For Quick Alerts
  ALLOW NOTIFICATIONS  
  For Daily Alerts

  Dhamaka OTT : ರವಿತೇಜಾ, ಶ್ರೀಲೀಲಾ ಹಿಟ್ ಚಿತ್ರ ಧಮಾಕಾ ಓಟಿಟಿ ಬಿಡುಗಡೆ ದಿನಾಂಕ ಘೋಷಣೆ

  |

  ನಟ ರವಿತೇಜಾ ಹಾಗೂ ನಟಿ ಶ್ರೀಲೀಲಾ ನಟನೆಯ ಧಮಾಕಾ ಚಿತ್ರದ ಓಟಿಟಿ ಬಿಡುಗಡೆ ದಿನಾಂಕ ಘೋಷಣೆಗೊಂಡಿದೆ. ಈ ಚಿತ್ರದ ಓಟಿಟಿ ಹಕ್ಕನ್ನು ನೆಟ್‌ಫ್ಲಿಕ್ಸ್ ಖರೀದಿಸಿದ್ದು, ಚಿತ್ರವನ್ನು ಜನವರಿ 22ರಂದು ಬಿಡುಗಡೆ ಮಾಡುವುದಾಗಿ ನೆಟ್‌ಫ್ಲಿಕ್ಸ್ ಇಂಡಿಯಾ ಸೌತ್ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ. ಇನ್ನು ಧಮಾಕಾ ಚಿತ್ರ ಕನ್ನಡದ ವೇದಾ ಜತೆಗೆ ಕಳೆದ ವರ್ಷದ ಡಿಸೆಂಬರ್ ತಿಂಗಳ 23ರಂದು ಬಿಡುಗಡೆಗೊಂಡಿತ್ತು.

  ಇನ್ನು ಚಿತ್ರ ಹದಿನಾಲ್ಕು ದಿನಗಳಲ್ಲಿಯೇ ನೂರು ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತು ಎಂದು ಚಿತ್ರತಂಡ ಘೋಷಣೆ ಮಾಡಿದರೆ, ಬಾಕ್ಸ್ ಆಫೀಸ್ ಪರಿಣಿತರು ಮಾತ್ರ ಚಿತ್ರ ಹದಿನಾಲ್ಕು ದಿನಗಳಲ್ಲಿ 74 ಕೋಟಿ ಗಳಿಸಿತು ಎಂದು ವರದಿ ನೀಡಿದ್ದರು. ತೆಲುಗಿನ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಪರ ಧಮಾಕಾ 20 ದಿನಗಳಲ್ಲಿ 82 ಕೋಟಿ ಗಳಿಕೆ ಮಾಡಿದೆ. ಇನ್ನು ನಿರ್ಮಾಪಕರು ಪ್ರಕಟಿಸಿರುವ ಪ್ರಕಾರ ರವಿತೇಜಾ ಸಿನಿ ಕೆರಿಯರ್‌ನಲ್ಲಿ ನೂರು ಕೋಟಿ ಕ್ಲಬ್ ಸೇರಿದ ಮೊದಲ ಚಿತ್ರ ಧಮಾಕಾ ಎನಿಸಿಕೊಂಡಿದೆ.

  ಧಮಾಕಾ ಚಿತ್ರ ಪಕ್ಕಾ ತೆಲುಗು ಫ್ಲೇವರ್ ಚಿತ್ರವಾಗಿದ್ದು, ಫ್ಯಾಮಿಲಿಯ ವ್ಯವಹಾರ ಹಾಗೂ ಘನತೆಯನ್ನು ನಾಯಕ ಯಾವ ರೀತಿ ಕಾಪಾಡಿಕೊಳ್ಳಲಿದ್ದಾನೆ ಎಂಬುದೇ ಚಿತ್ರ ಕಥೆಯಾಗಿದೆ. ರವಿತೇಜಾ ಕಾಮಿಡಿ, ಹಾಡುಗಳು, ತೆಲುಗು ಸಿನಿ ರಸಿಕರು ಇಷ್ಟಪಡುವಂತ ವಿಭಿನ್ನ ಡಾನ್ಸ್ ಚಿತ್ರದಲ್ಲಿ ಇದ್ದದ್ದರಿಂದ ಸಿನಿಮಾ ಅಷ್ಟಕ್ಕಷ್ಟೇ ಎನಿಸಿದರೂ ಸಹ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತು.

  ಇನ್ನು ಧಮಾಕಾ ಶ್ರೀಲೀಲಾ ನಟನೆಯ ಎರಡು ತೆಲುಗು ಚಿತ್ರವಾಗಿದ್ದು, ಈ ಚಿತ್ರದ ಮೂಲಕ ಅಪಾರವಾದ ತೆಲುಗು ಸಿನಿ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ನಟನೆ ಮಾತ್ರವಲ್ಲದೇ ಶ್ರೀಲೀಲಾ ಡಾನ್ಸ್‌ಗೆ ಹೆಚ್ಚಿನ ಪ್ರಶಂಸೆ ವ್ಯಕ್ತವಾಗಿತ್ತು. ಚಿತ್ರ ಗೆಲ್ಲಲು ಶ್ರೀಲೀಲಾ ಡಾನ್ಸ್ ಸಹ ಪ್ರಮುಖ ಕಾರಣ, ಶ್ರೀಲೀಲಾ ಬದಲು ಬೇರೆ ನಟಿ ಇದ್ದಿದ್ದರೆ ಚಿತ್ರ ಇಷ್ಟರ ಮಟ್ಟಕ್ಕೆ ರೀಚ್ ಪಡೆದುಕೊಳ್ಳುತ್ತಿರಲಿಲ್ಲ ಎಂದು ಕೆಲ ಸಿನಿ ರಸಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

  English summary
  Ravi Teja and Sreeleela starrer Dhamaka will stream on netflix from January 22. Read on
  Thursday, January 12, 2023, 17:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X