For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಓಟಿಟಿ ಬಿಡುಗಡೆ ಬಗ್ಗೆ ಹೀಗೊಂದು ಸುದ್ದಿ: ಈ ದಿನವೇ ರಿಲೀಸ್?

  |

  'ಕೆಜಿಎಫ್ 2' ಸಿನಿಮಾ ಬಳಿಕ ಮತ್ತೊಂದು ಕನ್ನಡ ಸಿನಿಮಾ 'ಕಾಂತಾರ' ನ್ಯಾಷನಲ್‌ ಲೆವೆಲ್‌ನಲ್ಲಿ ಹಿಟ್ ಲಿಸ್ಟ್ ಸೇರಿದೆ. 'ಕೆಜಿಎಫ್ 2' ನಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಸಿನಿಮಾ ಈಗ ಬೇರೆ ಭಾಷೆಗಳಲ್ಲೂ ಸದ್ದು ಮಾಡುತ್ತಿದೆ.

  ಸೆಪ್ಟೆಂಬರ್ 30 ರಂದು 'ಕಾಂತಾರ' ಸಿನಿಮಾ ಗ್ರ್ಯಾಂಡ್ ಆಗಿ ಕರ್ನಾಟಕದಲ್ಲಿ ರಿಲೀಸ್ ಆಗಿತ್ತು. ಕಳೆದ ಮೂರು ವಾರಗಳಿಂದಲೂ ಈ ಸಿನಿಮಾ ಥಿಯೇಟರ್‌ನಲ್ಲಿ ಅಬ್ಬರಿ ಬೊಬ್ಬಿರಿದಿದೆ. ಮೂರೇ ವಾರಗಳಲ್ಲಿ ಕೇವಲ ಕರ್ನಾಟಕ ಮಾರ್ಕೆಟ್‌ನಲ್ಲಿಯೇ 100 ಕೋಟಿ ರೂ. ಕಲೆಹಾಕಿದೆ ಅಂತ ವರದಿಯಾಗಿದೆ.

  'ಕಾಂತಾರ ಭಾರತದಿಂದ ಆಸ್ಕರ್‌ಗೆ ಅಧಿಕೃತ ಎಂಟ್ರಿ ಆಗಬೇಕು': 'ಕ್ವೀನ್' ಆಗ್ರಹ'ಕಾಂತಾರ ಭಾರತದಿಂದ ಆಸ್ಕರ್‌ಗೆ ಅಧಿಕೃತ ಎಂಟ್ರಿ ಆಗಬೇಕು': 'ಕ್ವೀನ್' ಆಗ್ರಹ

  ಈ ಬೆನ್ನಲ್ಲೇ 'ಕಾಂತಾರ' ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಕೆಲವೇ ದಿನಗಳ ಹಿಂದಷ್ಟೇ ಡಬ್ ಆಗಿ ಸಿನಿಮಾ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಿದೆ. ಹೀಗಿದ್ದರೂ, 'ಕಾಂತಾರ' ಇನ್ನೊಂದು ವಾರದಲ್ಲಿ ಓಟಿಟಿಯಲ್ಲಿ ರಿಲೀಸ್ ಆಗುತ್ತೆ ಅಂತ ನ್ಯಾಷನಲ್ ಲೆವೆಲ್‌ನಲ್ಲಿ ಚರ್ಚೆಯಾಗುತ್ತಿದೆ.

  'ಕಾಂತಾರ' ಓಟಿಟಿ ರಿಲೀಸ್ ಬಗ್ಗೆ ಚರ್ಚೆ

  'ಕಾಂತಾರ' ಓಟಿಟಿ ರಿಲೀಸ್ ಬಗ್ಗೆ ಚರ್ಚೆ

  'ಕಾಂತಾರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಇನ್ನೂ ಧೂಳೆಬ್ಬಿಸುತ್ತಲೇ ಇದೆ. ಅಲ್ಲದೆ ಎರಡು ಹಬ್ಬಗಳು ಸಿಕ್ಕಿರುವುದರಿಂದ 'ಕಾಂತಾರ' ತುಂಬಾನೇ ಅಡ್ವಾಂಟೆಜ್ ಆಗಿದೆ. ಅಲ್ಲದೆ 'ಕಾಂತಾರ' ಕಾಂಪಿಟೇಷನ್ ಕೊಡುವಂತಹ ಸಿನಿಮಾಗಳು ಇನ್ನೂ ಒಂದೆರಡು ವಾರ ರಿಲೀಸ್ ಆಗದೇ ಇರುವುದರಿಂದ ಈ ಸಿನಿಮಾಗೆ ಥಿಯೇಟರ್‌ನಲ್ಲಿ ಇನ್ನೂ ಒಂದೆರಡು ವಾರ ಆರಾಮಾಗಿ ಪ್ರದರ್ಶನ ಕಾಣುತ್ತೆ ಅನ್ನೋ ಲೆಕ್ಕಾಚಾರವಿದೆ. ಈ ಮಧ್ಯೆ 'ಕಾಂತಾರ' ಓಟಿಟಿಗೆ ರಿಲೀಸ್ ಆಗುತ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

  'ಕಾಂತಾರ' ಓಟಿಟಿ ರಿಲೀಸ್ ಯಾವಾಗ?

  'ಕಾಂತಾರ' ಓಟಿಟಿ ರಿಲೀಸ್ ಯಾವಾಗ?

