For Quick Alerts
  ALLOW NOTIFICATIONS  
  For Daily Alerts

  ಗಂಡೆದೆ: ಸಂಪೂರ್ಣ ಚಿರಂಜೀವಿ 'ಸರ್ಜಾ' ಪುರ

  By * ಮಹೇಶ್, ಕಲಗಾರು
  |

  ತೆಲುಗು ಚಿತ್ರರಂಗದಲ್ಲಿ ಒಂದು ಟ್ರೆಂಡ್ ಇದೆ. ಒಂದಷ್ಟು ಕಾರು ಉಡಾಯಿಸುವುದು. ನಾಯಕನಿಂದ ಖಳನಾಯಕರಿಗೆ ಹಿಗ್ಗಾ ಮಗ್ಗಾ ಹೊಡೆಸುವುದು. ಒಂದಷ್ಟು ಆಕ್ಷನ್ ತೋರಿಸುವುದು. ಸಿಕ್ಕ ಸಿಕ್ಕಲ್ಲಿ ಕಂಡಕಂಡವರ ಮಗ್ಗಲುಮುರಿಯುವುದು...ಇದು ಅಲ್ಲಿನ ಪ್ರೇಕ್ಷಕರ ನಾಡಿ ಮಿಡಿತ.

  ಅದೇ ಜನರಇಷ್ಟಾರ್ಥಕ್ಕೆ ತಕ್ಕಂತೆ ಸ್ಕ್ರಿಪ್ಟ್ ಬರೆದು, ಕೆಲವು ಹಿಟ್ ಚಿತ್ರಕೊಟ್ಟಿರುವ ಶಿವ ಅಕುಲ ನಿರ್ದೇಶನದ ಚಿತ್ರವೇ ಗಂಡೆದೆ.ಇಲ್ಲಿಯೂ ಒಂದಷ್ಟು ಹೊಡೆದಾಟದ ಸುರಿಮಳೆಗರೆದಿದ್ದಾರೆ ಶಿವಾ!

  ಆಕ್ಷನ್ ಒಂದನ್ನು ಹೊರತಾಗಿ ಗಂಡೆದೆ ಚಿತ್ರದಲ್ಲಿ ಏನಿದೆ ಎಂಬ ಪ್ರಶ್ನೆಗೆ ಉತ್ತರ-ದೇವರಾಜ್, ರಂಗಾಯಣ ರಘು ಮತ್ತು ರಾಗಿಣಿ. ನಾಯಕಿ ಇದ್ದಷ್ಟು ಹೊತ್ತೂ ಹೊತ್ತು ಹೋಗಿದ್ದು ಗೊತ್ತಾಗುವುದಿಲ್ಲ.

  ದೇವರಾಜ್ ಹಾಗೂ ರಂಗಾಯಣ ರಘು ಚಾಲೆಂಜ್ ಹಾಕಿಕೊಂಡುನಟಿಸಿದ್ದಾರೆ. ಆದರೂ ಇಬ್ಬರ ಆಕ್ಟಿಂಗ್ ಪಕ್ಕಾ. ಆಕ್ಷನ್‌ಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಕತೆ ಹಾಗೂ ಅದರ ನಿರೂಪಣೆಗೂ ಕೊಟ್ಟಿದ್ದರೆ ಮುಂದೆ ಆಗುವ ಗಂಡಾಂತರ ತಪ್ಪುತ್ತಿತ್ತು. ಒಂದಷ್ಟು ಕನ್ನಡದ್ದೇ ಕತೆಗಳನ್ನು ಕಲಸು ಮೇಲೋಗರ ಮಾಡಿದ್ದಾರೆ ಎಂದರೆ ಅದು ತರ್ಕಕ್ಕೆನಿಲುಕದ ವಿಮರ್ಶೆ!

  ಹಾಡುಗಳು ಹದವಾಗಿವೆ. ಮುದ ನೀಡುತ್ತವೆಯಾ ಎಂದು ಕೇಳಬೇಡಿ. ಛಾಯಾಗ್ರಹಣ ಪರವಾಗಿಲ್ಲ. ಉಳಿದಂತೆ ಯಾವ ವಿಷಯಕ್ಕೂ ಚರ್ಚೆ ಮಾಡುವ ಅಗತ್ಯವಿಲ್ಲ. ಚಿರಂಜೀವಿ ಸರ್ಜಾ ಕುಣಿತ ಮತ್ತು ಫೈಟಿಂಗ್ ದೃಶ್ಯಗಳಲ್ಲಿ ಕೆಮ್ಮಂಗಿಲ್ಲ. ಆತ ಆ ವಿಷಯಕ್ಕೆ ಪಕ್ಕಾ ಮಾಸ್. ಆದರೆಅಭಿನಯದಲ್ಲಿ ಇನ್ನಷ್ಟು ಚುರುಕತನ ತಂದುಕೊಂಡರೆ ಆತನನ್ನು ಹಿಂಡಿಯಂಗಿಲ್ಲ....ಆಲ್ ದಿ ಬೆಸ್ಟ್ ಚಿರು...(ಸ್ನೇಹಸೇತು: ವಿಜಯ ಕರ್ನಾಟಕ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X