For Quick Alerts
  ALLOW NOTIFICATIONS  
  For Daily Alerts

  'ಜೈ ಭೀಮ್' ಬಿಡುಗಡೆ ದಿನಾಂಕ ಘೋಷಣೆ; 'ಸೂರರೈ ಪೋಟ್ರು' ಬಳಿಕ ಮತ್ತೆ ಒಟಿಟಿಯಲ್ಲಿ ಸೂರ್ಯ

  By ಫಿಲ್ಮಿಬೀಟ್ ಡೆಸ್ಕ್
  |

  ತಮಿಳಿನ ಖ್ಯಾತ ನಟ ಸೂರ್ಯ ಅಭಿನಯ ಬಹುನಿರೀಕ್ಷೆಯ 'ಜೈ ಭೀಮ್' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಕಳೆದ ವರ್ಷ ಸೂರರೈ ಪೋಟ್ರು ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದ ನಟ ಸೂರ್ಯ ಈ ಬಾರಿ ಜೈ ಭೀಮ್ ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಅಂದಹಾಗೆ ಈ ಬಾರಿ ಕೂಡ ಸೂರ್ಯ ಒಟಿಟಿ ಮೇಲೆ ನಂಬಿಕೆ ಇಟ್ಟಿದ್ದಾರೆ.

  ಸೂರರೈ ಪೋಟ್ರು ಸಿನಿಮಾ ಕಳೆದ ವರ್ಷ ಒಟಿಟಿಯಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಇದೀಗ ಜೈ ಭೀಮ್ ಸಿನಿಮಾ ಕೂಡ ಆನ್ ಲೈನ್ ನಲ್ಲಿ ಬಿಡುಗಡೆಯಾಗುತ್ತಿದೆ. ಅಂದಹಾಗೆ ಸೂರ್ಯ ನಟನೆಯ ಜೈ ಭೀಮ್ ಸಿನಿಮಾ ದೀಪಾವಳಿಗೂ ಮೊದಲೇ ಬಿಡುಗಡೆಯಾಗುತ್ತಿದೆ. ನವೆಂಬರ್ 2ರಂದು ಸಿನಿಮಾ ಅಭಿಮಾನಿಗಳ ಮುಂದೆ ಬರ್ತಿದೆ. ಒಟಿಟಿ ದೈತ್ಯ ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

  ಈ ಸಿನಿಮಾದಲ್ಲಿ ಸೂರ್ಯ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಈ ಸಿನಿಮಾ ನೈಜ ಘಟನೆ ಆಧಾರಿತ ಸಿನಿಮಾವಾಗಿದೆ. 1993 ಕಾನೂನು ಹೋರಾಟವನ್ನು ಆಧರಿಸಿದ ಸಿನಿಮಾ ಇದಾಗಿದ್ದು, ನಟ ಸೂರ್ಯ, ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ಎನ್ನುವವರ ಪಾತ್ರ ನಿರ್ವಹಿಸುತ್ತಿದ್ದಾರೆ.

  ಈ ಸಿನಿಮಾ ಇರುಳಾರ್ ಬುಡಕಟ್ಟು ಸಮುದಾಯದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವ ಕಾನೂನು ಹೋರಾಟದ ಬಗ್ಗೆ ಇದೆ ಎನ್ನಲಾಗುತ್ತಿದೆ. ನ್ಯಾಯಮೂರ್ತಿ ಚಂದ್ರು ನೇತೃತ್ವದಲ್ಲಿ ನಡೆದ ಈ ಕಾನೂನು ಹೋರಾಟ ಜೈ ಭೀಮ್ ಚಿತ್ರದಲ್ಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

  ಚಿತ್ರಕ್ಕೆ ಜ್ಞಾನವೇಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾದಲ್ಲಿ ನಟ ಧನುಷ್ ಜೊತೆ ಕರ್ಣನ್ ಸಿನಿಮಾದಲ್ಲಿ ನಟಿಸಿದ್ದ ನಾಯಕಿ ರಾಜಿಶಾ ವಿಜಯನ್ ಜೈ ಭೀಮ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕರ್ಣನ್ ನಲ್ಲಿ ರಾಜಿಶಾ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅದೇ ರೀತಿಯ ಮತ್ತೊಂದು ಪಾತ್ರದ ಮೂಲಕ ಚಿತ್ರಾಭಿಮಾನಿಗಳ ಮುಂದೆ ಬರ್ತಿದ್ದಾರೆ. ಬುಡಕಟ್ಟು ಜನಾಂಗದ ಮಹಿಳೆಯ ಪಾತ್ರದಲ್ಲಿ ರಾಜಿಶಾ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ ಜೈ ಭೀಮ್ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ನವೆಂಬರ್ 2ಕ್ಕೆ ತೆರೆಬೀಳಲಿದೆ.

  English summary
  Actor Surya starrer Jai Bhim to release on November 2nd on Amazon prime video.
  Saturday, October 2, 2021, 10:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X