twitter
    For Quick Alerts
    ALLOW NOTIFICATIONS  
    For Daily Alerts

    2021 ವಿಶೇಷ: ಅಕ್ಷಯ್ ಕುಮಾರ್ ಅನ್ನು ಹಿಂದಿಕ್ಕಿದ ತಾಪ್ಸಿ ಪನ್ನು!

    |

    ವರ್ಷದ ಅಂತ್ಯದಲ್ಲಿ ನಿಂತಿದ್ದೇವೆ. ಸಿನಿಮಾ ರಂಗಕ್ಕೆ ಈ ವರ್ಷ ಬಹಳ ಫಲಪ್ರದವೇನೂ ಅಲ್ಲ, ಆದರೆ ಕಳೆದ ವರ್ಷದ ಆಘಾತಕ್ಕೆ ಹೋಲಿಸಿದರೆ ಈ ವರ್ಷ ತುಸುವಾದರೂ ಉಸಿರಾಡುವಂತಾಯಿತು ಎಂಬುದೇ ಸಮಾಧಾನ.

    2020ರ ಆರಂಭದಲ್ಲಿ ಕೊರೊನಾದಿಂದ ತೀವ್ರ ಹೊಡೆತ ತಿಂದ ಚಿತ್ರೋದ್ಯಮ ಇನ್ನೂ ಸುಧಾರಿಸಿಕೊಳ್ಳಲು ಯತ್ನಿಸುತ್ತಲೇ ಇದೆ. ಆದರೆ ಇದೇ ಕೊರೊನಾ ಅವಧಿಯಲ್ಲಿ ಸಿನಿಮಾ ಮಂದಿಗೆ ಹೊಸ ಆಶಾಕಿರಣವಾಗಿ ಕಾಣಿಸಿದ್ದು ಒಟಿಟಿಗಳು.

    ಹಲವಾರು ಮಂದಿ ನಿರ್ಮಾಪಕರು, ನಟರು ತಮ್ಮ ಸಿನಿಮಾಗಳನ್ನು ಒಟಿಟಿಗೆ ಮಾರಾಟ ಮಾಡಿಕೊಂಡು ದೊಡ್ಡ ಮಟ್ಟದ ಲಾಭವನ್ನೇ ಗಳಿಸಿದವು. ಕೆಲವು ನಿರ್ದೇಶಕರಂತೂ ಒಟಿಟಿಗಳಿಗಾಗಿಯೇ ಸಿನಿಮಾ, ವೆಬ್ ಸರಣಿ ನಿರ್ದೇಶಿಸಿ ಕೊರೊನಾ ತಂದಿಟ್ಟಿದ್ದ ನಿರುದ್ಯೋಗದಿಂದ ಬಚಾವಾದರು. ಇದೀಗ ಕೊರೊನಾದ ಬಳಿಕವೂ ಒಟಿಟಿ ಎಂಬುದು ಭಾರತೀಯ ಚಿತ್ರಕರ್ಮಿಗಳಿಗೆ ಒಂದು ನಿರ್ದಿಷ್ಟ ಲಾಭದ ಕೇಂದ್ರವಾಗಿ ಬದಲಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಸಿನಿಮಾವನ್ನು ಒಟಿಟಿಗೆ ಮಾರಾಟ ಮಾಡಿ ದೊಡ್ಡ ಮಟ್ಟದ ಹಣವನ್ನೇ ಮಾಡುತ್ತಿದ್ದಾರೆ ನಿರ್ಮಾಪಕರು.

    ಭಾರತದಲ್ಲಿ ಪ್ರಸ್ತುತ ಹಲವು ಒಟಿಟಿಗಳು ಸಕ್ರಿಯವಾಗಿವೆ, ಅದರಲ್ಲಿ ಪ್ರಮುಖವಾದುದು ನೆಟ್‌ಫ್ಲಿಕ್ಸ್. ಈ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ಬಾರಿ ನೋಡಲಾದ ಆರು ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ.

