For Quick Alerts
  ALLOW NOTIFICATIONS  
  For Daily Alerts

  ಈ ನಟರಿಗೆ ಒಟಿಟಿ ಕೊಡುತ್ತಿರುವ ಸಂಭಾವನೆ ಕೇಳಿದರೆ ಹೌಹಾರುವುದು ಖಂಡಿತ

  |

  ಕೊರೊನಾ ನಂತರ ಮನೊರಂಜನಾ ಕ್ಷೇತ್ರದಲ್ಲಿ ಒಟಿಟಿಗಳು ದೊಡ್ಡ ಕ್ರಾಂತಿಯನ್ನೇ ಮಾಡಿವೆ. ದೊಡ್ಡ-ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳನ್ನೂ ಹಿಂದೆ ಹಾಕಿ ದೊಡ್ಡ ಮೊತ್ತದ ಹಣವನ್ನು ಒಟಿಟಿ ಕಂಟೆಂಟ್‌ಗಳ ಮೇಲೆ ತೊಡಗಿಸುತ್ತಿದೆ.

  ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ, ಎಚ್‌ಬಿಒ, ಡಿಸ್ನಿ ಹಾಟ್‌ಸ್ಟಾರ್‌ ಅಂತಹಾ ವಿದೇಶಿ ಒಟಿಟಿಗಳಂತೂ ಲಕ್ಷಾಂತರ ಕೋಟಿಗಳಿಗೂ ಮೀರಿದ ಮೊತ್ತವನ್ನು ವೆಬ್ ಸರಣಿ, ಸಿನಿಮಾಗಳ ಮೇಲೆ ಹೂಡುತ್ತಿವೆ. ಹಾಲಿವುಡ್‌ನ ದುಬಾರಿ ನಟರನ್ನೆಲ್ಲ ತಮ್ಮ ವ್ಯಾಪ್ತಿಯೊಳಕ್ಕೆ ಕರೆತರುತ್ತಿರುವ ಈ ಶ್ರೀಮಂತ ಒಟಿಟಿಗಳು ಯಾವುದೇ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆಗಳು ಕೊಡುವುದಕ್ಕಿಂತಲೂ ದೊಡ್ಡ ಮೊತ್ತದ ಸಂಭಾವನೆಯನ್ನು ಈ ನಟ-ನಟಿಯರಿಗೆ ನೀಡುತ್ತಿದೆ.

  ವಿಶ್ವ ವಿಖ್ಯಾತ ನಟರಾದ ಡ್ಯಾನಿಯಲ್ ಕ್ರೇಗ್, ವಿನ್ ಡೀಸೆಲ್, ರಾಕ್ ಉಪನಾಮ ಹೊಂದಿರುವ ಡ್ವೇನ್ ಜೋನ್ಸ್, ಟೈಟಾನಿಕ್ ನಟ ಲಿಯಾನಾರ್ಡೊ ಡಿ ಕ್ಯಾಫ್ರಿಯೊ, ಜೆನಿಫರ್ ಲಾರೆನ್ಸ್, ರ್ಯಾನ್ ಗೋಸ್ಲಿಂಗ್, 'ಕ್ಯಾಪ್ಟನ್ ಅಮೆರಿಕ' ಖ್ಯಾತಿಯ ಕ್ರಿಸ್ ಇವಾನ್ಸ್ ಇನ್ನೂ ಹಲವಾರು ನಟರು ಒಟಿಟಿ ಒರಿಜಿನಲ್ ಕಂಟೆಂಟ್ ಸಿನಿಮಾಗಳು, ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಈ ನಟರುಗಳಿಗೆ ಒಟಿಟಿಗಳು ಕೊಡುತ್ತಿರುವ ಸಂಭಾವನೆ ಕೇಳಿದರೆ ಕ್ಷಣ ಗಾಬರಿಯಾಗುವುದು ಖಂಡಿತ.

