twitter
    For Quick Alerts
    ALLOW NOTIFICATIONS  
    For Daily Alerts

    ಒಟಿಟಿಯಲ್ಲಿ ದಾಖಲೆ ಬರೆದ 'RRR': ವಿದೇಶಿ ಚಿತ್ರರಂಗಗಳೂ ಕಂಗಾಲು!

    |

    ದಕ್ಷಿಣ ಭಾರತ ಸಿನಿಮಾಗಳಿಗಿದು ಪರ್ವಕಾಲ. ಒಂದರ ಹಿಂದೊಂದು ದಕ್ಷಿಣ ಭಾರತದ ಸಿನಿಮಾಗಳು ದಾಖಲೆಗಳನ್ನು ಬರೆಯುತ್ತಿವೆ. ಭಾರತದಾದ್ಯಂತ ಮಾತ್ರವಲ್ಲ ವಿಶ್ವಮಟ್ಟದಲ್ಲಿ ಗುರುತು ಪಡೆಯುತ್ತಿವೆ.

    ದಕ್ಷಿಣ ಭಾರತ ಸಿನಿಮಾಗಳ ಎದುರು ಬಾಲಿವುಡ್ ಸಿನಿಮಾಗಳಂತೂ ಮಕಾಡೆ ಮಲಗುತ್ತಿವೆ. ದಕ್ಷಿಣ ಭಾರತ ಸಿನಿಮಾಗಳ ಬಿಡುಗಡೆ ನೋಡಿಕೊಂಡು ತಮ್ಮ ಸಿನಿಮಾಗಳ ಬಿಡುಗಡೆ ಶೆಡ್ಯೂಲ್ ಮಾಡುವಂತಾಗಿದೆ ಬಾಲಿವುಡ್ ಹೀರೋಗಳ ಪರಿಸ್ಥಿತಿ.

    ಒಟಿಟಿಯಲ್ಲೂ ದಾಖಲೆ ಬರೆದ RRR: ಒಂದು ನಿಮಿಷದಲ್ಲಿ ಬರೆದ ದಾಖಲೆ ಏನು? ಒಟಿಟಿಯಲ್ಲೂ ದಾಖಲೆ ಬರೆದ RRR: ಒಂದು ನಿಮಿಷದಲ್ಲಿ ಬರೆದ ದಾಖಲೆ ಏನು?

    ಚಿತ್ರಮಂದಿರಗಳಲ್ಲಿ ಬಾಲಿವುಡ್ ಸಿನಿಮಾಗಳನ್ನು ಧೂಳಿಪಟ ಮಾಡಿದ ದಕ್ಷಿಣ ಭಾರತ ಸಿನಿಮಾಗಳು, ಒಟಿಟಿ ಮೂಲಕ ವಿದೇಶಿ ಭಾಷೆಯ ಸಿನಿಮಾಗಳನ್ನು ಸಹ ಹಿಂದಿಕ್ಕುತ್ತಿವೆ. 'RRR' ಸಿನಿಮಾ ಒಟಿಟಿಯಲ್ಲಿ ಹೊಸದೊಂದು ದಾಖಲೆ ಬರೆದಿದ್ದು, ತಮ್ಮ ವ್ಯಾಪ್ತಿ ಅದೆಷ್ಟು ವಿಸ್ತಾರ ಎಂಬುದನ್ನು ಭಾರತೀಯ ಚಿತ್ರರಂಗಕ್ಕೆ ತೋರಿಸಿಕೊಟ್ಟಿದೆ.

    ಮೇ 20 ರಂದು 'ನೆಟ್‌ಫ್ಲಿಕ್ಸ್‌'ನಲ್ಲಿ ಬಿಡುಗಡೆ ಆಗಿದ್ದ 'RRR' ಸಿನಿಮಾ ಹೊಸದೊಂದು ದಾಖಲೆಗೆ ಭಾಜನವಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಇಂಗ್ಲೀಷೇತರ ಸಿನಿಮಾ ಎಂಬ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.

    Recommended Video

    2023ಗೆ ಪ್ರಶಾಂತ್ ನೀಲ್ ಸುಕುಮಾರ್ ಸಿನಿಮಾ ರಿಲೀಸ್ ? #salaar #pushpa2
    1.83 ಕೋಟಿ ಗಂಟೆಗಳ ವೀವರ್‌ಶಿಪ್‌!

    1.83 ಕೋಟಿ ಗಂಟೆಗಳ ವೀವರ್‌ಶಿಪ್‌!

