For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆ ಆಗದಿದ್ದರೂ ಕೋಟಿಗಟ್ಟಲೆ ಬಾಚಿದ ಸೂರ್ಯಾ ಸಿನಿಮಾ

  |

  ಸಿನಿಮಾ ಹಣ ಮಾಡಲು ಚಿತ್ರಮಂದಿರಗಳಿಗೆ ಬಿಡುಗಡೆ ಆಗಲೇಬೆಕೆಂದೇನೂ ಇಲ್ಲ. ಖ್ಯಾತ ನಟರ ಸಿನಿಮಾಗಳು ಚಿತ್ರಮಂದಿರಗಳಿಗೆ ಬಿಡುಗಡೆ ಆಗುವ ಮುನ್ನವೇ ಕೋಟ್ಯಂತರ ಹಣ ಬಾಚಿಬಿಡುತ್ತವೆ.

  ಪ್ರಸ್ತುತ ಒಟಿಟಿ ಕಾಲದಲ್ಲಂತೂ ಚಿತ್ರಮಂದಿರಗಳ ಅವಶ್ಯಕತೆಯೂ ಸಿನಿಮಾಗಳಿಗೆ ಇಲ್ಲ. ಚಿತ್ರ ನಿರ್ಮಿಸಿ ಭಾರಿ ಮೊತ್ತದ ಲಾಭಕ್ಕೆ ನೇರವಾಗಿ ಒಟಿಟಿಗಳಿಗೆ ಮಾರಲಾಗುತ್ತದೆ. 50-100 ಕೋಟಿಗಳನ್ನು ಕೊಟ್ಟು ಸಿನಿಮಾಗಳನ್ನು ಖರೀದಿಸಲು ಸಹ ಹಿಂದೆ-ಮುಂದೆ ನೋಡುವುದಿಲ್ಲ ಒಟಿಟಿಗಳು.

  ಸೂರ್ಯಾ ನಟನೆಯ ಸಿನಿಮಾ ನೇರ ಒಟಿಟಿಗೆ: ವಿವಾದಕ್ಕೆ ಮುನ್ನುಡಿ?

  ತಮಿಳಿನ ಖ್ಯಾತ ನಟ ಸೂರ್ಯಾ ಅಭಿನಯದ 'ಸೂರರೈ ಪೊಟ್ರು' ಸಿನಿಮಾ ಸಹ ಹೀಗೆಯೇ ಒಟಿಟಿಗೆ ಬಿಡುಗಡೆ ಆಗುತ್ತಿದೆ. ಆದರೆ ಒಟಿಟಿ ಪಾಲು ಹೊರತುಪಡಿಸಿಯೇ ಸಿನಿಮಾ ಈಗಾಗಲೇ ಹಲವು ಕೋಟಿಗಳನ್ನು ಬಾಚಿಕೊಂಡಿದೆ. ಸಿನಿಮಾದ ಸಹ ನಿರ್ಮಾಪಕರೂ ಆಗಿರುವ ಸೂರ್ಯ ಬುದ್ಧಿವಂತಿಕೆಯಿಂದ ಲಾಭ ಮಾಡಿದ್ದಾರೆ.

  ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ ಸಿನಿಮಾ

  ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ ಸಿನಿಮಾ

  ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ ಸಿನಿಮಾ 'ಸೂರರೈ ಪೊಟ್ರು'ನ ಒಟ್ಟು ಬಜೆಟ್ 45 ಕೋಟಿ. ಇದರಲ್ಲಿ ಸೂರ್ಯ ಸಂಭಾವನೆ 25 ಕೋಟಿ ಸೇರಿದೆ. ಸಿನಿಮಾವು ಅಮೆಜಾನ್ ಪ್ರೈಂ ಗೆ ಮಾರಾಟ ಆಗಿರುವುದು ಬರೋಬ್ಬರಿ 50 ಕೋಟಿ ರೂಪಾಯಿಗೆ. ಒಟಿಟಿ ಒಂದರಿಂದಲೇ ಸಿನಿಮಾಕ್ಕೆ ಐದು ಕೋಟಿ ಲಾಭ.