  744 ಕೋಟಿ ಸಂಭಾವನೆ ಪಡೆಯುತ್ತಿರುವ ಡ್ಯಾನಿಯಲ್ ಕ್ರೇಗ್

  744 ಕೋಟಿ ಸಂಭಾವನೆ ಪಡೆಯುತ್ತಿರುವ ಡ್ಯಾನಿಯಲ್ ಕ್ರೇಗ್

  'ಜೇಮ್ಸ್ ಬಾಂಡ್' ಖ್ಯಾತಿಯ ಡ್ಯಾನಿಯಲ್ ಕ್ರೇಗ್‌ಗೆ ನೆಟ್‌ಫ್ಲಿಕ್ಸ್‌ ಬರೋಬ್ಬರಿ 744 ಕೋಟಿ ರುಪಾಯಿ ಸಂಭಾವನೆ ನೀಡುತ್ತಿದೆ. 2019ರಲ್ಲಿ ಬಿಡುಗಡೆ ಆಗಿದ್ದ 'ನೈವ್ಸ್ ಔಟ್' ಸಿನಿಮಾದ ಸೀಕ್ವೆಲ್‌ ನಿರ್ಮಾಣ ಮಾಡುತ್ತಿದ್ದು ಈ ಸಿನಿಮಾಕ್ಕೆ ಇಷ್ಟು ದೊಡ್ಡ ಸಂಭಾವನೆಯನ್ನು ಡ್ಯಾನಿಯಲ್‌ ಕ್ರೇಗ್‌ಗೆ ಕೊಡುತ್ತಿದೆ ನೆಟ್‌ಫ್ಲಿಕ್ಸ್. ಡ್ಯಾನಿಯಲ್ ಕ್ರೇಗ್ ನಟಿಸಿರುವ ಹೊಸ ಬಾಂಡ್ ಸಿನಿಮಾ 'ನೋ ಟೈಮ್ ಟು ಡೈ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಕೊರೊನಾ ಕಾರಣಕ್ಕೆ ಬಿಡುಗಡೆ ಮುಂದೂಡಲ್ಪಡುತ್ತಿದೆ.

  ಡ್ವೇನ್ ಜೋನ್ಸನ್‌ಗೆ 372 ಕೋಟಿ ಸಂಭಾವನೆ

  ಡ್ವೇನ್ ಜೋನ್ಸನ್‌ಗೆ 372 ಕೋಟಿ ಸಂಭಾವನೆ

  ವಿಶ್ವದ ಅತ್ಯಂತ ಶ್ರೀಮಂತ ನಟ ರಾಕ್ ಖ್ಯಾತಿಯ ಡ್ವೇನ್ ಜೋನ್ಸನ್‌ಗೆ ಅಮೆಜಾನ್ ಪ್ರೈಂ 372 ಕೋಟಿ ರು ಸಂಭಾವನೆ ನೀಡುತ್ತಿದೆ. ಅಮೆಜಾನ್ ಪ್ರೈಂ ನಿರ್ಮಿಸುತ್ತಿರುವ 'ರೆಡ್ ಒನ್' ಸಿನಿಮಾದಲ್ಲಿ ಡ್ವೇನ್ ಜೋನ್ಸ್ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ 'ಫಾಸ್ಟ್ ಆಂಡ್ ಫ್ಯೂರಿಯಸ್', 'ಹಾಬ್ಸ್ ಆಂಡ್ ಶಾ' ಸಿನಿಮಾಗಳಿಗೆ ಚಿತ್ರಕತೆ ಬರೆದಿದ್ದ ಕ್ರಿಸ್ ಮೋರ್ಗನ್ ಚಿತ್ರಕತೆ ಬರೆದಿದ್ದಾರೆ.

  ಡಿಕ್ಯಾಪ್ರಿಯೊಗೆ 223 ಕೋಟಿ ರು

  ಡಿಕ್ಯಾಪ್ರಿಯೊಗೆ 223 ಕೋಟಿ ರು

  'ಟೈಟಾನಿಕ್' ಖ್ಯಾತಿಯ ಲಿಯನಾರ್ಡೊ ಡಿ ಕ್ಯಾಪ್ರಿಯೊಗೆ ನೆಟ್‌ಫ್ಲಿಕ್ಸ್‌ ಬರೋಬ್ಬರಿ 223 ಕೋಟಿ ರುಗಳನ್ನು ಸಂಭಾವನೆಯಾಗಿ ನೀಡುತ್ತಿದೆ. ಇನ್ನು ನಟಿ ಜೆನಿಫರ್ ಲೋರೆನ್ಸ್‌ಗೆ 185 ಕೋಟಿ ರುಪಾಯಿ ಹಣವನ್ನು ಸಂಭಾವನೆಯಾಗಿ ನೀಡುತ್ತಿದೆ. ಈ ಇಬ್ಬರು 'ಡೋಂಟ್ ಲುಕ್ ಅಪ್' ಹೆಸರಿನ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದು ಅದನ್ನು ನೆಟ್‌ಫ್ಲಿಕ್ಸ್ ನಿರ್ಮಾಣ ಮಾಡುತ್ತಿದೆ.

  ಕ್ರಿಸ್ ಇವಾನ್ಸ್‌ಗೆ 180 ಕೋಟಿ

  ಕ್ರಿಸ್ ಇವಾನ್ಸ್‌ಗೆ 180 ಕೋಟಿ

  ನೆಟ್‌ಫ್ಲಿಕ್ಸ್‌ನ ಮತ್ತೊಂದು ಥ್ರಿಲ್ಲರ್ 'ದಿ ಗ್ರೇ ಮ್ಯಾನ್‌' ಸಿನಿಮಾದಲ್ಲಿ ನಟಿಸುತ್ತಿರುವ ರ್ಯಾನ್ ಗೋಸ್ಲಿಂಗ್‌ಗೆ ನೆಟ್‌ಫ್ಲಿಕ್ಸ್ ನೀಡುತ್ತಿರುವುದು ಬರೋಬ್ಬರಿ 148 ಕೋಟಿ ರು. ಇದೇ ಸಿನಿಮಾದಲ್ಲಿನ ಮತ್ತೊಬ್ಬ ಸ್ಟಾರ್ 'ಕ್ಯಾಪ್ಟನ್ ಅಮೆರಿಕ' ಖ್ಯಾತಿಯ ಕ್ರಿಸ್ ಇವಾನ್ಸ್‌ಗೆ 180 ಕೋಟಿ ನೀಡಲಾಗುತ್ತಿದೆಯಂತೆ. ಇದೇ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ 'ಧನುಷ್' ಸಹ ನಟಿಸುತ್ತಿದ್ದಾರೆ.

