For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಬಾಡಿಗಾರ್ಡ್ ಸಿನಿಮಾ ವಿಮರ್ಶೆ

  |

  ಕನ್ನಡದ 'ಬಾಡಿಗಾರ್ಡ್' ಸಿನಿಮಾ, 2010 ರಲ್ಲಿ ಬಿಡುಗಡೆಯಾದ ಇದೇ ಹೆಸರಿನ ಮಲೆಯಾಳಂ ಚಿತ್ರದ ರೀಮೇಕ್. ಹಿಂದಿಯ ನಂತರ ಇದೀಗ ಕನ್ನಡಕ್ಕೆ ಬಂದಿದೆ ಬಾಡಿಗಾರ್ಡ್. ಸಾಕಷ್ಟು ಜನರಿಗೆ ಈಗಾಗಲೇ ಕಥೆ ಗೊತ್ತಿರುವುದರಿಂದ 'ಶಾರ್ಟ್'ಆಗಿ ಹೇಳಿದರೆ ಸಾಕು, ಅದನ್ನು ಕನ್ನಡ ನೇಟಿವಿಟಿಗೆ ಹೇಗೆ ಮಾಡಿದ್ದಾರೆ ಎಂಬುದಷ್ಟೇ ಬೇಕು.

  ಕಾನೂನು ಕೈಗೆ ತೆಗೆದುಕೊಳ್ಳುವುದೇ ಅನ್ಯಾಯದ ವಿರುದ್ಧ ಇರುವ ಏಕೈಕ ಅಸ್ತ್ರ ಎಂದು ನಂಬಿರುವ ನಾಯಕ ಜಯಕೃಷ್ಣ. ಅಗ್ರಹಾರದಲ್ಲಿ ನಡೆಯುವ ಡಾನ್ ಮೇಲಿನ ದಾಳಿಯಲ್ಲಿ ಡಾನ್ ಮಗಳು ಹಾಗೂ ಚಿತ್ರದ ನಾಯಕಿ ಅಮ್ಮು ಮತ್ತು ಅವಳ ತಾಯಿಯನ್ನು ರಕ್ಷಿಸುವ ಜಯಕೃಷ್ಣ, ಅವರ ಪಾಲಿಗೆ ದೇವರಾಗುತ್ತಾನೆ. ನಂತರ ಅಮ್ಮುವಿನ ಜೊತೆಯಲ್ಲೇ ಅರ್ಧಕ್ಕೇ ಬಿಟ್ಟಿದ್ದ ಪದವಿ ಪರೀಕ್ಷೆ ಮುಗಿಸುತ್ತಾನೆ.

  ಎಂಟು ವರ್ಷದ ನಂತರ ತನ್ನ ಮಗನೊಡನೆ ಮತ್ತೆ ಭೇಟಿಯಾಗುವ ಡಾನ್ ಮಾತಿನ ಪ್ರಕಾರ, ನಾಯಕಿ ಅಮ್ಮು ಹಾಗೂ ನಾಯಕ ಜಯಕೃಷ್ಣನ ನಡುವೆ ಏನಾಗುತ್ತದೆ? ಸಿದ್ದಾರ್ಥನ ಡೈರಿಯಿಂದ ಜಯಕೃಷ್ಣನಿಗೆ ಯಾವ ಪ್ರಯೋಜನವಾಗುತ್ತದೆ. ನಾಯಕ ಜಯಕೃಷ್ಣ ಹೇಗೆ ಸಿನಿಮಾ ಶೀರ್ಷಿಕೆ ಬಾಡಿಗಾರ್ಡ್ ಗೆ ಸರಿ ಹೊಂದುತ್ತಾನೆ ಎಂಬುದನ್ನು ತೆರೆಯ ಮೇಲೆ ನೋಡಿ ಆನಂದಿಸಿ.