    ಆರನೇ ಸ್ಥಾನದಲ್ಲಿ 'ತಲೈವಿ'

    ಆರನೇ ಸ್ಥಾನದಲ್ಲಿ 'ತಲೈವಿ'

    ಕಂಗನಾ ರನೌತ್ ನಟಿಸಿದ್ದ ಬಹುನಿರೀಕ್ಷಿತ ಸಿನಿಮಾ 'ತಲೈವಿ' ಆರನೇ ಸ್ಥಾನದಲ್ಲಿದೆ. ಜಯಲಲಿತಾ ಜೀವನ ಆಧರಿಸಿ ನಿರ್ಮಾಣವಾಗಿದ್ದ ಈ ಸಿನಿಮಾ ಮೊದಲಿಗೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಅದರ ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಯ್ತು. ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ 53 ಲಕ್ಷ ಬಾರಿ ವೀಕ್ಷಿಸಲಾಗಿದೆ.

    ಐದನೇ ಸ್ಥಾನದಲ್ಲಿ 'ಮೀನಾಕ್ಷಿ ಸುಂದರೇಶ್ವರ್'

    ಐದನೇ ಸ್ಥಾನದಲ್ಲಿ 'ಮೀನಾಕ್ಷಿ ಸುಂದರೇಶ್ವರ್'

    ನೆಟ್‌ಫ್ಲಿಕ್ಸ್‌ನಲ್ಲಿ ನೇರವಾಗಿ ಬಿಡುಗಡೆ ಆದ ಇತ್ತೀಚಿನ ಸಿನಿಮಾ 'ಮೀನಾಕ್ಷಿ ಸುಂದರೇಶ್ವರ್' ಐದನೇ ಸ್ಥಾನದಲ್ಲಿದೆ. ತಮಿಳು ಹುಡುಗ ಸುಂದರೇಶ್ವರ್ ಹಾಗೂ ಯುವತಿ ಮೀನಾಕ್ಷಿ ನಡೆಯುವ ನಡೆಯುವ ಕತೆಯನ್ನು ಒಳಗೊಂಡಿದೆ. ಪ್ರೇಮ ಕತೆಯಾದರೂ ಸಾಕಷ್ಟು ಹಾಸ್ಯ, ಕೌಟುಂಬಿಕ ಮೌಲ್ಯಗಳನ್ನು ಒಳಗೊಂಡಿದ್ದ ಈ ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಮಾಡಿದ್ದರು. ಸಿನಿಮಾದಲ್ಲಿ 'ದಂಗಲ್' ಖ್ಯಾತಿಯ ಸಾನ್ಯ ಮಲ್ಹೋತ್ರ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ 91 ಲಕ್ಷ ಬಾರಿ ವೀಕ್ಷಿಸಲಾಗಿದೆ.

    ನಾಲ್ಕನೇ ಸ್ಥಾನದಲ್ಲಿ 'ಧಮಾಕಾ'

    ನಾಲ್ಕನೇ ಸ್ಥಾನದಲ್ಲಿ 'ಧಮಾಕಾ'

    ಕಾರ್ತಿಕ್ ಆರ್ಯನ್ ನಟನೆಯ 'ಧಮಾಕಾ ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ. ಈ ಸಿನಿಮಾ ಸಹ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿತ್ತು. ಪತ್ರಿಕೋದ್ಯಮ ಹಾಗೂ ಪತ್ರಕರ್ತನ ಬಗ್ಗೆ ಇದ್ದ ಈ ಸಿನಿಮಾವನ್ನು ರಾಮ್ ಮಧ್ವಾನಿ ನಿರ್ದೇಶನ ಮಾಡಿದ್ದರು. ಸಿನಿಮಾವು ನವೆಂಬರ್ 19 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿ ಬರೋಬ್ಬರಿ 1.13 ಕೋಟಿ ಬಾರಿ ಬಾರಿ ವೀಕ್ಷಣೆ ಮಾಡಲಾಗಿದೆ.

