಕರಣದ ಬಳಿಕ ಈ ಬಾರಿ ಕುಖ್ಯಾತ ಅಬ್ದುಲ್ ಕರೀಂ ತೆಲಗಿ ಕತೆಯನ್ನು ತೆರೆಗೆ ತರುತ್ತಿದ್ದಾರೆ.

  'ತಾಂಡವ್' ಗಾಗಿ ಬೇಷರತ್ ಕ್ಷಮೆ ಕೇಳಿದ ಅಮೆಜಾನ್ ಪ್ರೈಂ

  ಛಾಪಾ ಕಾಗದ ಹಗರಣದ ಪ್ರಮುಖ ರುವಾರಿ, ತನ್ನ ತಂತ್ರದಿಂದ ಸರ್ಕಾರ ಬೊಕ್ಕಸಕ್ಕೆ ಭಾರಿ ಕೊಡಲಿ ಪೆಟ್ಟು ಕೊಟ್ಟಿದ್ದ ತೆಲಗಿಯ ಕತೆಯನ್ನು ವೆಬ್ ಸರಣಿ ಮಾಡುತ್ತಿದ್ದಾರೆ ಹನ್ಸಲ್ ಮೆಹ್ತಾ.

  ಹೊಸ ಸ್ಕ್ಯಾಮ್ ಗೆ 'ಸ್ಕ್ಯಾಮ್ 2003: ದಿ ಕ್ಯೂರಿಯಸ್ ಕೇಸ್ ಆಫ್ ಅಬ್ದುಲ್ ತೆಲಗಿ' ಎಂದು ಹೆಸರಿಡಲಾಗಿದೆ. ಈ ವೆಬ್ ಸರಣಿಗೆ ಚಿತ್ರಕತೆಯನ್ನು ಮರಾಠಿ ಚಿತ್ರಕತೆಗಾರ ಕಿರಣ್ ಯಜ್ಞೋಪವಿತ್ ಬರೆಯುತ್ತಿದ್ದಾರೆ. ವೆಬ್ ಸರಣಿಯು ಲೇಖಕ, ಪತ್ರಕರ್ತ ಸಂಜಯ್ ಸಿಂಗ್ ಅವರ 'ರಿಪೋರ್ಟರ್ ಡೈರಿ' ಪುಸ್ತಕ ಆಧರಿಸಿದೆ. ಸಂಜಯ್ ಸಿಂಗ್ ಅವರೇ ಮೊದಲಿಗೆ ಕರೀಂ ಲಾಲ್ ತೆಲಗಿಯ ಹಗರಣವನ್ನು ಬಹಿರಂಗಗೊಳಿಸಿದ್ದರು.

  ಸ್ಕ್ಯಾಮ್-1992 ನಲ್ಲಿ ಹರ್ಷದ್ ಮೆಹ್ತಾ ಪಾತ್ರ ನಿರ್ವಹಿಸಿದ್ದ ಪ್ರತಿಭಾವಂತ ನಟ ಪ್ರತೀಕ್ ಗಾಂಧಿ ಅವರೇ 'ಸ್ಕ್ಯಾಮ್‌ 2003' ನಲ್ಲಿ ಕರೀಂ ತೆಲಗಿಯ ಪಾತ್ರ ನಿರ್ವಸಲಿದ್ದಾರೆ ಎನ್ನಲಾಗುತ್ತಿದೆ.

  ಒಟಿಟಿಗಳಿಗೆ ಸರ್ಕಾರ ಮೂಗುದಾರ: ಸರ್ಕಾರದ ನಿಗಾವಣೆಯಲ್ಲಿ 'ಸ್ಟ್ರೀಮಿಂಗ್

  ರೈಲುಗಳಲ್ಲಿ ಹಣ್ಣು-ತರಕಾರಿ ಮಾರುತ್ತಿದ್ದ ಕರೀಂ ತೆಲಗಿ ಹೇಗೆ ಸರ್ಕಾರವನ್ನೇ ಮೋಸ ಮಾಡಿ, ಹಲವು ರಾಜ್ಯಗಳಲ್ಲಿ ತನ್ನ ನಕಲಿ ಛಾಪಾ ಕಾಗದ ಜಾಲವನ್ನು ಹರಡಿಸಿ ಕೋಟ್ಯಂತರ ಹಣ ಮಾಡಿದ ಎಂಬುದು ವೆಬ್ ಸರಣಿಯಲ್ಲಿ ಕಾಣಸಿಗುತ್ತದೆ.

  2003 ರಲ್ಲಿ ಕರೀಂ ತೆಲಗಿಯ ಹಗರಣದ ಅಂದಾಜು ಮೊತ್ತ 20,000 ಕೋಟಿ. ಹನ್ಸಲ್ ಮೆಹ್ತಾ ನಿರ್ದೇಶಿಸುತ್ತಿರುವ ಈ ವೆಬ್ ಸರಣಿಯು ಸೋನಿ ಲಿವ್‌ನಲ್ಲಿ ಪ್ರಸಾರವಾಗಲಿದೆ.

  English summary
  Makers scam 1992 announce Scam 2003. This new scam will based on Abdul Kareem Telagi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X