twitter
    For Quick Alerts
    ALLOW NOTIFICATIONS  
    For Daily Alerts

    #UninstallHotstar ಟ್ರೆಂಡ್: ಮೊಘಲರ ಕುರಿತು ಸೀರಿಸ್ ಬಿಡುಗಡೆ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಹಾಟ್ ಸ್ಟಾರ್

    |

    ಒಟಿಟಿ ಪ್ಲಾರ್ಟ್ ಫಾರ್ಮ್ ನ ದೈತ್ಯ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಗೆ ಸಂಕಷ್ಟ ಎದುರಾಗಿದೆ. ದಿ ಎಂಪೈರ್ ವೆಬ್ ಸೀರಿಸ್ ಬಿಡುಗಡೆ ಮಾಡಿ ಹಾಟ್ ಸ್ಟಾರ್ ಪೇಚಿಗೆ ಸಿಲುಕಿದೆ. ಹಾಟ್ ಸ್ಟಾರ್ ಇನ್ ಇನ್ಸ್ಟಾಲ್ ಮಾಡುವಂತೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದು, ಟ್ವಿಟ್ಟರ್ ಅನ್ ಇನ್ಸ್ಟಾಲ್ ಹಾಟ್ ಸ್ಟಾರ್ ಟ್ರೆಂಡಿಂಗ್ ನಲ್ಲಿದೆ.

    ಅಷ್ಟಕ್ಕೂ ದಿ ಎಂಪೈರ್ ವೆಬ್ ಸೀರಿಸ್ ನಲ್ಲಿ ನೆಟ್ಟಿಗರು ರೊಚ್ಚಿಗೇಳುವಂತಹದ್ದು ಏನಿದೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಸೀರಿಸ್ ನಲ್ಲಿ ಮೋಘಲರನ್ನು ವೈಭವೀಕರಿಸಿ ತೋರಿಸಲಾಗಿದೆ ಎನ್ನುವ ಕಾರಣಕ್ಕೆ ಅನೇಕರು ಈ ವೆಬ್ ಸೀರಿಸ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ವೆಬ್ ಸೀರಿಸ್ ಬ್ಯಾನ್ ಮಾಡಬೇಕು ಜೊತೆಗೆ ಇಂಥ ವೆಬ್ ಸೀರಿಸ್ ಬಿಡುಗಡೆ ಮಾಡಿದ ಹಾಟ್ ಸ್ಟಾರ್ ಅನ್ನು ಅನ್ ಇನ್ಸ್ಟಾಲ್ ಮಾಡಬೇಕೆನ್ನುವ ಒತ್ತಾಯ ಕೇಳಿಬರುತ್ತಿದೆ.

    ಕರಣ್ ಜೋಹರ್ ಸಲ್ಮಾನ್ ಖಾನ್‌ಗಿಂತಲೂ ಅದ್ವಾನ: ನಟಿ ಸೋಫಿಯಾ ಹಯಾತ್ಕರಣ್ ಜೋಹರ್ ಸಲ್ಮಾನ್ ಖಾನ್‌ಗಿಂತಲೂ ಅದ್ವಾನ: ನಟಿ ಸೋಫಿಯಾ ಹಯಾತ್

    ಮೊಘಲರು ಭಾರತವನ್ನು ವಶಪಡಿಸಿಕೊಂಡರು, ಸಾವಿರಾರು ಭಾರತೀಯರನ್ನು ಹತ್ಯೆ ಮಾಡಿದ್ದಾರೆ, ಭಾರತವನ್ನು ಲೂಟಿ ಮಾಡಿದ್ದಾರೆ, ಕಿರುಕುಳ ನೀಡಿದ್ದಾರೆ ಅಂತವರನ್ನು ವೈಭವೀಕರಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಹಾಟ್ ಸ್ಟಾರ್ ಪ್ರತಿಕ್ರಿಯೆ ನೀಡಿ, ಈ ಸೀರಿಸ್ ನಲ್ಲಿ ಯಾವುದೇ ವಿವಾದಾತ್ಮಕ ಅಂಶ ವಿಲ್ಲ. ಮೊಘಲರನ್ನು ವೈಭವೀಕರಿಸಿಲ್ಲ ಎಂದು ಹೇಳಿದೆ. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.

    #UninstallHotstar: Netizens slam new series The Empire for glorifying

    ಅಂದಹಾಗೆ 'ದಿ ಎಂಪೈರ್' ವೆಬ್ ಸರಣಿಯನ್ನು ಮಿತಾಕ್ಷರ ಕುಮಾರ್ ನಿರ್ದೇಶ ಮಾಡಿದ್ದು, ನಿಖಿಲ್ ಅಡ್ವಾಣಿ ರಚಿಸಿದ್ದಾರೆ. ಇದು ಎಲೆಕ್ಸ್ ರುದರ್ ಫೋರ್ಡ್ ಅವರ 'ಎಂಪೈರ್ ಆಫ್ ದಿ ಮೊಘಲ್' ಕಾದಂಬರಿ ಆಧರಿಸಿ ಈ ಸರಣಿಯನ್ನು ಮಾಡಲಾಗಿದೆ. ಈ ಸರಣಿಯಲ್ಲಿ ಬಾಬರ್ ನಿಂದ ಪ್ರಾರಂಭವಾಗಿ ಔರಂಗಜೇಬ್ ವರೆಗಿನ ಮೊಘಲ್ ಸಾಮ್ರಾಜ್ಯದ ಏರಿಕೆ ಮತ್ತು ಪತನದ ಮೇಲೆ ಕೇಂದ್ರೀಕರಿಸಲಾಗಿದೆ.