    ಮೂರನೇ ಸ್ಥಾನದಲ್ಲಿ 'ಮೀಮಿ'

    ಮೂರನೇ ಸ್ಥಾನದಲ್ಲಿ 'ಮೀಮಿ'

    ಕೃತಿ ಸೆನನ್ ನಟನೆಯ ಭಿನ್ನ ಕತೆಯುಳ್ಳ 'ಮೀಮಿ' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಈ ವರ್ಷ ಅತಿ ಹೆಚ್ಚು ಬಾರಿ ನೋಡಲಾದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಯುವತಿಯ ಬಾಡಿಗೆ ತಾಯ್ತನ, ಅದರಿಂದ ಅನುಭವಿಸುವ ಸಮಸ್ಯೆಗಳು, ನಂತರ ಮಗುವಿನೊಂದಿಗೆ ಬಾಡಿಗೆ ತಾಯಿ ಬೆಳೆಸಿಕೊಳ್ಳುವ ಆಪ್ತತೆ. ತಾಯಿ ಮಗನ ಸಂಬಂಧ ಹೀಗೆ ಹಲವು ವಿಷಯಗಳನ್ನು ಒಳಗೊಂಡಿದ್ದ 'ಮೀಮಿ' ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿದ್ದರು. ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ 2.18 ಕೋಟಿ ಬಾರಿ ವೀಕ್ಷಿಸಲಾಗಿದೆ.

    ಎರಡನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಸಿನಿಮಾ

    ಎರಡನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಸಿನಿಮಾ

    ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ನಟನೆಯ 'ಸೂರ್ಯವಂಶಿ' ಸಿನಿಮಾ ಅತಿ ಹೆಚ್ಚು ಬಾರಿ ವೀಕ್ಷಿಸಲಾದ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆದ ಈ ಸಿನಿಮಾ ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿ ಅಲ್ಲಿಯೂ ದೊಡ್ಡ ಸಂಖ್ಯೆಯ ಜನರಿಂದ ವೀಕ್ಷಿಸಲ್ಪಟ್ಟಿತು. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬರೋಬ್ಬರಿ 2.26 ಕೋಟಿ ಮಂದಿ ವೀಕ್ಷಿಸಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ 'ಸೂರ್ಯವಂಶಿ' ಸೂಪರ್ ಹಿಟ್, ಒಟಿಟಿಯಲ್ಲಿಯೂ ಸೂಪರ್ ಹಿಟ್.

    ಮೊದಲ ಸ್ಥಾನದಲ್ಲಿ 'ಹಸೀನ್ ದಿಲ್‌ರುಬಾ'

    ಮೊದಲ ಸ್ಥಾನದಲ್ಲಿ 'ಹಸೀನ್ ದಿಲ್‌ರುಬಾ'

    ತಾಪ್ಸಿ ಪನ್ನು ನಟನೆಯ 'ಹಸೀನ್ ದಿಲ್‌ರುಬಾ' ಸಿನಿಮಾ ಈ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ಬಾರಿ ವೀಕ್ಷಿಸಲಾದ ಭಾರತೀಯ ಸಿನಿಮಾ. ವಿವಾಹ, ಅಕ್ರಮ ಸಂಬಂಧ, ಅಪರಾಧ ಮಿಳಿತವಾದ ಕತೆಯನ್ನು ಹೊಂದಿದ್ದ ಈ ಸಿನಿಮಾದಲ್ಲಿ ತಾಪ್ಸಿ ಪನ್ನು ಬೋಲ್ಡ್ ಆಗಿ ನಟಿಸಿದ್ದರು. ಜುಲೈ 02 ರಂದು ನೆಟ್‌ಫ್ಲಿಕ್ಸ್‌ ನೇರವಾಗಿ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾವನ್ನು 2.46 ಕೋಟಿ ಬಾರಿ ವೀಕ್ಷಿಸಲಾಗಿದೆ. ಸಿನಿಮಾವನ್ನು ವಿನಿಲ್ ಮ್ಯಾಥೀವ್ ನಿರ್ದೇಶನ ಮಾಡಿದ್ದಾರೆ.

    English summary
    Here is the list of most watched Indian movies on Netflix this year. Taapsee Pannu beats Akshay Kumar and Karthik Aryan.
    Thursday, December 30, 2021, 9:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X