For Quick Alerts
  ALLOW NOTIFICATIONS  
  For Daily Alerts

  ಒಂದು ವಾರದೊಳಗೆ ನಾಗ ಚೈತನ್ಯ ಸಿನಿಮಾ OTT ಡೀಲ್ ಫಿಕ್ಸ್: ಯಾವಾಗ ರಿಲೀಸ್?

  |

  ನಾಗಚೈತನ್ಯ ಹಾಗೂ ರಾಶಿ ಖನ್ನಾ ಸಿನಿಮಾ 'ಥ್ಯಾಂಕ್ ಯೂ' ಇಂದು ( ಜುಲೈ 22) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ತೆಲುಗಿನ ಸ್ಟಾರ್ ನಿರ್ಮಾಪಕ ದಿಲ್ ರಾಜು ನಿರ್ಮಾಣದ ಈ ಚಿತ್ರವನ್ನು ವಿಲಕ್ಷಣ ಕುಮಾರ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ರಾಶಿ ಖನ್ನಾ ಹಾಗೂ ಮಾಳವಿಕಾ ನಾಯರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  'ಥ್ಯಾಂಕ್ ಯೂ' ಸಿನಿಮಾ ಬಿಡುಗಡೆಯಾದ ದಿನವೇ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಓಪನಿಂಗ್ ಕೂಡ ಅಷ್ಟಕ್ಕಷ್ಟೇ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ನಾಗಚೈತನ್ಯ ಸಿನಿಮಾ ಹೇಗೆ ಮೋಡಿ ಮಾಡುತ್ತೆ ಎನ್ನುವ ಕುತೂಹಲ ಮೂಡಿಸಿದೆ.

  ಒಟಿಟಿಯಲ್ಲಿ 'ಥ್ಯಾಂಕ್ ಯೂ' ರಿಲೀಸ್?

  ಒಟಿಟಿಯಲ್ಲಿ 'ಥ್ಯಾಂಕ್ ಯೂ' ರಿಲೀಸ್?

  'ಥ್ಯಾಂಕ್ ಯೂ' ಸಿನಿಮಾ ಬಿಡುಗಡೆಯಾದ ಒಂದು ವಾರದೊಳಗೆ ಒಟಿಟಿಯಲ್ಲೂ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಟಾಲಿವುಡ್‌ನಲ್ಲಿ ಹಲವು ರೀತಿಯ ಸುದ್ದಿಗಳು ಓಡಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಕೆಲವು ಸಿನಿಮಾಗಳು ಥಿಯೇಟರ್‌ನಲ್ಲಿ ಬಿಡುಗಡೆಯಾದ 2-3 ವಾರದ ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗುತ್ತವೆ. ಈ ವಿಚಾರಕ್ಕೆ ನಿರ್ಮಾಪಕರ ಗಿಲ್ಡ್‌ನಲ್ಲಿ ಚರ್ಚೆಯಾಗಿತ್ತು.

  ಸಿನಿಮಾ ನೋಡಲು ಆಸಕ್ತಿಯಿಲ್ಲ

  ಸಿನಿಮಾ ನೋಡಲು ಆಸಕ್ತಿಯಿಲ್ಲ

  ಟಾಲಿವುಡ್ ನಿರ್ಮಾಪಕರೆಲ್ಲರೂ ಒಟ್ಟಿಗೆ ಸೇರಿ ಮೀಟಿಂಗ್ ಮಾಡಿದ್ದರು. ಇದರಲ್ಲಿ ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲು ಇಷ್ಟ ಪಡುತ್ತಿಲ್ಲ. ಈ ಕಾರಣಕ್ಕೆ 50 ದಿನಗಳ ಬಳಿಕ ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಆಗಬೇಕು ಎಂಬ ತೀರ್ಮಾನಕ್ಕೆ ಬಂದಿದ್ದರು. ಈ ಗಿಲ್ಡ್‌ನಲ್ಲಿ ನಿರ್ಮಾಪಕ ದಿಲ್ ರಾಜು ಕೂಡ ಇದ್ದರು. ಆದ್ರೀಗ ಅವರ ಸಿನಿಮಾವೇ 2-3 ವಾರಗಳ ಬಳಿಕ ಥಿಯೇಟರ್‌ಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

  ಒಟಿಟಿಯಲ್ಲಿ ದಿಲ್ ರಾಜುಗೆ ಲಾಭ?

  ಒಟಿಟಿಯಲ್ಲಿ ದಿಲ್ ರಾಜುಗೆ ಲಾಭ?

  ಇನ್ನೊಂದು ಕಡೆ 'ಥ್ಯಾಂಕ್ ಯೂ' ಸಿನಿಮಾ 6 ವಾರಗಳ ಬಳಿಕ OTT ಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅಲ್ಲದೆ ಈ ಸಿನಿಮಾದಿಂದ ದಿಲ್ ರಾಜು ಒಟಿಟಿ ರೈಟ್ಸ್‌ನಲ್ಲಿ ಉತ್ತಮ ಲಾಭ ಗಳಿಸಿದ್ದಾರೆ ಎಂದು ಹೇಳಲಾಗಿದೆ. ಅಮೆಜಾನ್ ಪ್ರೈಮ್, ಸನ್ NXT ನಲ್ಲಿ ಸಿನಿಮಾ ಪ್ರೀಮಿಯರ್ ಆಗಲಿದೆ ಎಂದು ಹೇಳಲಾಗುತ್ತಿದೆ.

  ಸಾವಿರ ಥಿಯೇಟರ್‌ನಲ್ಲಿ ಬಿಡುಗಡೆ

  ಸಾವಿರ ಥಿಯೇಟರ್‌ನಲ್ಲಿ ಬಿಡುಗಡೆ

  'ಥ್ಯಾಂಕ್ ಯೂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆ ಗಳಿಕೆ ಮಾಡುತ್ತೆ ಎನ್ನುವುದೇ ದೊಡ್ಡ ಸವಾಲಾಗಿದೆ. ನಾಗಚೈತನ್ಯ ಈ ಹಿಂದೆ ನಟಿಸಿದ ನಾಲ್ಕು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಈಗಾಗಿ ದಿಲ್‌ ರಾಜು ಸಿನಿಮಾ ಮೇಲಿನ ನಂಬಿಕೆ ಮೇಲೆ ಸಾವಿರಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ದಾರೆ. ಒಂದು ವೇಳೆ ಸಿನಿಮಾ ಗೆದ್ದರೆ, ಮತ್ತಷ್ಟು ಉತ್ತಮ ಮೊತ್ತ ಸಿಗುವ ಸಾಧ್ಯತೆಯಿದೆ.

  English summary
  Naga Chaitanya Starrer Thank You Movie Ott Release Date And Other Details, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X