For Quick Alerts
  ALLOW NOTIFICATIONS  
  For Daily Alerts

  ನಯನತಾರಾ-ವಿಘ್ನೇಶ್ ವಿವಾಹದ ದೃಶ್ಯ ನೆಟ್‌ಫಿಕ್ಸ್‌ನಲ್ಲಿ ಪ್ರಸಾರ? ಸೇಲ್ ಮಾಡಿದ ಮೊತ್ತವೆಷ್ಟು?

  |

  ಕಾಲಿವುಡ್‌ ಲವ್‌ ಬರ್ಡ್ಸ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಡುವ ತೀರ್ಮಾನಕ್ಕೆ ಬಂದಿದ್ದಾರೆ. ಇದೇ ತಿಂಗಳು ಅಂದರೆ, ಜೂನ್ 9ಕ್ಕೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮೂಲಗಳ ಪ್ರಕಾರ, ತಮಿಳು ಹಿಂದೂ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ ಎನ್ನುತ್ತಿದೆ ತಮಿಳು ಚಿತ್ರರಂಗ.

  ಇತ್ತೀಚೆಗೆ ತಮಿಳಿನ ಈ ಸೂಪರ್ ಜೋಡಿ ಸಿ ಎಂ ಸ್ಟ್ಯಾಲಿನ್‌ರನ್ನು ಭೇಟಿ ಮಾಡಿ, ಮದುವೆಗೆ ಆಹ್ವಾನ ನೀಡಿದ್ದಾರೆ. ಕಾಲಿವುಡ್ ಚಿತ್ರರಂಗದ ಸೆಲೆಬ್ರೆಟಿಗಳಾದ ರಜನಿಕಾಂತ್, ಚಿರಂಜೀವಿ, ಕಮಲ್ ಹಾಸನ್, ಅಜಿತ್, ಸೂರ್ಯ, ಕಾರ್ತಿ ಹಾಗೂ ವಿಜಯ್ ಸೇತುಪತಿ ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.

  ಸೂಪರ್‌ಸ್ಟಾರ್ ರಜನಿ ಬಂಗಲೆ ಸಮೀಪ 4 ಬೆಡ್‌ರೂಮ್ ಫ್ಲ್ಯಾಟ್ ಖರೀಸಿದ ನಯನತಾರಾಸೂಪರ್‌ಸ್ಟಾರ್ ರಜನಿ ಬಂಗಲೆ ಸಮೀಪ 4 ಬೆಡ್‌ರೂಮ್ ಫ್ಲ್ಯಾಟ್ ಖರೀಸಿದ ನಯನತಾರಾ

  ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ಮ್ಯಾಟರ್ ರಿವೀಲ್ ಆಗುತ್ತಿದ್ದಂತೆ, ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ಸಮಾರಂಭವನ್ನು ಒಟಿಟಿ ಸೆರೆಹಿಡಿಯಲಿದ್ದು, ಈ ಹಕ್ಕು ಒಟಿಟಿ ಪಾಲಾಗಿದೆ ಎಂದು ಹೇಳಲಾಗುತ್ತಿದೆ.

  ಒಟಿಟಿಯಲ್ಲಿ ನಯನತಾರಾ ಮದುವೆ?

  ಒಟಿಟಿಯಲ್ಲಿ ನಯನತಾರಾ ಮದುವೆ?

  ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ಸಮಾರಂಭವನ್ನು ಒಟಿಟಿಯಲ್ಲಿ ಪ್ರಸಾರ ಆಗಲಿದೆ ಎಂಬ ಸುದ್ದಿ ಹಬ್ಬಿದೆ. ನೆಟ್‌ಫಿಕ್ಸ್ ಸಂಸ್ಥೆ ಜೊತೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಭಾರತದ ಇದೇ ಮೊದಲ ಬಾರಿಗೆ ತಾರಾ ಜೋಡಿಯೊಂದು ತಮ್ಮ ಮದುವೆಯ ಕ್ಷಣಗಳನ್ನು ಒಟಿಟಿಗೆ ಭಾರಿ ಮೊತ್ತಕ್ಕೆ ಸೇಲ್ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.

  ನಯನತಾರಾ-ವಿಘ್ನೇಶ್ ಮದುವೆ ದಿನಾಂಕ ನಿಗದಿ, ಸ್ಥಳ ಬದಲಾವಣೆನಯನತಾರಾ-ವಿಘ್ನೇಶ್ ಮದುವೆ ದಿನಾಂಕ ನಿಗದಿ, ಸ್ಥಳ ಬದಲಾವಣೆ

  ಈ ವಿಡಿಯೋಗೆ ಗೌತಮ್ ಮೆನನ್ ಸಾರಥ್ಯ?

  ಈ ವಿಡಿಯೋಗೆ ಗೌತಮ್ ಮೆನನ್ ಸಾರಥ್ಯ?

  ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆಯನ್ನು ಡಾಕ್ಯೂಮೆಂಟರಿ ಶೈಲಿಯಲ್ಲಿ ಶೂಟ್ ಮಾಡಲಾಗುತ್ತೆ. ಈ ವಿಡಿಯೋವನ್ನು ಕಾಲಿವುಡ್‌ನ ಫೇಮಸ್ ನಿರ್ದೇಶಕ ಗೌತಮ್ ಮೆನನ್ ಸೆರೆಹಿಡಿಯಲಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರವಾಗಿ ಗೌತಮ್ ಮೆನನ್ ಆಗಲಿ, ಇಲ್ಲಾ ತಾರಾ ಜೋಡಿಯಾಗಲಿ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ. ಆದರೂ, ಕಾಲಿವುಡ್‌ನಲ್ಲಿ ಈ ವಿಷಯ ಭಾರಿ ಚರ್ಚೆಯಾಗುತ್ತಿದೆ.

  ಈ ಜೋಡಿ ಪಡೆದ ಮೊತ್ತ ಎಷ್ಟು?

  ಈ ಜೋಡಿ ಪಡೆದ ಮೊತ್ತ ಎಷ್ಟು?

  ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ಮಹಾಬಲಿಪುರಂನ 5 ಸ್ಟಾರ್ ಹೊಟೇಲ್ ಒಂದರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಇನ್ನು ಕೆಲವೇ ದಿನಗಳಲ್ಲಿ ಮದುವೆ ನಡೆಯಲಿದ್ದು ತಯಾರಿ ಜೋರಾಗಿಯೇ ನಡೆದಿದೆ ಎನ್ನಲಾಗಿದೆ. ಈ ಮಧ್ಯೆ ತಮ್ಮ ಮದುವೆ ಸಮಾರಂಭ ಕ್ಷಣಗಳನ್ನು ಪ್ರಸಾರ ಮಾಡಲು ಒಟಿಟಿಯಿಂದ ಭಾರಿ ಮೊತ್ತವನ್ನೇ ಪಡೆದಿದ್ದಾರೆ ಎಂದು ಗೆಸ್ ಮಾಡಲಾಗುತ್ತಿದೆ. ಮೂಲಗಳ ಪ್ರಕಾರ, ನಯನತಾರಾ ಒಂದು ಸಿನಿಮಾ ₹4 ರಿಂದ ₹5 ಕೋಟಿ ಪಡೆಯುತ್ತಾರೆ. ಅಷ್ಟೇ ಮೊತ್ತವನ್ನು ನೆಟ್‌ಫಿಕ್ಸ್‌ನಿಂದ ಪಡೆದಿರಬಹುದು ಎಂದು ಅಭಿಮಾನಿಗಳೇ ಊಹೆ ಮಾಡುತ್ತಿದ್ದಾರೆ.

  ಬುರ್ಜ್ ಖಲೀಫಾ ಮುಂದೆ ನಯನಾತಾರಾ ಹಣೆಗೆ ಮುತ್ತಿಟ್ಟ ವಿಘ್ನೇಶ್ ಶಿವನ್: ಹೊಸ ವರ್ಷದ ಸಂಭ್ರಮ ಹೇಗಿತ್ತು?ಬುರ್ಜ್ ಖಲೀಫಾ ಮುಂದೆ ನಯನಾತಾರಾ ಹಣೆಗೆ ಮುತ್ತಿಟ್ಟ ವಿಘ್ನೇಶ್ ಶಿವನ್: ಹೊಸ ವರ್ಷದ ಸಂಭ್ರಮ ಹೇಗಿತ್ತು?

  ಒಂದು ದಿನ ಮುನ್ನ ಆರತಕ್ಷತೆ?

  ಒಂದು ದಿನ ಮುನ್ನ ಆರತಕ್ಷತೆ?

  ಕಾಲಿವುಡ್ ಜೋಡಿ ಹಕ್ಕಿಗಳ ಮದುವೆ ಜೂನ್ 9ರ ಬೆಳಗ್ಗೆ 4 ಗಂಟೆಯಿಂದ 7 ಗಂಟೆಯೊಳಗೆ ಮುಗಿದು ಹೋಗಲಿದೆಯಂತೆ. ಇನ್ನು ಜೂನ್ 8ರಂದು ಅದೇ ಹೊಟೇಲ್‌ನಲ್ಲಿ ಆರತಕ್ಷತೆ ಕೂಡ ನಡೆಯಲಿದೆ ಎಂದು ಮೂಲಗಳು ಹೇಳುತ್ತಿವೆ. ಆದರೆ, ಇದ್ಯಾವುದನ್ನೂ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಎಲ್ಲೂ ಹೇಳಿಕೊಂಡಿಲ್ಲ.

  English summary
  Nayanthara Vignesh Wedding To Be Streamed On OTT Netflix What Is The Amount?, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X