Just In
Don't Miss!
- News
ಬೆಂಗಳೂರಿನಲ್ಲಿ 10 ದಿನದಲ್ಲಿ ಕೊರೊನಾ ಏರಿಕೆ; 9 ಕಂಟೇನ್ಮೆಂಟ್ ಝೋನ್ ಘೋಷಣೆ
- Finance
ಫಾಸ್ಟ್ಟ್ಯಾಗ್ ಟೋಲ್ ಕಲೆಕ್ಷನ್: ಒಂದು ದಿನಕ್ಕೆ 104 ಕೋಟಿ ರೂಪಾಯಿ
- Automobiles
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಸುಳಿವು ನೀಡಿದ ಪೆಟ್ರೋಲಿಯಂ ಸಚಿವ
- Lifestyle
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
- Sports
ಮೊಟೆರಾ ಪಿಚ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆಗೆ ಅಲಾಸ್ಟೇರ್ ಕುಕ್ ಕಿಡಿ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರಿ ದುಬಾರಿ ಮೊತ್ತಕ್ಕೆ ನೆಟ್‌ಫ್ಲಿಕ್ಸ್‌ಗೆ ಸೇಲ್ ಆದ ಧನುಷ್ ಸಿನಿಮಾ
ಸಿನಿಮಾಗಳು ಮರಳಿ ತೆರೆದಿದ್ದು ಖ್ಯಾತ ನಟರೆಲ್ಲರೂ ತಮ್ಮ ಸಿನಿಮಾವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಲು ಯತ್ನಿಸುತ್ತಿರುವಾಗ ತಮಿಳು ನಟ ಧನುಷ್ ಮಾತ್ರ ತಮ್ಮ ಸಿನಿಮಾವನ್ನು ಒಟಿಟಿಗೆ ಮಾರಿದ್ದಾರೆ.
ಹೌದು, ಧನುಷ್ ನಟನೆಯ ತಮಿಳು ಸಿನಿಮಾ 'ಜಗಮೇ ತಾಂಡಿರಮ್' ಚಿತ್ರಮಂದಿರದ ಬದಲಿಗೆ ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಆಗಲಿದೆ. ಅದೂ ದುಬಾರಿ ಒಟಿಟಿ ನೆಟ್‌ಫ್ಲಿಕ್ಸ್‌ನಲ್ಲಿ.
ಧನುಷ್, ಐಶ್ವರ್ಯಾ ಲಕ್ಷ್ಮಿ ಕೆಲವು ವಿದೇಶಿ ನಟರು ನಟಿಸಿರುವ ಆಕ್ಷಮ್-ಕಾಮಿಡಿ ಸಿನಿಮಾ ಜಗಮೇ ತಾಂಡಿರಮ್ ಅನ್ನು ನಿರ್ದೇಶನ ಮಾಡಿರುವುದು ಪ್ರತಿಭಾವಂತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು. ಈ ಸಿನಿಮಾವನ್ನು ಬಹು ದುಬಾರಿ ಮೊತ್ತಕ್ಕೆ ನೆಟ್‌ಫ್ಲಿಕ್ಸ್ ಕೊಂಡುಕೊಂಡಿದೆ ಎನ್ನಲಾಗುತ್ತಿದೆ.

ಜಗಮೇ ತಾಂಡಿರಮ್ ಗೆ ಭಾರಿ ಹಣ ನೀಡಿರುವ ನೆಟ್‌ಫ್ಲಿಕ್ಸ್
ಒಟಿಟಿಗೆ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ತಮಿಳು ಸಿನಿಮಾ ಎಂಬ ಖ್ಯಾತಿಯನ್ನು 'ಜಗಮೇ ತಾಂಡಿರಮ್' ಪಡೆದುಕೊಂಡಿದೆ. ಈ ಸಿನಿಮಾಕ್ಕೆ ನೆಟ್‌ಫ್ಲಿಕ್ಸ್ ಬರೋಬ್ಬರಿ 55 ಕೋಟಿ ರೂಪಾಯಿಗಳನ್ನು ನೀಡಿದೆಯಂತೆ. ಇನ್ನಾವ ತಮಿಳು ಸಿನಿಮಾಕ್ಕೂ ಒಟಿಟಿಗಳಿಂದ ಇಷ್ಟೋಂದು ಸಂಭಾವನೆ ದೊರೆತಿಲ್ಲ.

ಸೂರರೈ ಪೊಟ್ರುಗೆ 42 ಕೋಟಿ
ಅಮೆಜಾನ್ ಪ್ರೈಂ ನಲ್ಲಿ ನೇರವಾಗಿ ಬಿಡುಗಡೆ ಆಗಿದ್ದ ಸೂರ್ಯ ನಟನೆಯ 'ಸೂರರೈ ಪೊಟ್ರು' ಸಿನಿಮಾಕ್ಕೆ 42 ಕೋಟಿ ಹಣ ನೀಡಲಾಗಿತ್ತು. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಒಂದು ತಿಂಗಳಿಗೆ ಅಮೆಜಾನ್ ಪ್ರೈಂಗೆ ಮಾರಲ್ಪಟ್ಟ ವಿಜಯ್ ನಟನೆಯ 'ಮಾಸ್ಟರ್'ಗೆ 40 ಕೋಟಿ ನೀಡಲಾಗಿದೆ. ರೊಬೋಟ್ 2.0 ಗೆ 50 ಕೋಟಿ ಹಣ ನೀಡಲಾಗಿತ್ತಂತೆ.

ಟ್ರೇಲರ್ ಬಿಡುಗಡೆ ಮಾಡಿದೆ ನೆಟ್‌ಫ್ಲಿಕ್ಸ್
'ಜಗಮೇ ತಾಂಡಿರಮ್' ಸಿನಿಮಾದ ಟ್ರೇಲರ್ ಅನ್ನು ನೆಟ್‌ಫ್ಲಿಕ್ಸ್ ಇಂದು ಬಿಡುಗಡೆ ಮಾಡಿದ್ದು, ಆದಷ್ಟು ಶೀಘ್ರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಎಸ್.ಶಶಿಕಾಂತ್, ಚಕ್ರವರ್ತಿ ಮತ್ತು ರಾಮಚಂದ್ರ.

ಹಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ಧನುಷ್
ಧನುಷ್ ಅವರು 'ಜಗಮೇ ತಾಂಡಿರಮ್' ನಂತರ ಹಾಲಿವುಡ್ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು, ಅದೂ ಸಹ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. ಆ ಸಿನಿಮಾವನ್ನು ಅವೇಂಜರ್ಸ್ ನಿರ್ದೇಶಕ ನಿರ್ದೇಶಿಸಲಿದ್ದು, ಕ್ಯಾಪ್ಟನ್ ಅಮೆರಿಕ ಖ್ಯಾತಿಯ ಕ್ರಿಸ್ ರಾಜರ್ಸ್ ಸಿನಿಮಾದಲ್ಲಿರಲಿದ್ದಾರೆ. ಅದರ ನಂತರ ಹಿಂದಿಯ ಅತರಂಗಿರೇ, ಆಯರತ್ತಿಲ್ ಒರುವನ್ 2, ಕರ್ನನ್, ನಿಂಜೆ ಮರಪಾತ್ತಿಲೆ, ನಾನೇ ವರುವೇನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.