  ಪಾತ್ರಧಾರಿಗಳ ನಟನೆ ವಿಷಯಕ್ಕೆ ಬಂದರೆ, ಜಗ್ಗೇಶ್ ಬಾಡಿಗಾರ್ಡ್ ಎಂಬ ಪದಕ್ಕೆ ಸೂಟ್ ಆಗುವುದಿಲ್ಲ. ಹಿಂದಿಯಲ್ಲಿ ಸಲ್ಮಾನ್ ಖಾನ್ ನನ್ನು ಬಾಡಿಗಾರ್ಡ್ ಪಾತ್ರದಲ್ಲಿ ನೋಡಿರುವ ಜನರಿಗೆ ಜಗ್ಗೇಶ್ 'ಬಾಡಿ' ಕಾಮಿಡಿ ಎನಿಸುತ್ತದೆ. ಅಭಿನಯ ಓಕೆ. ಸೆಂಟಿಮೆಂಟ್ ದೃಶ್ಯಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

  ಜಗ್ಗೇಶ್ ಗಿಂತ ಎತ್ತರವಿರುವ ನಟಿ ಡೈಸಿ ಷಾ, ದಪ್ಪಕ್ಕೂ ಇದ್ದು ಜಗ್ಗೇಶ್ ಜೊತೆ ಸ್ಪರ್ಧೆಗೆ ಬಿದ್ದಂತಿದೆ. ಅಭಿನಯ ಸಾಮಾನ್ಯ. ಸ್ಪೂರ್ತಿಗೆ ಹೆಚ್ಚಿನ ಅವಕಾಶ ಇಲ್ಲ. ಗುರುದತ್ ಸೂಪರ್. ಸಾಧುಕೋಕಿಲಾ ಹಾಗೂ ಜಗ್ಗೇಶ್ ಹಾಸ್ಯಸನ್ನಿವೇಶ ಪ್ರೇಕ್ಷಕರಿಗೆ ಕಚಗುಳಿ. ಉಳಿದ ಪೋಷಕ ಕಲಾವಿದರೂ ಕೂಡ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ.

  ಜಗ್ಗೇಶ್ ದಂಪತಿಗಳ ನಿರ್ಮಾಣದಲ್ಲಿ ಮೂಡಿಬಂದಿರುವ ಚಿತ್ರ ಬಾಡಿಗಾರ್ಡ್, ಕನ್ನಡ ಕಲಾವಿದನೊಬ್ಬನ ಕನಸು ನನಸಾದ ಸಮಯ. ಕನ್ನಡಿಗರು, ಅದರಲ್ಲೂ ಜಗ್ಗೇಶ್ ಅಬಿಮಾನಿಗಳಿಗೆ ಈ ಚಿತ್ರ ಖಂಡಿತ ಇಷ್ಟವಾಗುವಂತಿದೆ. ಟಿ. ಎ. ಆನಂದ್ ನಿರ್ದೇಶನ, ರಾಜೇಂದ್ರ ಕಾರಂತ್ ಸಂಭಾಷಣೆ ಚೆನ್ನಾಗಿದೆ. ಸಂಕಲನ ಹಾಗೂ ಸಂಗೀತ ಕೂಡ ಗಮನಸೆಳೆಯುತ್ತದೆ.

  ಚಿತ್ರ: ಬಾಡಿಗಾರ್ಡ್
  ಬ್ಯಾನರ್: ಗುರುರಾಜ್ ಫಿಲಂಸ್
  ತಾರಾಗಣ: ಜಗ್ಗೇಶ್, ಡೈಸಿ ಷಾ, ಸ್ಫೂರ್ತಿ, ಗುರುದತ್, ಸಾಧುಕೋಕಿಲ, ಬ್ಯಾಂಕ್ ಜನಾರ್ಧನ್, ಜೀವನ್ ಮುಂತಾದವರು
  ಸಂಗೀತ: ವಿನಯ್ ಚಂದ್ರ
  ಛಾಯಾಗ್ರಹಣ: ಅಶೋಕ್ ವಿ ರಾಮನ್
  ನಿರ್ಮಾಪಕರ: ಶ್ರೀಮತಿ ಪರಿಮಳಾ ಜಗ್ಗೇಶ್, ಜಗ್ಗೇಶ್
  ನಿರ್ದೇಶನ: ಟಿ. ಎ. ಆನಂದ್

  English summary
  This is a remake of Malayalam original ‘Bodyguard’. It was released in January 2010 in Kerala state. The Kannada version is appearing after Salman Khan ‘Bodyguard’ in Hindi. Jaggesh and Daisy Shah Pair, T A Anand Direction in Bodyguard. ಜಗ್ಗೇಶ್ ಬಾಡಿಗಾರ್ಡ್ ಸಿನಿಮಾ ವಿಮರ್ಶೆ
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X