»   » ತಿಪ್ಪಾರಳ್ಳಿ ತರ್ಲೆಗಳೇ ನಿಮಗಿದೋ ನಮಸ್ಕಾರ!

ತಿಪ್ಪಾರಳ್ಳಿ ತರ್ಲೆಗಳೇ ನಿಮಗಿದೋ ನಮಸ್ಕಾರ!

By: *ಕಲಗಾರು, ದೇವಶೆಟ್ಟಿ
Subscribe to Filmibeat Kannada

ಒಬ್ಬ ತರಲೆಗಿರಿಯ ಪರಮಾವಧಿ. ಇನ್ನೊಬ್ಬ ಮಿದುಳಿಗೇ ಜಿರಲೆ ಬಿಡುವ ಬಂಡಲ್ ಬಡಾಯಿ. ಮತ್ತೊಬ್ಬ ಮೂಗಿನ ತುದಿಗೆ ತುಪ್ಪಸವರಿ ಚಂದ ನೋಡುವ ಮಿಸ್ಟರ್ ಬಕರಾ ಸೋದರ!ಯಾರು ಹಿತವರು ನಿಮಗೆ ಈ ಮೂವರೊಳಗೆ? ಒಮ್ಮೆ ಮೂವರೂಇಷ್ಟವಾಗುತ್ತಾರೆ. ಇನ್ನೊಮ್ಮೆ ಇವರ ವಾಕ್ ಚಿತ್ರವನ್ನು ಸಹಿಸಿಕೊಳ್ಳುವುದುಕಷ್ಟವಾಗುತ್ತದೆ.

ಇನ್ನೇನು ಹಾಸ್ಯದ ಮಳೆ ಸುರಿಯಬೇಕು; ಅಲ್ಲಿ ಅತಿರೇಕದ ತುತ್ತತುದಿ ಗೋಚರವಾಗುತ್ತದೆ! ಇದು ಜಸ್ಟ್ ನೋಡಿ, ಎಂಜಾಯ್ ಮಾಡಿ, ಮರೆತುಬಿಡಿ... ಎಂಬಸಿದ್ಧಾಂತ ಆಧರಿಸಿದ ಚಿತ್ರ. ಕೆಲವೆಡೆ ತಮಾಷೆ ಹೋಗಿ ಅಮಾವಾಸ್ಯೆಯಾಗುತ್ತದೆ. ಇಲ್ಲಿ ವ್ಯಂಗ್ಯವಿದೆ, ವಿಡಂಬನೆಯಿದೆ. ರಾಜಕೀಯ ಆಚಾರ, ವಿಚಾರ,ಶಿಷ್ಟಾಚಾರ ಹಾಗೂ ಭ್ರಷ್ಟಾಚಾರಕ್ಕೆ 'ಭೂತ"ಕನ್ನಡಿ ಹಿಡಿದಿದ್ದಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.

ಆದಿಯಿಲ್ಲದ 'ಅಂತ"ವನ್ನು ಅತ್ಯಂತ ಅವಾಂತರಶೈಲಿಯಲ್ಲಿ ಹೇಳಿದ್ದಾರೆ. ತಿಪ್ಪಾರಳ್ಳಿಯ ತರಲೆಗಳೇ ನಿಮಗಿದೋ ನಮಸ್ಕಾರ!ಕೋಮಲ್ ಕಾಮಿಡಿ ಸಹಿಸಿಕೊಳ್ಳಬಹುದು. ಎಸ್.ನಾರಾಯಣ್ 'ಅತಿ "ಮಧುರಾ ಅನುರಾಗಾ... ಓಂ ಪ್ರಕಾಶ್ ರಾವ್ ಮತ್ತೆ ಡಕೋಟಾ ಎಕ್ಸ್ ಪ್ರೆಸ್ ಓಡಿಸುತ್ತಾರೆ. ಮೂವರು ನಾಯಕಿಯರು ನಕ್ಕರೆ ಅತ್ತಂತೆ, ಅತ್ತರೆ ಸುಮ್ಮನಿದ್ದಂತೆ, ಸುಮ್ಮನಿದ್ದರೆ ನಕ್ಕಂತೆ ಕಾಣುತ್ತಾರೆ. ಕನ್ವರ್‌ಲಾಲ್ ಅಂಬರೀಷ್ ನಡೆದದ್ದೇ ಹಾದಿ. ಅವರ 'ಗಜ"ಗಾಂಭೀರ್ಯ, ನಡುಗೆ, ಉಡುಗೆ, ತೊಡುಗೆ,ಕೊಡುಗೆ... ಎಲ್ಲ ಉಘೇ ಉಘೇ...ಸಾಧುಕೋಕಿಲಾಗೆ ಹೊಸ ಥರ ಕಾಮಿಡಿ ಮಾಡಕ್ಕೇ ಬರಾಕಿಲ್ಲಾ ಕಣಣ್ಣೋ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada