For Quick Alerts
  ALLOW NOTIFICATIONS  
  For Daily Alerts

  "ನಿಮ್ಮ ಫ್ಯಾನ್ಸ್ ನಿಮಗ್ಯಾಕೆ ಮತ ಹಾಕುತ್ತಿಲ್ಲ?": ಪವನ್ ಕಲ್ಯಾಣ್‌ಗೆ ಬಾಲಕೃಷ್ಣ ನೇರ ಪ್ರಶ್ನೆ

  |

  ತೆಲುಗಿನ ಅಹಾ ಓಟಿಟಿ ಫ್ಲಾಟ್‌ಫಾರ್ಮ್‌ಗಾಗಿ ನಟ ಬಾಲಕೃಷ್ಣ ನಡೆಸಿಕೊಡುವ ಟಾಕ್ ಶೋ ಅನ್‌ಸ್ಟಾಪಬಲ್- 2 ಬಹಳ ಜನಪ್ರಿಯವಾಗಿದೆ. ಇತ್ತೀಚೆಗೆ ಈ ಶೋಗೆ ಬಾಹುಬಲಿ ಪ್ರಭಾಸ್ ಅತಿಥಿಯಾಗಿ ಬಂದಿದ್ದರು. ಈ ಎಪಿಸೋಡ್ ಸೂಪರ್ ಹಿಟ್ ಆಗಿತ್ತು. ಇದೀಗ ಪವನ್ ಕಲ್ಯಾಣ್ ಅತಿಥಿಯಾಗಿ ಕಾಣಿಸಿಕೊಂಡಿರುವ ಎಪಿಸೋಡ್ ಪ್ರಸಾರಕ್ಕೆ ದಿನಗಣನೆ ಶುರುವಾಗಿದೆ. ಸದ್ಯ ಸಣ್ಣ ಪ್ರೋಮೊ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡಿದ್ದಾರೆ.

  ಟಾಲಿವುಡ್ ಪವರ್ ಸ್ಟಾರ್ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಇನ್ನು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ರಾಜಕೀಯರಂಗದಲ್ಲೂ ಗುರ್ತಿಸಿಕೊಂಡಿದ್ದಾರೆ. ನಟ ಬಾಲಕೃಷ್ಣ ಕೂಡ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ ವಿಚಾರಕ್ಕೆ ಬಂದರೆ ಬಂದರೆ ಇಬ್ಬರು ಬೇರೆ ಬೇರೆ ಪಕ್ಷಗಳಲ್ಲಿ ಇದ್ದಾರೆ. ಇಬ್ಬರ ನಡುವೆ ಜಿದ್ದಾಜಿದ್ದಿ ಇದೆ. ಇನ್ನು ದಶಕಗಳಿಂದ ಮೆಗಾ ಫ್ಯಾಮಿಲಿ ವರ್ಸಸ್ ನಂದಮೂರಿ ಫ್ಯಾಮಿಲಿ ವೈಷಮ್ಯವೂ ಇದೆ. ಅದನ್ನೆಲ್ಲಾ ಮೀಡಿ ಬಾಲಯ್ಯ ಟಾಕ್ ಶೋಗೆ ಪವನ್ ಕಲ್ಯಾಣ್ ಬಂದಿರುವುದು ಅಚ್ಚರಿ ಮೂಡಿಸಿದೆ.

  "ನಾನು ಸಿನಿಮಾ ಮಾಡೋದು ದುಡ್ಡಿಗಾಗಿ, ಪ್ರಶಸ್ತಿ‌ಗಾಗಿ ಅಲ್ಲ": ಮೌಳಿ ಟಾಂಗ್ ಕೊಟ್ಟಿದ್ದು ಯಾರಿಗೆ?

