Don't Miss!
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Sports
IND vs NZ: ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ದಿಢೀರ್ ಭೇಟಿ ನೀಡಿದ ಎಂಎಸ್ ಧೋನಿ; ವಿಡಿಯೋ
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೊಟ್ಟಕಾಸಿಗೆ ಮೋಸವಿಲ್ಲದ, ರಂಜಿಸುವ 'ಶಕ್ತಿ' ಚಿತ್ರ ವಿಮರ್ಶೆ
ಕಥೆಯಲ್ಲಿ ಹೊಸತನವಿಲ್ಲದಿದ್ದರೂ ಸಂಭಾಷಣೆ ಹೇಳುವ ರೀತಿ, ಅಲ್ಲಲ್ಲಿ ಬಂದು ಹೋಗುವ ಕಾಮಿಡಿ ದೃಶ್ಯಗಳು ಸೂಪರ್. ಚಿತ್ರದುದ್ದಕ್ಕೂ ಪಂಚಿಂಗ್ ಡೈಲಾಗ್‌ಗಳದ್ದೇ ಸುರಿಮಳೆ. ಅದನ್ನು ಕೇಳಿದ ಪ್ರೇಕ್ಷಕರ ಶಿಳ್ಳೆ ಥಿಯೇಟರ್ ತುಂಬೆಲ್ಲಾ ಹರಿದಾಡುತ್ತದೆ. ಚಿತ್ರದ ಮೊದಲರ್ದದಲ್ಲಿ ಹೇಳಿಕೊಳ್ಳುವಂತ ಸ್ವಾರಸ್ಯ ಇಲ್ಲದಿದ್ದರೂ ಎರಡನೇ ಅರ್ಧದಲ್ಲಿ ಪ್ರೇಕ್ಷಕನನ್ನು ಅಲ್ಲಾಡದಂತೆ ಕೂರಿಸಿಬಿಡುವುದು ಮಾಲಾಶ್ರೀ ಮಾತ್ರ.
ಮಾಲಾಶ್ರೀ ಇದ್ದ ಮೇಲೆ ಕೇಳಬೇಕೇ? ಫೈಟಿಂಗ್‌ಗೇನೂ ಕೊರತೆಯಿಲ್ಲ. ಅದನ್ನು ನಿಭಾಯಿಸುವಲ್ಲೂ ಮಾಲಾಶ್ರೀ ಹಿಂದೆ ಬಿದ್ದಿಲ್ಲ. ನಿರೂಪಣೆಯಲ್ಲಿ ಹೊಸತನ ಎದ್ದು ಕಾಣುತ್ತದೆ. ಪಂಚಿಂಗ್ ಡೈಲಾಗ್‌ಗಳು ಹಾಗೇ ಕಿವಿಯ ಹತ್ತಿರ ಗುಯ್ ಗುಟ್ಟಂತೆ ಆಗುತ್ತದೆ.
ಒಂದು ಗೋಡನ್‌ನಲ್ಲಿ ಸಾಮಾನ್ಯ ಹುಡುಗಿಯಂತೆ ಮೂಟೆ ಹೊರುತ್ತಿದ್ದ ಶಕ್ತಿ (ಮಾಲಾಶ್ರೀ) ತನ್ನ ಯಜಮಾನ ಹೇಳಿದಂತೆ ಒಬ್ಬನಿಂದ ದುಡ್ಡು ವಾಪಾಸ್ ತರಲು ಹೋಗಿ ಅಲ್ಲಿ ಅಡ್ಡ ಬಂದ ಜನರಿಗೆ ಗೂಸಾ ಗೊಟ್ಟು ಬರುತ್ತಾಳೆ. ಅವಳ ಆ ರೂಪವನ್ನು ನೋಡಿದ ಆ ಊರಿನ ಯಜಮಾನ ಶಯ್ಯಾಜಿ ರಾವ್ ಶಿಂದೆ ಅವಳನ್ನು ತನ್ನ ಮನೆಯ ಕೆಲಸಕ್ಕೆ ತಂದು ಇಟ್ಟುಕೊಳ್ಳುತ್ತಾನೆ. ಆ ಯಜಮಾನನ ಮಗಳು ಸ್ವಾತಿ (ರಾದಿಕಾ ಗಾಂಧಿ) ಯ ಕಾವಲು ಕಾಯುವ ಕೆಲಸ ಶುರು ಮಾಡುತ್ತಾಳೆ ಶಕ್ತಿ.
ರಾಧಿಕಾ ಗಾಂಧಿ ಇಷ್ಟ ಪಟ್ಟ ಹುಡುಗ ಬೇರೆ ಜಾತಿಯನೆಂಬ ಕಾರಣಕ್ಕೆ ಸ್ವಾತಿ ಮಾವ ಅವಿನಾಶ್ ಬಂದು ತಮ್ಮ ಮನೆ ಸೊಸೆ ಮಾಡಿಕೊಡುವಂತೆ ಕೇಳುತ್ತಾರೆ. ಆದರೆ ಇದಕ್ಕೆ ಮನೆಕೆಲಸ ಮಾಡಿಕೊಂಡಿದ್ದ ಶಕ್ತಿಯೇ ಅಡ್ಡಬರುತ್ತಾಳೆ. ಅವರಿಬ್ಬರನ್ನೂ ಕಾಪಾಡುವ ಹೊಣೆ ಹೊರುತ್ತಾಳೆ. ಸಿಟ್ಟಿಗೆದ್ದ ಯಜಮಾನ ಆಕೆಯ ಮೇಲೆ ಅಟ್ಯಾಕ್ ಮಾಡುತ್ತಾನೆ. ಸಣ್ಣ ಆಕ್ಸಿಡೆಂಟ್ ಆಗಿ ಆಸ್ಪತ್ರೆಗೆ ಸೇರುತ್ತಾರೆ. ಅಲ್ಲಿಂದ ಕಥೆ ತಿರುವು ಪಡೆಯುತ್ತಾ ಹೋಗುತ್ತದೆ.
