Don't Miss!
- Sports
ಭಾರತ ವಿರುದ್ಧದ ಏಕದಿನ ಸರಣಿಗೆ ಜಿಂಬಾಬ್ವೆ ತಂಡ ಪ್ರಕಟ: ರೇಗಿಸ್ ಚಕಬ್ವಾ ನಾಯಕ
- News
ನನ್ನ ನಿವಾಸದಲ್ಲೇ ಇ.ಡಿ, ಸಿಬಿಐ ಕಚೇರಿ ತೆರೆಯಲಿ: ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್
- Lifestyle
Today Rashi Bhavishya: ಶುಕ್ರವಾರದ ದಿನ ಭವಿಷ್ಯ: ವೃಷಭ, ಸಿಂಹ, ಕನ್ಯಾ, ವೃಶ್ಚಿಕ ರಾಶಿಯವರ ಭ್ರಾತೃತ್ವ ಬಂಧ ಉತ್ತಮವಾಗಿರುತ್ತದೆ
- Automobiles
ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!
- Finance
ಕೇರಳ ಲಾಟರಿ: 'ಕಾರುಣ್ಯ ಪ್ಲಸ್ KN 433' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Technology
ಮೊಟೊ S30 ಪ್ರೊ ಸ್ಮಾರ್ಟ್ಫೋನ್ ಲಾಂಚ್! ಪ್ರೊಸೆಸರ್ ಯಾವುದು?
- Travel
ಯಾಣ - ಅತ್ಯದ್ಬುತ ಶಿಲೆಗಳಿರುವ ಇರುವ ತಾಣ!
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಚಿತ್ರೀಕರಣ ಪ್ರಾರಂಭವಾಗುತ್ತಲೇ ನೂರಾರು ಕೋಟಿಗೆ ಸೇಲ್ ಆದ ಶಾರುಖ್ ಸಿನಿಮಾ
ಬಾಲಿವುಡ್ ಬಾದ್ ಷಾ ಶಾರುಖ್ ಖಾನ್, ಹಿಟ್ ಸಿನಿಮಾ ಒಂದನ್ನು ಕೊಟ್ಟು ವರ್ಷಗಳೇ ಆದವು. 2013 ರಲ್ಲಿ ಬಿಡುಗಡೆ ಆದ 'ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾದ ಬಳಿಕ ದೊಡ್ಡ ಹಿಟ್ ಒಂದನ್ನು ನೀಡಲು ಶಾರುಖ್‌ಗೆ ಸಾಧ್ಯವಾಗಿಲ್ಲ. ಹಾಗೆಂದು ಅವರ ಬೇಡಿಕೆ ತುಸುವೂ ಕುಸಿದಿಲ್ಲ.
ದಶಕಗಳ ಕಾಲ ಬಾಲಿವುಡ್‌ನ ಮೆರೆದ ಶಾರುಖ್ ಖಾನ್ ಈಗಲೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಸಾಲು-ಸಾಲು ಸಿನಿಮಾಗಳು ಸೋತಿದ್ದರೂ ಸಹ ಶಾರುಖ್ ಮನೆಯ ಮುಂದೆ ನಿರ್ಮಾಪಕರು ಸಾಲುಗಟ್ಟಿದ್ದಾರೆ. ಅವರೊಟ್ಟಿಗೆ ಸಿನಿಮಾ ಮಾಡಲು ಹಪ-ಹಪಿಸುತ್ತಿದ್ದಾರೆ.
ಶಾರುಖ್ ಖಾನ್ ಕ್ರೇಜ್ ಎಷ್ಟರಮಟ್ಟಿಗಿದೆಯೆಂದರೆ ಶಾರುಖ್ ಖಾನ್‌ರ ಹೊಸ ಸಿನಿಮಾ ಒಂದು ಸೆಟ್ಟೇರಿ ಚಿತ್ರೀಕರಣ ಪ್ರಾರಂಭ ಆದ ಕೆಲವೇ ದಿನಗಳಲ್ಲಿ ಸಿನಿಮಾದ ಡಿಜಿಟಲ್ ಹಕ್ಕು ನೂರಾರು ಕೋಟಿಗೆ ಸೇಲ್ ಆಗಿಬಿಟ್ಟಿದೆ.

'ಪಠಾಣ್' ಸಿನಿಮಾ ಮುಗಿಯುವ ಹಂತದಲ್ಲಿದೆ
ಶಾರುಖ್ ಖಾನ್ ಪ್ರಸ್ತುತ ಮೂರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರದ್ದೇ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಣಗೊಳ್ಳುತ್ತಿರುವ 'ಪಠಾಣ್' ಸಿನಿಮಾ ಚಿತ್ರೀಕರಣ ಇನ್ನೇನು ಮುಗಿಯುವ ಹಂತದಲ್ಲಿದೆ. ಈ ನಡುವೆ ತಮಿಳಿನ ನಿರ್ದೇಶಕ ಅಟ್ಟಿಲಿ ಜೊತೆ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಈ ಸಿನಿಮಾದ ಡಿಜಿಟಲ್ ಹಕ್ಕು ಭಾರಿ ಬೆಲೆಗೆ ಮಾರಾಟವಾಗಿದೆ.