  15 ದಿನ ಹಿಂದೇ ಪವನ್ ಕಲ್ಯಾಣ್ ಎಪಿಸೋಡ್ ಶೂಟಿಂಗ್ ಆಗಿತ್ತು. ಇದೀಗ ಮೊದಲ ಪ್ರೋಮೊ ರಿಲೀಸ್ ಆಗಿದೆ. ಶೋನಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಪ್ರಶ್ನೆಗಳನ್ನು ಬಾಲಯ್ಯ ಕೇಳಿದ್ದಾರೆ. ಅದಕ್ಕೆ ಪವನ್ ಕೂಡ ಅಷ್ಟೇ ಕೂಲ್ ಆಗಿ ಉತ್ತರ ನೀಡಿರುವುದು ಗೊತ್ತಾಗುತ್ತಿದೆ. ಜನಸೇನಾನಿ ಟಿಟಿಪಿ ಜೊತೆ ಸೇರಿ ಚುನಾವಣೆಗೆ ಹೋಗಲು ತೀರ್ಮಾನಿಸಿದ್ದಾರೆ. ಹಾಗಾಗಿ ಬಾಲಯ್ಯ- ಪವನ್ ಚರ್ಚೆ ಕುತೂಹಲ ಕೆರಳಿಸಿದೆ. ಇನ್ನು ಶೋನಲ್ಲಿ ನಟಸಿಂಹ ಬಾಲಕೃಷ್ಣ ಯಾರು ಊಹಿಸದ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.

  Power Star Pawan Kalyans Unstoppable With NBK Season 2 Promo Goes Viral

  ನನ್ನನ್ನು ಬಾಲ ಎಂದು ಕರೆಯಿರಿ ಎಂದು ಬಾಲಯ್ಯ ಪವನ್‌ಗೆ ಹೇಳಿದ್ದಾರೆ. ನಾನು ಸೋಲಲು ಸಿದ್ಧ, ಆದರೆ ಆ ರೀತಿ ಮಾಡುವುದಿಲ್ಲ ಎಂದು ಪವನ್ ಹೇಳಿದ್ದಾರೆ. ನಂತರ ಈ ಪಾಲಿಟಿಕ್ಸ್ ಬೇಡ ಎಂದು ಬಾಲಯ್ಯ ಹೇಳಿದ್ದಾರೆ. ಇತ್ತೀಚೆಗೆ ನಿಮ್ಮ ಭಾಷಣಗಳಲ್ಲಿ ಬಿಸಿ ಹೆಚ್ಚುತ್ತಿದೆ ಎಂದಿದ್ದಕ್ಕೆ "ಇಲ್ಲ ನಾನು ಪದ್ದತಿಯಿಂದಲೇ ಮಾತನಾಡುತ್ತಿದ್ದೇನೆ ಎಂದಿದ್ದಾರೆ. ನಿಮ್ಮ ಅಣ್ಣ ಚಿರಂಜೀವಿಯಿಂದ ಕಲಿತ್ತಿದ್ದೇನು, ಬಿಟ್ಟಿದ್ದೇನು ಎಂದು ಕೇಳಿದ್ದಕ್ಕೆ ಪವನ್ ಅತ್ತಿಗೆ ಬಗ್ಗೆ ಮಾತನಾಡಿದ್ದಾರೆ. "ನಿನಗೆ ಅಷ್ಟು ದೊಡ್ಡ ಅಭಿಮಾನಿಗಳ ಬಲ ಇದೆ. ಆದ್ರೆ ಅದೆಲ್ಲಾ ಮತಗಳಾಗಿ ಪರಿವರ್ತನೆ ಆಗುತ್ತಿಲ್ಲ? ಎಂದು ಜನಸೇನಾನಿಗೆ ಬಾಲಯ್ಯ ಪ್ರಶ್ನೆ ಹಾಕಿದ್ದಾರೆ. ಶೀಘ್ರದಲ್ಲೇ ಕಂಪ್ಲೀಟ್ ಎಪಿಸೋಡ್ ಸ್ಟ್ರೀಮಿಂಗ್ ಆಗಲಿದೆ.

  English summary
  Power Star Pawan Kalyan's Unstoppable With NBK Promo Goes Viral. The celebrity talk show is a regional OTT platform Aha original Production. Know more.
  Saturday, January 21, 2023, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X