ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ ಬಳಿಕ ಕಿರುತೆರೆಗೆ 'ಮಾಸ್ಟರ್' ದಾಂಗುಡಿ

ಕೊರೊನಾ ನಿಯಮಾವಳಿಗಳ ನಡುವೆಯೂ ವಿಜಯ್ ನಟನೆಯ ತಮಿಳು ಸಿನಿಮಾ 'ಮಾಸ್ಟರ್' ಸೂಪರ್ ಡೂಪರ್ ಹಿಟ್ ಆಗಿದೆ. ಕೇವಲ ಎಂಟೇ ದಿನಕ್ಕೆ 200 ಕೋಟಿ ಹಣ ಗಳಿಸಿದೆ ಸಿನಿಮಾ.

ಕೊರೊನಾ ನಿಯಮಾವಳಿಗಳಿಂದಾಗಿ ಚಿತ್ರಮಂದಿರದಲ್ಲಿ 50% ಪ್ರೇಕ್ಷಕರಿಗಷ್ಟೆ ಸಿನಿಮಾ ವೀಕ್ಷಿಸಲು ಅನುಮತಿ ಇದ್ದರೂ ಸಹ ಮಾಸ್ಟರ್ ಸಿನಿಮಾ ಗಳಿಕೆಯಲ್ಲಿ ದಾಖಲೆ ಬರೆದಿದೆ. ಕೇವಲ ಎಂಟು ದಿನದಲ್ಲಿ 200 ಕೋಟಿಗೂ ಹೆಚ್ಚು ಹಣ ಗಳಿಸಿದೆ ಈ ಸಿನಿಮಾ.

ಹಿರಿತೆರೆಯಲ್ಲಿ ಅದ್ಭುತವಾಗಿ ಪ್ರದರ್ಶನವಾಗುತ್ತಿರುವ ಮಾಸ್ಟರ್ ಸಿನಿಮಾ ಕೆಲವೇ ದಿನಗಳಲ್ಲಿ ಕಿರುತೆರೆಗೆ ದಾಂಗುಡಿ ಇಡಲಿದೆ. ಮಾಸ್ಟರ್ ಸಿನಿಮಾವು ಫೆಬ್ರವರಿಯಲ್ಲಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಆ ಮೂಲಕ ಕಿರುತೆರೆಯಲ್ಲೂ ಕಮಾಲ್ ಮಾಡಲು ತಯಾರಾಗಿದೆ.

ಫೆಬ್ರವರಿ 12 ರಂದು 'ಮಾಸ್ಟರ್' ಬಿಡುಗಡೆ

ಫೆಬ್ರವರಿ 12 ರಂದು 'ಮಾಸ್ಟರ್' ಬಿಡುಗಡೆ

ಫೆಬ್ರವರಿ 12 ರಂದು 'ಮಾಸ್ಟರ್' ಸಿನಿಮಾ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಅಮೆಜಾನ್ ಪ್ರೈಂ ಭಾರಿ ಮೊತ್ತಕ್ಕೆ ವಿಜಯ್ ನಟನೆಯ ಮಾಸ್ಟರ್ ಸಿನಿಮಾದ ಸ್ಟ್ರೀಮಿಂಗ್ ಹಕ್ಕನ್ನು ಖರೀದಿಸಿದೆ. ಸಿನಿಮಾ ಹಳತು ಎನಿಸಿಕೊಳ್ಳುವ ಮುನ್ನವೇ ಬಿಡುಗಡೆ ಮಾಡಿ ಲಾಭ ಮಾಡಲು ಯೋಚಿಸುತ್ತಿದ್ದೆ ಅಮೆಜಾನ್.

ಭಾರಿ ಮೊತ್ತಕ್ಕೆ ಖರೀಸಿದೆ ಅಮೆಜಾನ್ ಪ್ರೈಂ

ಭಾರಿ ಮೊತ್ತಕ್ಕೆ ಖರೀಸಿದೆ ಅಮೆಜಾನ್ ಪ್ರೈಂ

ಭಾರಿ ಮೊತ್ತಕ್ಕೆ ಮಾಸ್ಟರ್ ಸಿನಿಮಾದ ಸ್ಟ್ರೀಮಿಂಗ್ ಹಕ್ಕನ್ನು ಖರೀದಿಸಿದೆ ಅಮೆಜಾನ್ ಪ್ರೈಂ. ಚಿತ್ರಮಂದಿರದಲ್ಲಿ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿರುವ ಮಾಸ್ಟರ್ ಹೆಚ್ಚು-ಹೆಚ್ಚು ಜನರಿಗೆ ತಲುಪುವ ಮುನ್ನವೇ ತಮ್ಮ ಮಿತಿಯಲ್ಲಿರುವ ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನ ಅಮೆಜಾನ್ ಪ್ರೈಂ ನದ್ದು.

ಜನವರಿ 13 ರಲ್ಲಿ ಸಿನಿಮಾ ಬಿಡುಗಡೆ ಆಗಿತ್ತು

ಜನವರಿ 13 ರಲ್ಲಿ ಸಿನಿಮಾ ಬಿಡುಗಡೆ ಆಗಿತ್ತು

'ಮಾಸ್ಟರ್' ಸಿನಿಮಾವನ್ನು ಖರೀದಿಸಿ ನೇರವಾಗಿ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಮಾಡಲು ಪ್ರಯತ್ನ ನಡೆದಿತ್ತು. ಆದರೆ ವಿಜಯ್ ಅವರ ನಿರಾಕರಣೆಯಿಂದಾಗಿ ಅಮೆಜಾನ್ ಆಫರ್ ಅನ್ನು ನಿರ್ಮಾಪಕ ಕ್ಸೇವಿಯರ್ ಬಿಟ್ಟೊ ಬೇಡವೆಂದರು. ಕೊನೆಗೆ ಜನವರಿ 13 ರಂದು ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಆಯಿತು.

ಲೋಕೇಶ್ ಕನಕರಾಜನ್ ನಿರ್ದೇಶನ

ಲೋಕೇಶ್ ಕನಕರಾಜನ್ ನಿರ್ದೇಶನ

ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಜೊತೆಗೆ ವಿಲನ್ ಆಗಿ ವಿಜಯ್ ಸೇತುಪತಿ ನಟಿಸಿದ್ದಾರೆ. ನಾಯಕಿಯಾಗಿ ಮಾಳವಿಕಾ ಮೋಹನನ್ ಇದ್ದಾರೆ. ಸಿನಿಮಾವನ್ನು ಲೋಕೇಶ್ ಕನಕರಾಜನ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ವಿಜಯ್ ಹಾಗೂ ವಿಜಯ್ ಸೇತುಪತಿ ನಟನೆ ಜುಗಲ್‌ಬಂಧಿ ಭಾರಿ ಮೆಚ್ಚುಗೆ ಗಳಿಸಿದೆ.

More from Filmibeat

English summary
Vijay's Master movie will release on Amazon prime in february. Master performing very well on Amazon prime.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X