    ಮೊಘಲ್ ದೊರೆ ಬಾಬರ್ ಉತ್ತರಾಧಿಕಾರಿಯಾದ ಕಥೆ, ಚಿಕ್ಕ ವಯಸ್ಸಿನಲ್ಲೇ ಭಾರತದ ವಿರುದ್ಧ ವಿಜಯಕ್ಕಾಗಿ ಅಭಿಯಾನ ಪ್ರಾರಂಭಮಾಡಿದಾಗಿಂದ ಪ್ರಾರಂಭವಾಗುತ್ತದೆ. ಈ ಸೀರಿಸ್ ನಲ್ಲಿ ಮೋಘಲರನ್ನು ವೈಭವೀಕರಿಸಿ ತೋರಿಸಲಾಗಿದೆ ಎನ್ನುವ ಕಾರಣಕ್ಕೆ ಈ ಸೀರಿಸ್ ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ನಿಖಿಲ್ ಅಡ್ವಾಣಿ, "ನಾನು ಈ ಪುಸ್ತಕವನ್ನು ಫಾಲೋ ಮಾಡುತ್ತೇನೆ. ನಿಮಗೆ ಈ ಬಗ್ಗೆ ಆಕ್ಷೇಪಣೆ ಇದ್ದರೇ ನೀವು ಒಬ್ಬ ನಿರ್ದೇಶಕ ಮತ್ತು ಕಥೆಗಾರನಾಗಿ, ಈ ಪುಸ್ತಕ ಮತ್ತು ಕಥೆಯಿಂದ ಆಕರ್ಷಿತನಾಗಿದ್ದೇನೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಅವರು ಪುಸ್ತಕದಲ್ಲಿ ಹೇಳಿದ್ದಾರೆ" ಎಂದು ಹೇಳಿದ್ದಾರೆ.

    "ಪುಸ್ತಕದ ಪಾತ್ರಗಳು ಯಶಸ್ಸು ಮತ್ತು ವೈಫಲ್ಯಗಳನ್ನು ನಾನು ಪ್ರೀತಿಸುತ್ತೇನೆ ಮತ್ತು ಅದಕ್ಕಾಗಿಯೇ ನಾನು ಅದನ್ನು ತೆರೆಗೆ ತರಲು ಪ್ರಯತ್ನಿಸಿದೆ" ಎಂದು ಹೇಳಿದ್ದಾರೆ. ಸದ್ಯ ಭಾರಿ ವಿವಾದಕ್ಕೆ ಗುರಿಯಾಗಿರುವ ಸರಣಿಯಲ್ಲಿ ದಿನೋ ಮೊರಿಯಾ, ಕುನಾಲ್ ಕಪೂರ್, ಶಬಾನಾ ಅಜ್ಮಿ, ದ್ರಷ್ಟಿ ಧಮಿ, ಆದಿತ್ಯ, ರಾಹುಲ್ ದೇವ್ ಸೇರಿದಂತೆ ಅನೇಕರು ನಟಿಸಿದ್ದಾರೆ.

    ಅಂದಹಾಗೆ ಭಾರತದಲ್ಲಿ ವೆಬ್ ಸೀರಿಸ್ ವಿವಾದ ಸೃಷ್ಟಿಮಾಡಿರುವುದು ಇದೇ ಮೊದಲಲ್ಲ. ಈ ಮೊದಲು ಸಹ ಸಾಕಷ್ಟು ವೆಬ್ ಸೀರಿಸ್ ಗಳು ವಿವಾದ ಸೃಷ್ಟಿಸಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದವು. ಪಾತಾಳ್ ಲೋಕ್, ತಾಂಡವ್, ಸೇಕ್ರೆಡ್ ಗೇಮ್ಸ್, ದಿ ಫ್ಯಾಮಿಲಿ ಮ್ಯಾನ್, ಗಾಡ್ ಮ್ಯಾನ್, ಆಶ್ರಮ್, ಲೈಲಾ ಸೇರಿದಂತೆ ಅನೇಕ ಜನಪ್ರಿಯ ವೆಬ್ ಸೀರಿಸ್ ಗಳು ವಿವಾದದಲ್ಲಿ ಸಿಲುಕಿದ್ದವು. ಬ್ಯಾನ್ ಮಾಡುವಂತೆ ನೆಟ್ಟಿಗರು ಒತ್ತಾಯ ಮಾಡಿದ್ದರು.

    English summary
    #UninstallHotstar: Netizens slam new series The Empire for glorifying.
    Saturday, August 28, 2021, 11:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X