  ಸಿನಿಮಾದ ಸ್ಯಾಟಲೈಟ್ ಹಕ್ಕುಗಳಿಂದ ಹಣ

  ಸಿನಿಮಾದ ಸ್ಯಾಟಲೈಟ್ ಹಕ್ಕುಗಳಿಂದ ಹಣ

  ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಸನ್ ನೆಟ್‌ವರ್ಕ್ಸ್ ಖರೀದಿಸಿದೆ. ಸ್ಯಾಟಲೈಟ್ ಹಕ್ಕುಗಳಿಗೆ ಬರೋಬ್ಬರಿ 15 ಕೋಟಿ ಹಣ ನೀಡಲಾಗಿದೆ. ಸಿನಿಮಾವು ದೀಪಾವಳಿ, ದಸರಾ ಸಮಯಕ್ಕೆ ಸನ್‌ನ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

  ನುಡಿದಂತೆ ನಡೆದ ಜ್ಯೋತಿಕ, ಸರ್ಕಾರಿ ಆಸ್ಪತ್ರೆಗೆ 25 ಲಕ್ಷ ರು. ದೇಣಿಗೆ

  ಹಿಂದಿ ಡಬ್ ಹಾಗೂ ರೀಮೇಕ್ ಹಕ್ಕಿನಿಂದ 20 ಕೋಟಿ

  ಹಿಂದಿ ಡಬ್ ಹಾಗೂ ರೀಮೇಕ್ ಹಕ್ಕಿನಿಂದ 20 ಕೋಟಿ

  ಸೂರರೈ ಪೊಟ್ರು ಸಿನಿಮಾದ ಹಿಂದಿ ಡಬ್ ಹಕ್ಕುಗಳು ಬರೋಬ್ಬರಿ 10 ಕೋಟಿಗೆ ಮಾರಾಟವಾಗಿವೆ. ಇದರ ಹೊರತಾಗಿ ಹಿಂದಿ ರೀಮೇಕ್‌ ಹಕ್ಕು ಸಹ ಹತ್ತು ಕೋಟಿ ರೂಪಾಯಿಗೆ ಮಾರಾಟವಾಗಿದೆ. ಅಲ್ಲಿಗೆ ಸಿನಿಮಾ ಬಿಡುಗಡೆ ಆಗುವ ಮುನ್ನವೇ 85 ಕೋಟಿ ರೂಪಾಯಿ ಸಂಪಾದಿಸಿದೆ.

  ಫ್ಲಾಪ್‌ ಆಗಿದ್ದ ನಿರೀಕ್ಷಿತ ಸಿನಿಮಾ 'ಎನ್‌ಜಿಕೆ'

  ಫ್ಲಾಪ್‌ ಆಗಿದ್ದ ನಿರೀಕ್ಷಿತ ಸಿನಿಮಾ 'ಎನ್‌ಜಿಕೆ'

  ಸೂರ್ಯಾ ಅವರ ಇತ್ತೀಚಿನ ಬಹುನಿರೀಕ್ಷಿತ ಸಿನಿಮಾ 'ಎನ್‌ಜಿಕೆ' 40 ಕೋಟಿ ಸಹ ಸಂಪಾದಿಸಲಾಗದೆ ಫ್ಲಾಪ್ ಎನಿಸಿಕೊಂಡಿತ್ತು. ಅದರಿಂದ ಪಾಠ ಕಲಿತಂತಿರುವ ಸೂರ್ಯಾ, ಒಟಿಟಿಯಲ್ಲಿ ಬಿಡುಗಡೆ ಮಾಡಿ ಒಳ್ಳೆಯ ಲಾಭ ಮಾಡಿದ್ದಾರೆ. ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ಅಕ್ಟೋಬರ್ 30 ರಂದು ಪ್ರಸಾರವಾಗಲಿದೆ.

  ಧನುಶ್ ಕೈಬಿಟ್ಟು ವಿಜಯ್ ಕೈಹಿಡಿದ ನಿರ್ದೇಶಕ ವೆಟ್ರಿಮಾರನ್

  English summary
  Suriya's Soorarai Potru movie made double money of its production cost before it gets released on OTT.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X