»   » ಶ್ರೀ ಮೋಕ್ಷ:ಭೂಗತರಿಗೆ ಕರೆಂಟ್ ಶಾಕ್

ಶ್ರೀ ಮೋಕ್ಷ:ಭೂಗತರಿಗೆ ಕರೆಂಟ್ ಶಾಕ್

By: * ದೇವಶೆಟ್ಟಿ ಮಹೇಶ್/ ಕಲಗಾರು
Subscribe to Filmibeat Kannada

ಭೂಗತ ಜಗತ್ತಿನ ಕತ್ತಲಲ್ಲಿ ಕ್ಯಾಮೆರಾ ಇಟ್ಟ ಕತೆಗಳು ಕನ್ನಡದಲ್ಲಿ ಅದೆಷ್ಟೋ ಬಂದಿವೆ. ಅಂಥ ಡೆಡ್ಲಿ' ಚಿತ್ರಗಳನ್ನು ಅರಗಿಸಿಕೊಳ್ಳು ವುದು ಕೊಂಚ ಕಷ್ಟ. ಅದೇ ಥರದ ಅಂಡರ್ (ವರ್ಲ್ಡ್)ಕರೆಂಟ್ ಚಿತ್ರ ಶ್ರೀ ಮೋಕ್ಷ. ನಿರ್ದೇಶಕ ಕೇಶವ ಶೆಟ್ಟಿ ಇಲ್ಲಿ ಇನ್ನೊಂದು ಭೂ-ಗತ ಕಾಲ ವೈಭವವನ್ನು ಚಿಂದಿ-ಚಿತ್ತಾರದಂತೆ ಚಿತ್ರಿಸಿದ್ದಾರೆ !

ಇದು ಮೀನುಗಾರನೊಬ್ಬನ ಕತೆ. ತನ್ನ ಪ್ರೇಯಸಿಯನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳಲು ಆತ ಪಿಸ್ತೂಲಿಗೆ ಶರಣಾಗುತ್ತಾನೆ. ಹಣೆಗೆ ಗುಂಡಿಕ್ಕಿ ಸಾವಿನ ಮನೆ ಬಾಗಿಲಿನ ಕೆಂಪು ಗುಂಡಿ ಒತ್ತುತ್ತಾನೆ. ತನಗೆ ಅರಿವಿಲ್ಲದಂತೇ 'ಭೂಗತ' ವಾಗುತ್ತಾನೆ!

ನಾಯಕ ಸಚಿನ್ ಸುವರ್ಣ ನಿಂತಲ್ಲೇ ನಟಿಸುತ್ತಾರೆ. ಕುತ್ತಿಗೆ ಅಲ್ಲಾಡಿಸದೇ ಡೈಲಾಗ್ ಒಗಾಯಿಸುತ್ತಾರೆ. ಕನ್ನಡಕ ತೆಗೆಯದೇ ಕನ್ನಡ ಮಾತನಾಡುತ್ತಾರೆ. ನಾಯಕಿ ರೀತು ಸಿನಿಮಾ ಶುರುವಾದ ಅರ್ಧ ತಾಸಿನಲ್ಲಿ ಆತ್ಮಲಿಂಗದಲ್ಲಿ ಐಕ್ಯವಾಗುತ್ತಾಳೆ.

ನಂತರ ಆಕೆ 'ಮೋ ಹಿನಿಯಾ'...ಒಂದಷ್ಟು ಪರಭಾಷಾ ವಿಲನ್‌ಗಳನ್ನು ತಂದು ನಿಲ್ಲಿಸಿ, ಕೂಗಿಸಲಾಗುತ್ತದೆ. ಆದಿ ಲೋಕೇಶ್ ಅರಚಾಟಕ್ಕೆ ಅಂತ್ಯವಿಲ್ಲ. ರಾಕೇಶ್ 'ಲೋಬೊ' ಹೆಸರಿಗೆ ತಕ್ಕಂತಿದ್ದಾನೆ. ಉಷಾ ಭಂಡಾರಿ ಪೊಲೀಸ್ ಪಾತ್ರದಲ್ಲಿ ಥೇಟ್ ಕನ್ನಡದ ಕಿರಣ್ ಬೇಡಿ. ಇಡೀ ಚಿತ್ರ ಕತ್ತಲಲ್ಲೇ ಶುರುವಾಗಿ ಕತ್ತಲಲ್ಲೇ ಅಂತ್ಯವಾಗುತ್ತದೆ.

ಬರುವಾಗ ಕತ್ತಲೆ, ಹೋಗುವಾಗ ಕತ್ತಲೆ, ಅಲ್ಲಲ್ಲಿ-ಎತ್ತಲೇ, ಹೋಗಲೇ, ಬಾರಲೇ...ಹೀಗಿದ್ದೂ ಕೇಶವ ಶೆಟ್ಟಿ ಮೊದಲ ನಿರ್ದೇಶನದಲ್ಲಿ ಭರವಸೆ ಮೂಡಿಸುತ್ತಾರೆ. ಕೆಲ ಸೆಂಟಿಮೆಂಟ್ ದೃಶ್ಯಗಳು ಲವಲವಿಕೆಯಿಂದ ಕೂಡಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada