Don't Miss!
- Sports
ಬಗೆಹರಿಯಿತು ಉಸ್ಮಾನ್ ಖವಾಜಾ ವೀಸಾ ಸಮಸ್ಯೆ: ಭಾರತ ಪ್ರಯಾಣಕ್ಕೆ ಗ್ರೀನ್ಸಿಗ್ನಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿರುವ ವಾರಿಸು ಹಾಗೂ ತುನಿವು ಓಟಿಟಿ ಬಿಡುಗಡೆ ದಿನಾಂಕ ಬಹಿರಂಗ!
ಈ ಬಾರಿಯ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ದಕ್ಷಿಣ ಭಾರತದ ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಗಳಲ್ಲಿ ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟು ಅಬ್ಬರಿಸುತ್ತಿವೆ. ಬಾಕ್ಸ್ ಆಫೀಸ್‌ನ ಕಲೆಕ್ಷನ್ ಜಿದ್ದಾಜಿದ್ದಿಯಲ್ಲಿ ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ಬಿದ್ದ ಎಲ್ಲಾ ನಾಲ್ಕೂ ಚಿತ್ರಗಳೂ ಸಹ ನೂರು ಕೋಟಿ ಗಡಿ ದಾಟಿ ಗೆದ್ದಿವೆ. ನಾಲ್ಕೂ ಚಿತ್ರಗಳೂ ಸಹ ವಿಮರ್ಶಕರಿಂದ ಸಾಧಾರಣ ಹಾಗೂ ಸಾಧಾರಣಕ್ಕಿಂತ ಉತ್ತಮ ಎಂಬ ವಿಮರ್ಶೆಯನ್ನು ಪಡೆದುಕೊಂಡರೂ ಸಹ ಗಳಿಕೆಯಲ್ಲಿ ನಿರೀಕ್ಷೆಯಂತೆ ಕೋಟಿ ಕೋಟಿ ಕೊಳ್ಳೆ ಹೊಡೆದಿವೆ.
ಹೌದು, ತಮಿಳಿನ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಮತ್ತು ತೆಲುಗಿನ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಹಾಗೂ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರಗಳು ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡು ಅಬ್ಬರಿಸುತ್ತಿವೆ. ಇನ್ನು ಚಿತ್ರತಂಡಗಳು ಹಂಚಿಕೊಂಡಿರುವ ಮಾಹಿತಿ ಪ್ರಕಾರ ತಮಿಳಿನಲ್ಲಿ ಇನ್ನೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿರುವ ವಿಜಯ್ ನಟನೆಯ ವಾರಿಸು ಚಿತ್ರ ಈ ಬಾರಿಯ ಸಂಕ್ರಾಂತಿ ವಿನ್ನರ್ ಎನಿಸಿಕೊಂಡಿದ್ದು, ತೆಲುಗಿನಲ್ಲಿ ಹೆಚ್ಚು ಗಳಿಕೆ ಮಾಡಿದ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಸಂಕ್ರಾಂತಿ ವಿನ್ನರ್ ಎನಿಸಿಕೊಂಡಿದೆ.
ಸದ್ಯ ಓಟಿಟಿ ಜಮಾನ ನಡೆಯುತ್ತಿದ್ದು, ಚಿತ್ರಮಂದಿರಗಳ ಹಾಗೆಯೇ ಓಟಿಟಿಗೆ ಚಿತ್ರಗಳು ಯಾವಾಗ ಬರುತ್ತವೆ ಎಂದು ಕಾಯುವ ಪ್ರೇಕ್ಷಕ ವರ್ಗ ಸಹ ಇದೆ. ದುಬಾರಿ ಟಿಕೆಟ್‌ಗೆ ಬೆಲೆ ತೆರುವ ಬದಲು ಓಟಿಟಿಗೆ ಬಂದಾಗ ಆರಾಮಾಗಿ ಚಿತ್ರ ವೀಕ್ಷಿಸಲು ಇಚ್ಛಿಸುವ ಸಿನಿ ರಸಿಕರು ಇವರು. ಇನ್ನು ಸಾಮಾನ್ಯವಾಗಿ ಈಗಿನ ಚಿತ್ರಗಳು ಇಂತಹ ದಿನವೇ ಓಟಿಟಿಗೆ ಬರಬೇಕು ಎಂಬ ಒಪ್ಪಂದ ಚಿತ್ರತಂಡ ಹಾಗೂ ಓಟಿಟಿ ಪ್ಲಾಟ್‌ಫಾರ್ಮ್‌ಗಳ ನಡುವೆ ಆಗಿರುತ್ತೆ. ಅದರಂತೆ ವಾರಿಸು ಹಾಗೂ ತುನಿವು ಚಿತ್ರಗಳೂ ಸಹ ಬಹುಬೇಗನೆ ಓಟಿಟಿಗೆ ಬರುವ ದಿನಾಂಕ ಸದ್ಯ ಬಹಿರಂಗಗೊಂಡಿವೆ.

ಫೆಬ್ರವರಿಯಲ್ಲಿ ಎರಡೂ ಚಿತ್ರಗಳೂ ಓಟಿಟಿಗೆ!
ಮುಂಬರುವ ಫೆಬ್ರವರಿ ತಿಂಗಳಿನಲ್ಲಿಯೇ ಅಜಿತ್ ಕುಮಾರ್ ನಟನೆಯ ತುನಿವು ಹಾಗೂ ವಿಜಯ್ ನಟನೆಯ ವಾರಿಸು ಚಿತ್ರಗಳು ಓಟಿಟಿ ವೇದಿಕೆಗಳಿಗೆ ಬರಲಿವೆ ಎಂಬುದನ್ನು ಓಟಿಟಿ ಮೂಲಗಳು ತಿಳಿಸಿವೆ. ಅಜಿತ್ ನಟನೆಯ ತುನಿವು ಚಿತ್ರದ ಓಟಿಟಿ ಪ್ರಸಾರದ ಹಕ್ಕನ್ನು ನೆಟ್‌ಫ್ಲಿಕ್ಸ್ ಖರೀದಿಸಿದ್ದು, ಫೆಬ್ರವರಿ 10ರಿಂದ ಚಿತ್ರ ಓಟಿಟಿಗೆ ಬರಲಿದೆ ಎಂದು ಓಟಿಟಿ ಮೂಲಗಳು ತಿಳಿಸಿವೆ. ಇನ್ನು ವಿಜಯ್ ನಟನೆಯ ವಾರಿಸು ಸಹ ಫೆಬ್ರವರಿ 10 ಅಥವಾ 14ರಂದು ಓಟಿಟಿಗೆ ಬರಲಿದೆ ಎಂದೂ ಸಹ ಮಾಹಿತಿ ಹೊರಬಿದ್ದಿದೆ. ವಾರಿಸು ಚಿತ್ರದ ಓಟಿಟಿ ಪ್ರಸಾರ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೊ ಖರೀದಿಸಿದೆ.

ವಾರಿಸು ಟಿವಿ ಪ್ರೀಮಿಯರ್ ಕನ್ಫರ್ಮ್
ಇನ್ನು ವಿಜಯ್ ಹಾಗೂ ರಶ್ಮಿಕಾ ನಟನೆಯ ವಾರಿಸು ಚಿತ್ರ ಟಿವಿಯಲ್ಲಿ ಯಾವಾಗ ಪ್ರಸಾರವಾಗಲಿದೆ ಎಂಬ ಮಾಹಿತಿಯೂ ಸಹ ಹೊರಬಿದ್ದಿದೆ. ಸನ್ ಟಿವಿಯಲ್ಲಿ ಏಪ್ರಿಲ್ ತಿಂಗಳ 14ರಂದು ವಾರಿಸು ಚಿತ್ರ ಪ್ರೀಮಿಯರ್ ಆಗಲಿದೆ. ತುನಿವು ಚಿತ್ರ ಸಹ ಏಪ್ರಿಲ್ ತಿಂಗಳಿನಲ್ಲಿಯೇ ಟಿವಿಯಲ್ಲಿ ಪ್ರೀಮಿಯರ್ ಆಗುವ ಸಾಧ್ಯತೆ ಇದೆ. ಈ ಮೂಲಕ ಒಂದೇ ದಿನದಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಜಿದ್ದಾಜಿದ್ದಿ ನಡೆಸಿದ್ದ ವಾರಿಸು ಹಾಗೂ ತುನಿವು ಚಿತ್ರಗಳು ಓಟಿಟಿಯಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಚಿತ್ರ ಯಾವುದು ಹಾಗೂ ಟಿವಿಯಲ್ಲಿ ಹೆಚ್ಚು ಟಿವಿಆರ್ ಪಡೆದ ಚಿತ್ರ ಯಾವುದು ಎಂಬ ರೇಸ್‌ಗೆ ಇಳಿಯುವುದು ಖಚಿತ.

ದೀಪಾವಳಿಗೆ ಮತ್ತೆ ವಿಜಯ್ vs ಅಜಿತ್ ಕಾಳಗ?
ಇನ್ನು ಈ ಚಿತ್ರಗಳ ಬಳಿಕ ಸೆಟ್ಟೇರಲಿರುವ ಈ ಇಬ್ಬರು ಸ್ಟಾರ್‌ಗಳ ನಟನೆಯ ಮುಂದಿನ ಚಿತ್ರಗಳೆರಡೂ ಈ ರೀತಿಯೇ ಮುಂಬರುವ ದೀಪಾವಳಿಗೆ ಬಿಡುಗಡೆಯಾಗಿ ಮತ್ತೆ ಬಾಕ್ಸ್ ಆಫೀಸ್ ಏರ್ಪಡುವ ಸಾಧ್ಯತೆಗಳಿವೆ. ವಿಜಯ್ ಮುಂದಿನ ಚಿತ್ರವನ್ನು ಖೈದಿ, ಮಾಸ್ಟರ್ ಹಾಗೂ ವಿಕ್ರಮ್ ಖ್ಯಾತಿಯ ಯಶಸ್ವಿ ನಿರ್ದೇಶಕ ಲೋಕೇಶ್ ಕನಕರಾಜ್ ಜತೆ ಮಾಡುತ್ತಿದ್ದರೆ, ಅಜಿತ್ ಕುಮಾರ್ ತಮ್ಮ ಮುಂದಿನ ಚಿತ್ರವನ್ನು ನಯನತಾರಾ ಪತಿ, ನಿರ್ದೇಶಕ ವಿಘ್ನೇಶ್ ಶಿವನ್ ಜತೆ ಮಾಡಲಿದ್ದಾರೆ. ಚಿತ್ರಗಳ ಕೆಲಸಗಳು ದೀಪಾವಳಿ ವೇಳೆ ಮುಗಿಯದೇ ತಡವಾದರೆ ಮುಂದಿನ ಸಂಕ್ರಾಂತಿಗೆ ಮತ್ತೆ ಕ್ಲಾಷ್ ಆಗುವುದಂತೂ ಬಹುತೇಕ ಖಚಿತ.