ಅಲ್ಲಿನ ಪೊಲೀಸ್ ಕಮಿಷನರ್ ಆಕೆಯನ್ನು ನೋಡಿ ಶಾಕ್ ಆಗುತ್ತಾರೆ. ಆಕೆ ಬೇರಾರೂ ಅಲ್ಲ ಪೊಲೀಸ್ ಆಫೀಸರ್ ಚಾಮುಂಡಿ. ಹಳೆಯ ನೆನಪೆಲ್ಲಾ ಹೋಗಿ ಮನೆಕೆಲಸದವಳಾಗಿ ಸೇರಿಕೊಂಡಿರುತ್ತಾಳೆ. ಮೊದಲರ್ಧ ಅಲ್ಲಿಗೇ ಮುಗಿದು ಎರಡನೇ ಅರ್ಧದಲ್ಲಿ ಹೊಸ ರೂಪ ತಾಳುತ್ತದೆ ಕಥೆ. ಆಕೆ ಪೊಲೀಸ್ ಆಫೀಸರ್ ಆಗಿ ದುಷ್ಟ ರಾಜಕಾರಣಿಗಳನ್ನು ಮಟ್ಟಹಾಕುತ್ತಿರುತ್ತಾಳೆ. ಇದನ್ನು ಸಹಿಸದ ಕೆಲವು ರಾಜಕಾರಣಿಗಳು ಆಕೆಯನ್ನು ಮುಗಿಸುವ ಪ್ಲಾನ್ ಮಾಡಿರುತ್ತಾರೆ. ಮುಂದೇನಾಗುತ್ತದೆ. ಭ್ರಷ್ಟರ ವಿರುದ್ಧ ಹೇಗೆ ಹೋರಾಡುತ್ತಾಳೆ ಎನ್ನುವುದನ್ನು ನೀವು ಹೋಗಿ ಚಿತ್ರ ನೋಡಿದರೆ ಗೊತ್ತಾಗುತ್ತದೆ.
ಪಾತ್ರಗಳ ಬಗ್ಗೆ ಹೇಳುವುದಾದರೆ ಮಾಲಾಶ್ರೀ ಬಗ್ಗೆ ಕೆಮ್ಮಂಗಿಲ್ಲ. ಅವರೇ ಡಬ್ ಮಾಡಿರುವುದು ಡಬಲ್ ಕ್ರೆಡಿಟ್. ಇನ್ನು ಶಯಾಜಿರಾವ್ ಶಿಂದೆ ಕನ್ನಡ ಬಾರದಿದ್ದರೂ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿ ನ್ಯಾಯ ಒದಗಿಸಿದ್ದಾರೆ. ದುಷ್ಟ ರಾಜಕಾರಣಿಗಳಾಗಿ ಶರತ್ ಲೋಹಿತಾಶ್ವ, ಹೇಮಾಚೌಧರಿ, ರವಿಶಂಕರ್ ಅಭಿನಯದ ಬಗ್ಗೆ ಎರಡು ಮಾತಿಲ್ಲ.
ರವಿಶಂಕರ್ ಡೈಲಾಗ್ ಎಂದರೆ ಅಲ್ಲಿ ಶಿಳ್ಳೆಗಳ ಸುರಿಮಳೆ. ಇನ್ನುಳಿದಂತೆ ಅವಿನಾಶ್, ವಿನಯಾ ಪ್ರಕಾಶ್, ರಾಧಿಕಾ ಗಾಂಧಿ, ಕಿರಣ್, ಆಶಿಶ್ ವಿಧ್ಯಾರ್ಥಿ, ಸಾಧುಕೋಕಿಲಾ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶಿವರಾಜ್‌ಕುಮಾರ್ ಕಂಠದಲ್ಲಿ ಮೂಡಿಬಂದ ಬಂಡಿ ಸಾಗುತಿದೆ ಹಾಡು ಕೇಳಲು ಚೆನ್ನಾಗಿದೆ.
ರಾಮು ನಿರ್ಮಾಣದ ಈ ಚಿತ್ರಕ್ಕೆ ಥ್ರಿಲ್ಲರ್ ಮಂಜು, ಕೆ.ರವಿವರ್ಮ ಸಾಹಸವಿದೆ. ನೀವೂ ಆಕ್ಷನ್ ಪ್ರಿಯರಾದರೆ ಖಂಡಿತಾ ಒಂದು ಬಾರಿ ಹೋಗಿಬನ್ನಿ. ಕೊಟ್ಟ ಕಾಸಿಗೆ ಮೋಸವಿಲ್ಲ.