    ಮೇ 23 ರಿಂದ ಮೇ 29 ರವರೆಗೆ ನೆಟ್‌ಫ್ಲಿಕ್ಸ್‌ನಲ್ಲಿ ವಿಶ್ವದಾದ್ಯಂತ ನೋಡಲಾದ ಸಿನಿಮಾಗಳ ಪೈಕಿ ಅತಿ ಹೆಚ್ಚು ಜನ ವೀಕ್ಷಿಸಿರುವ ಇಂಗ್ಲೀಷೇತರ ಸಿನಿಮಾ 'RRR'. ನೆಟ್‌ಫ್ಲಿಕ್ಸ್‌ ನೀಡಿರುವ ಲೆಕ್ಕದ ಪ್ರಕಾರ, ಒಂದು ವಾರದಲ್ಲಿ 'RRR' ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ 1.83 ಕೋಟಿ ಗಂಟೆಗಳ ಕಾಲ ವೀಕ್ಷಣೆಯನ್ನು ವಿಶ್ವದೆಲ್ಲೆಡೆಯಿಂದ ಪಡೆದಿದೆ. ಹಲವು ಜನಪ್ರಿಯ ಇಂಗ್ಲೀಷ್ ಸಿನಿಮಾಗಳು ಸಹ ಈ ವಾರ ನೆಟ್‌ಫ್ಲಿಕ್ಸ್‌ನಲ್ಲಿ ಇಷ್ಟು ದೊಡ್ಡ ಮಟ್ಟದ ವೀವರ್‌ಶಿಪ್ ಪಡೆದಿಲ್ಲ.

    ಹಿಂದಿ ಆವೃತ್ತಿ ಬಿಡುಗಡೆ ಮಾಡಿದ್ದ ನೆಟ್‌ಫ್ಲಿಕ್ಸ್

    ಹಿಂದಿ ಆವೃತ್ತಿ ಬಿಡುಗಡೆ ಮಾಡಿದ್ದ ನೆಟ್‌ಫ್ಲಿಕ್ಸ್

    'RRR' ಸಿನಿಮಾದ ಹಿಂದಿ ಆವೃತ್ತಿಯನ್ನು ಮಾತ್ರವೇ ನೆಟ್‌ಫ್ಲಿಕ್ಸ್ ಖರೀದಿ ಮಾಡಿತ್ತು. ವಿಶ್ವದೆಲ್ಲೆಡೆ ಚಂದಾದಾರರನ್ನು ಹೊಂದಿರುವ 'RRR' ಮೂಲಕ ವಿಶ್ವದ ಅನೇಕ ರಾಷ್ಟ್ರಗಳ ಜನ ಹಿಂದಿ ಭಾಷೆಯಲ್ಲಿ ಈ ಸಿನಿಮಾ ವೀಕ್ಷಿಸಿದ್ದಾರೆ. 'RRR' ಸಿನಿಮಾದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಆವೃತ್ತಿಗಳು ಜೀ5 ನಲ್ಲಿ ಬಿಡುಗಡೆ ಆಗಿದೆ. ಅಲ್ಲಿಯೂ ಸಹ ಸಿನಿಮಾಕ್ಕೆ ದೊಡ್ಡ ಮಟ್ಟದ ವೀವರ್‌ಶಿಪ್ ದೊರಕಿದೆ.

    ಭಾರಿ ಕಲೆಕ್ಷನ್ ಮಾಡಿರುವ ಸಿನಿಮಾ

    ಭಾರಿ ಕಲೆಕ್ಷನ್ ಮಾಡಿರುವ ಸಿನಿಮಾ

    ಮಾರ್ಚ್ 24 ರಂದು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ 'RRR' ಸಿನಿಮಾ ಭಾರಿ ದೊಡ್ಡ ಬ್ಲಾಕ್‌ಬಸ್ಟರ್ ಆಗಿತ್ತು. ಸುಮಾರು 400 ಕೋಟಿಗಳಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಸುಮಾರು 1200 ಕೋಟಿ ಹಣವನ್ನು ಚಿತ್ರಮಂದಿರಗಳಲ್ಲಿ ಗಳಿಸಿ ದಾಖಲೆ ಬರೆಯಿತು. ಅದು ಮಾತ್ರವೇ ಅಲ್ಲದೆ, ಭಾರಿ ಮೊತ್ತಕ್ಕೆ ನೆಟ್‌ಫ್ಲಿಕ್ಸ್ ಹಾಗೂ ಜೀ5 ಗೆ 'RRR' ಸಿನಿಮಾ ಮಾರಾಟವೂ ಆಗಿದೆ.

    'RRR' ಸಿನಿಮಾ ಬಗ್ಗೆ

    'RRR' ಸಿನಿಮಾ ಬಗ್ಗೆ

    ತೆಲುಗು ರಾಜ್ಯಗಳ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಕುರಿತ ಕಾಲ್ಪನಿಕ ಕತೆಯನ್ನು ಹೊಂದಿದೆ 'RRR' ಸಿನಿಮಾ. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್, ಕೋಮರಂ ಭೀಮ್ ಪಾತ್ರದಲ್ಲಿ ಜೂ ಎನ್‌ಟಿಆರ್ ನಟಿಸಿದ್ದಾರೆ. ಇವರಿಬ್ಬರ ಹೊರತಾಗಿ ನಾಯಕಿಯಾಗಿ ಆಲಿಯಾ ಭಟ್, ಅತಿಥಿ ಪಾತ್ರದಲ್ಲಿ ಅಜಯ್ ದೇವಗನ್, ಸಮುದ್ರಕಿಣಿ, ಮಕರಂದ್ ದೇಶಪಾಂಡೆ ಇನ್ನು ಕೆಲವರು ನಟಿಸಿದ್ದಾರೆ.

    English summary
    RRR is the most watched non English movie on Netflix. RRR has been watched 1.80 crore hours In 7 days across the world.
    Wednesday, June 1, 2022, 16:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X