  'ಕಾಂತಾರ' ಓಟಿಟಿ ರಿಲೀಸ್ ಬಗ್ಗೆ ನ್ಯಾಷನಲ್‌ ಲೆವಲ್‌ನಲ್ಲಿ ಚರ್ಚೆಯಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ಓಟಿಟಿಗೆ ಮಾರಾಟ ಮಾಡುವುದಕ್ಕೆ ಮಾತುಕತೆ ನಡೆಸುತ್ತಿದ್ದಾರೆ. ಅಮೆಜಾನ್ ಪ್ರೈಮ್ ಜೊತೆ ಕೊನೆಯ ಹಂತದ ಮಾತುಕತೆ ನಡೆಯುತ್ತಿದ್ದು, ಎಲ್ಲಾ ಅಂದುಕೊಂಡಂತೆ ಆದರೆ, 'ಕಾಂತಾರ' ನವೆಂಬರ್ 4 ರಂದು ಓಟಿಟಿಯಲ್ಲಿ ಗ್ರ್ಯಾಂಡ್ ರಿಲೀಸ್ ಆಗಲಿದೆ ಎಂದು ಇಂಡಿಯಾ ಟುಡೇಗೆ ಮೂಲಗಳು ತಿಳಿಸಿದ್ದಾಗಿ ವರದಿ ಮಾಡಿದೆ.

  ಥಿಯೇಟರ್‌ನಲ್ಲಿ 'ಕಾಂತಾರ' ಖಬರ್ ಏನು?

  ಥಿಯೇಟರ್‌ನಲ್ಲಿ 'ಕಾಂತಾರ' ಖಬರ್ ಏನು?

  'ಕಾಂತಾರ' ಈಗಾಗಲೇ 5 ಭಾಷೆಗಳಲ್ಲಿ ರಿಲೀಸ್ ಆಗಿದೆ. ಕನ್ನಡದಲ್ಲಿ ತೆರೆಕಂಡ ಬಳಿಕ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ರಿಲೀಸ್ ಆಗಿದೆ. ಸದ್ಯ ಕರ್ನಾಟಕದಲ್ಲಿ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಜನರು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಮತ್ತೊಂದು ಕಡೆ ಹಿಂದಿ, ತೆಲುಗು ವರ್ಷನ್‌ಗಳಿಗೂ ಆಯಾ ರಾಜ್ಯಗಳಲ್ಲಿ ರೆಸ್ಪಾನ್ಸ್ ಚೆನ್ನಾಗಿದೆ. ತಮಿಳುನಾಡಿನಲ್ಲಿ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗದೇ ಹೋದರೂ, ಅಲ್ಲೂ ರೆಸ್ಪಾನ್ಸ್ ಅದ್ಭುತವಾಗಿದೆ. ಇನ್ನೂ ಮಲಯಾಳಂನಲ್ಲಿ ಇತ್ತೀಚೆಗಷ್ಟೇ ತೆರೆಕಂಡಿದ್ದು, ಇನ್ನೂ ಸಿನಿಮಾ ಪಿಕಪ್ ಆಗಬೇಕು. ಆಗಲೇ ಓಟಿಟಿ ರಿಲೀಸ್ ಬಗ್ಗೆ ಟಾಕ್ ಶುರುವಾಗಿದೆ. ಆದರೆ, 'ಕಾಂತಾರ' ಓಟಿಟಿ ರಿಲೀಸ್ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

  ಸೆಲೆಬ್ರೆಟಿಗಳೂ ಮೆಚ್ಚಿದ ಸಿನಿಮಾ

  ಸೆಲೆಬ್ರೆಟಿಗಳೂ ಮೆಚ್ಚಿದ ಸಿನಿಮಾ

  'ಕಾಂತಾರ' ಸಿನಿಮಾ ಕೇವಲ ಪ್ರೇಕ್ಷಕರಿಗಷ್ಟೇ ಅಲ್ಲ. ಸೆಲೆಬ್ರೆಟಿಗಳಿಗೂ ಇಷ್ಟ ಆಗಿದೆ. ಪ್ಯಾನ್ ಇಂಡಿಯಾ ಸೂಪರ್‌ ಸ್ಟಾರ್ ಪ್ರಭಾಸ್, ಧನುಷ್, ಕಂಗನಾ ರನೌತ್ ಸೇರಿದಂತೆ ಇನ್ನೂ ಹಲವು ಸ್ಟಾರ್‌ಗಳು ಈ ಸಿನಿಮಾಗೆ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಥಿಯೇಟರ್‌ನಲ್ಲಿ ಇನ್ನೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿರೋದ್ರಿಂದ ಓಟಿಟಿಯಲ್ಲಿ ನವೆಂಬರ್‌ 04ರಂದೇ ರಿಲೀಸ್ ಮಾಡುತ್ತಾರಾ? ಅನ್ನೋ ಬಗ್ಗೆ ಸದ್ಯಕ್ಕೆ ಯಾವುದೇ ಕ್ಲಾರಿಟಿ ಇಲ್ಲ.

  'ಒಂದು ವಾರ ಈ ಗುಂಗಿನಿಂದ ಹೊರಬರಲ್ಲ': 'ಕಾಂತಾರ' ನೋಡಿ ವಿಡಿಯೋ ಮಾಡಿದ ಕಂಗನಾ! 'ಒಂದು ವಾರ ಈ ಗುಂಗಿನಿಂದ ಹೊರಬರಲ್ಲ': 'ಕಾಂತಾರ' ನೋಡಿ ವಿಡಿಯೋ ಮಾಡಿದ ಕಂಗನಾ!

  English summary
  Rumours About Rishab Shetty Starrer Kantara Movie OTT Release Date, Know More.
  Saturday, October 22, 2022, 15:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X