ಭಾರಿ ಮೊತ್ತಕ್ಕೆ ಸಿನಿಮಾದ ಡಿಜಿಟಲ್ ಹಕ್ಕು ಮಾರಾಟ
ಅಟ್ಟಿಲಿ ನಿರ್ದೇಶನದಲ್ಲಿ ಶಾರುಖ್ ಖಾನ್ ನಟಿಸುತ್ತಿರುವ ಸಿನಿಮಾಕ್ಕೆ 'ಜವಾನ್' ಎಂದು ಹೆಸರಿಡಲಾಗಿದ್ದು, ಈ ಸಿನಿಮಾದ ಡಿಜಿಟಲ್ ಹಕ್ಕು ಬರೋಬ್ಬರಿ 120 ಕೋಟಿಗೆ ಮಾರಾಟವಾಗಿದೆ. ಆ ಮೂಲಕ ಚಿತ್ರೀಕರಣ ಪ್ರಾರಂಭವಾದಾಗಲೆ ಸಿನಿಮಾದ ಬಂಡವಾಳ ವಾಪಸ್ಸಾದಂತಾಗಿದೆ. ಈ ಸಿನಿಮಾದ ಹಕ್ಕನ್ನು ನೆಟ್‌ಫ್ಲಿಕ್ಸ್ ಭಾರಿ ಮೊತ್ತ ನೀಡಿ ಖರೀದಿಸಿದೆ.

ಪೋಸ್ಟರ್ ಬಿಡುಗಡೆ ಆಗಿದೆ
ಸಿನಿಮಾದ ಚಿತ್ರೀಕರಣ ಕೆಲವು ದಿನಗಳ ಹಿಂದಷ್ಟೆ ಪ್ರಾರಂಭವಾಗಿದ್ದು, ಸಿನಿಮಾ ಬಿಡುಗಡೆ ಆಗಲು ಇನ್ನೂ ಒಂದು ವರ್ಷ ಸಮಯ ಇದೆ. ಆದರೆ ಈಗಲೇ ನೆಟ್‌ಫ್ಲಿಕ್ಸ್ ಭಾರಿ ಮೊತ್ತಕ್ಕೆ ಸಿನಿಮಾವನ್ನು ಖರೀದಿ ಮಾಡಿದೆ. ಈ ಸಿನಿಮಾದ ಮೇಲೆ ನೆಟ್‌ಫ್ಲಿಕ್ಸ್‌ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾದ ಒಂದು ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ಶಾರುಖ್ ಖಾನ್ ಗಾಯಗೊಂಡ ರೀತಿಯಲ್ಲಿ ಯಾವುದೇ ನಿಲ್ದಾಣದಲ್ಲಿ ಬ್ಯಾಗ್ ಜೊತೆ ಕೂತಿರುವ ಚಿತ್ರವನ್ನು ಪೋಸ್ಟರ್ ಹೊಂದಿದೆ.

ಶಾರುಖ್ ಖಾನ್ ಎದುರು ನಯನತಾರಾ ನಾಯಕಿ
'ಜವಾನ್' ಸಿನಿಮಾದಲ್ಲಿ ಶಾರುಖ್ ಖಾನ್ ಎದುರಾಗಿ ದಕ್ಷಿಣ ಭಾರತದ ಸ್ಟಾರ್ ನಟಿ ನಯನತಾರಾ ನಟಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ನಟಿ ನಯನತಾರಾ ವಿವಾಹವಾಗಿದ್ದು ಇನ್ನೂ ಚಿತ್ರೀಕರಣದಲ್ಲಿ ಪಾಲ್ಗೊಂಡಿಲ್ಲ. 'ಜವಾನ್' ಸಿನಿಮಾದ ಬಳಿಕ ಶಾರುಖ್ ಖಾನ್, ಬಾಲಿವುಡ್‌ನ ಸೋಲೆ ಕಾಣದ ನಿರ್ದೇಶನದ ರಾಜ್‌ಕುಮಾರ್ ಹಿರಾನಿ ಜೊತೆ ಕೈ ಜೋಡಿಸಲಿದ್ದಾರೆ. ಈ ಜೋಡಿ ಈಗಾಗಲೇ 'ಡಂಕಿ' ಹೆಸರಿನ ಸಿನಿಮಾವನ್ನು ಘೋಷಿಸಿದ್ದಾರೆ. ಈ ಸಿನಿಮಾದ ಬಗ್ಗೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇದೆ ಬಾಲಿವುಡ್‌ಗೆ.