  ಜೂಲಿಯಾ ರಾಬರ್ಟ್ಸ್ಗೆ 180 ಕೋಟಿ ಸಂಭಾವನೆ

  ಜೂಲಿಯಾ ರಾಬರ್ಟ್ಸ್ಗೆ 180 ಕೋಟಿ ಸಂಭಾವನೆ

  ನೆಟ್‌ಫ್ಲಿಕ್ಸ್ ನಿರ್ಮಾಣ ಮಾಡುತ್ತಿರುವ ಮತ್ತೊಂದು ಸಿನಿಮಾ 'ಲೀವ್‌ ದಿ ವರ್ಲ್ಡ್ ಬಿಹೈಂಡ್‌'ನಲ್ಲಿ ಖ್ಯಾತ ನಟಿ ಜೂಲಿಯಾ ರಾಬರ್ಟ್ಸ್ ನಟಿಸುತ್ತಿದ್ದು ಈ ಸಿನಿಮಾಕ್ಕಾಗಿ ಅವರಿಗೆ ಸಿಗುತ್ತಿರುವುದು ಬರೋಬ್ಬರಿ 180 ಕೋಟಿ. ಇದೇ ಸಿನಿಮಾದಲ್ಲಿ ಡೆಬ್ಜೆಲ್ ವಾಷಿಂಗ್ಟನ್ ಸಹ ನಟಿಸುತ್ತಿದ್ದು ಅವರಿಗೆ 150 ಕೋಟಿ ಸಂಭಾವನೆ ಸಿಗುತ್ತಿದೆ. 'ಲೀವ್ ದಿ ವರ್ಲ್ಡ್ ಬಿಹೈಂಡ್' ಹೆಸರಿನ ಕಾದಂಬರಿ ಆಧರಿತ ಸಿನಿಮಾ ಇದಾಗಿದ್ದು ಭಾರಿ ಬಜೆಟ್ ಅನ್ನು ಸಿನಿಮಾಕ್ಕಾಗಿ ಮೀಸಲಿಟ್ಟಿದೆ ನೆಟ್‌ಫ್ಲಿಕ್ಸ್.

  ವಿಲ್‌ ಸ್ಮಿತ್‌ಗೆ 297 ಕೋಟಿ ರು ಸಂಭಾವನೆ

  ವಿಲ್‌ ಸ್ಮಿತ್‌ಗೆ 297 ಕೋಟಿ ರು ಸಂಭಾವನೆ

  ವೀನಸ್ ವಿಲಿಯಮ್ಸ್ ಹಾಗೂ ಸೆರೆನಾ ವಿಲಿಯಮ್ಸ್ ತಂದೆಯ ಜೀವನ ಆಧರತ ಸಿನಿಮಾ 'ಕಿಂಗ್ ರಿಚರ್ಡ್ಸ್'ಗಾಗಿ ನಟ ವಿಲ್‌ ಸ್ಮಿತ್‌ಗೆ ಬರೋಬ್ಬರಿ 297 ಕೋಟಿ ನೀಡಲಾಗಿದೆ. ಈ ಸಿನಿಮಾವನ್ನು ವಾರ್ನರ್ ಬ್ರದರ್ಸ್ ನಿರ್ಮಾಣ ಮಾಡಿದೆಯಾದರೂ ಸಿನಿಮಾವನ್ನು ಎಚ್‌ಬಿಒನಲ್ಲಿ ನೇರವಾಗಿ ಬಿಡುಗಡೆ ಮಾಡಲಾಗುತ್ತಿದೆ. ಇನ್ನು ಎಚ್‌ಬಿಓ ನಿರ್ಮಾಣ ಮಾಡಿರುವ ವಿಶ್ವ ಪ್ರಸಿದ್ಧ 'ಗೇಮ್ ಆಫ್ ಥ್ರೋನ್ಸ್'ನ ಮುಂದುವರೆದ ಭಾಗ 'ಹೌಸ್ ಆಫ್‌ ದಿ ಡ್ರ್ಯಾಗನ್‌'ಗಾಗಿ ಲಕ್ಷಾಂತರ ಕೋಟಿ ಹಣವನ್ನು ಎಚ್‌ಬಿಓ ಖರ್ಚು ಮಾಡುತ್ತಿದೆ.

  English summary
  Some OTTs paying whooping money as remuneration to actors. Daniel Craig took 744 crore rs as remuneration by Netflix. Dwayne Johnson receiving 372 crore rs as remuneration from amazon prime.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X