For Quick Alerts
    ALLOW NOTIFICATIONS  
    For Daily Alerts

    ಪ್ರಾದೇಶಿಕ ಭಾಷೆಗಳಲ್ಲಿ 'ಮನಿಹೈಸ್ಟ್', 'ನಾರ್ಕೋಸ್' ಇತರೆ ವೆಬ್ ಸರಣಿ

    |

    ಒಟಿಟಿಗಳಿಂದಾಗಿ ವಿಶ್ವ ಸಿನಿಮಾ, ವೆಬ್ ಸರಣಿಗಳು ಬೆರಳ ತುದಿಗೆ ಸಿಗುತ್ತಿವೆ. ಸ್ಪ್ಯಾನಿಷ್ ಭಾಷೆಯ 'ಲಾ ಕಾಸಾ ದೆ ಪೆಪೇಲ್' (ಮನಿ ಹೈಸ್ಟ್), 'ನಾರ್ಕೊಸ್'ನಂಥ ಅದ್ಭುತ ವೆಬ್ ಸರಣಿಗಳಿಗೆ ಭಾರತದಲ್ಲಿ ದೊಡ್ಡ ಸಂಖ್ಯೆಯ ವೀಕ್ಷಕರಿದ್ದಾರೆ.

    ನೆಟ್‌ಫ್ಲಿಕ್ಸ್‌ನಲ್ಲಿರುವ 'ಮನಿಹೈಸ್ಟ್', 'ನಾರ್ಕೊಸ್' ವೆಬ್ ಸರಣಿಗಳು ಪ್ರಸ್ತುತ ಸ್ಪ್ಯಾನಿಷ್ ಹಾಗೂ ಇಂಗ್ಲೀಷ್ ಭಾಷೆಯಲ್ಲಷ್ಟೆ ಲಭ್ಯ. ಭಾರತದಂಥ ವಿವಿಧ ಭಾಷೆಗಳ ದೇಶದ ಜನರಿಗೆ ಈ ವೆಬ್ ಸರಣಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಲೆಂದು ನೆಟ್‌ಫ್ಲಿಕ್ಸ್‌ ಈ ವೆಬ್ ಸರಣಿಗಳನ್ನು ಪ್ರಾದೇಶಿಕ ಭಾಷೆಗಳಿಗೆ ಡಬ್ ಮಾಡಿ ಪ್ರಸಾರ ಮಾಡಲು ಯೋಜಿಸಿದೆ.

    ಈ ಬಗ್ಗೆ 'ನೆಟ್‌ಫ್ಲಿಕ್ಸ್ ಇಂಡಿಯಾ' ಟ್ವಿಟ್ಟರ್ ಖಾತೆಯಲ್ಲಿ ಸುಳಿವೊಂದನ್ನು ನೀಡಿದ್ದು, 'ನಾರ್ಕೊಸ್', 'ಮನಿಹೈಸ್ಟ್' ವೆಬ್ ಸರಣಿಗಳು ತಮಿಳು, ಮಲಯಾಳಂ ಭಾಷೆಗಳಲ್ಲಿ ಶೀಘ್ರದಲ್ಲಿಯೇ ಲಭ್ಯವಾಗುವ ಸಂಭವ ದಟ್ಟವಾಗಿವೆ. ನಾರ್ಕೊಸ್ ಇಂಡಿಯಾ ಮಾಡಿರುವ ಟ್ವೀಟ್‌ನಲ್ಲಿ 'ನಾರ್ಕೊಸ್‌'ನ ಪಾಬ್ಲೊ ಎಸ್ಕೊಬಾರ್ ಕೇರಳಿಗನಂತೆ ಪಂಚೆ ಉಟ್ಟಿಕೊಂಡಿದ್ದರೆ, ಮನಿಹೈಸ್ಟ್‌ನ ಪ್ರೊಫೆಸರ್ ತಮಿಳಿನಲ್ಲಿ ತಿನಿಸುಗಳ ಹೆಸರು ಬರೆದಿದ್ದಾರೆ.

    ನೆಟ್‌ಫ್ಲಿಕ್ಸ್‌ನಲ್ಲಿ 'ಮನಿಹೈಸ್ಟ್', 'ನಾರ್ಕೊಸ್' ಮಾತ್ರವೇ ಅಲ್ಲದೆ, 'ಬ್ರೇಕಿಂಗ್ ಬ್ಯಾಡ್', 'ಸ್ಟ್ರೇಂಜರ್ ಥಿಂಗ್ಸ್', 'ಡಾರ್ಕ್', 'ದಿ ಕ್ರೌನ್', 'ಆರೆಂಜ್ ಇಸ್ ದಿ ನ್ಯೂ ಬ್ಲ್ಯಾಕ್', 'ಕ್ವೀನ್ಸ್ ಗ್ಯಾಂಬಿಟ್', 'ಫ್ರೆಂಡ್ಸ್', 'ಹೌಸ್ ಆಫ್ ಕಾರ್ಡ್ಸ್', 'ಶೆರ್ಲಾಕ್ ಹೋಮ್ಸ್' ಇನ್ನೂ ಹಲವು ಉತ್ತಮ ವೆಬ್ ಸರಣಿಗಳಿವೆ. ಅವುಗಳೂ ಸಹ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿವೆಯೇ ಕಾದು ನೋಡಬೇಕಿದೆ.'

    ಅದು ಮಾತ್ರವೇ ಅಲ್ಲದೆ ವೆಬ್ ಸರಣಿಗಳು ತಮಿಳು, ಮಲಯಾಳಂ ಭಾಷೆಗಳಲ್ಲಿ ಮಾತ್ರವೇ ಲಭ್ಯವಾಗಲಿವೆಯೇ ಅಥವಾ ಕನ್ನಡ, ತೆಲುಗು, ಹಿಂದಿ ಇನ್ನಿತರೆ ಭಾರತೀಯ ಭಾಷೆಗಳಲ್ಲಿಯೂ ಲಭ್ಯವಾಗಲಿವೆಯೇ ಎಂಬುದೂ ಸಹ ಕುತೂಹಲ ಕೆರಳಿಸಿದೆ. ನೆಟ್‌ಫ್ಲಿಕ್ಸ್ ಒಟಿಟಿಯು ಕನ್ನಡಕ್ಕೆ ಬಹಳ ಕಡಿಮೆ ಆದ್ಯತೆಯನ್ನು ಈವರೆಗೆ ಕೊಟ್ಟಿದೆ. ಹಾಗಾಗಿ ವೆಬ್ ಸರಣಿಗಳನ್ನು ಕನ್ನಡ ಭಾಷೆಗೆ ಡಬ್ ಮಾಡುವ ಸಾಧ್ಯತೆ ಬಹಳ ಕಡಿಮೆ ಇದೆ.

    English summary
    Money Heist, Narcos web series may stream in Indian regional languages. Netflix India gave a hint about it.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X