For Quick Alerts
  ALLOW NOTIFICATIONS  
  For Daily Alerts

  ಕತೆ ಇಲ್ಲದ ಕಲರ್‌ಫುಲ್ ಕಣಜ ಈ ವೀರಬಾಹು!

  By * ಚಿತ್ರಗುಪ್ತ
  |

  ವೀರಬಾಹು ಸಿನಿಮಾದಲ್ಲಿ ಏನಿದೆ? ಏನಿಲ್ಲ ಎನ್ನುವುದಕ್ಕಿಂತ ಇದೊಂದು ಪಕ್ಕಾ ಕಮರ್ಷಿಯಲ್ ಪ್ಯಾಕೇಜ್ ಒಳಗೊಂಡ ಚಿತ್ರ ಎನ್ನಬಹುದು! ಹಾಗಂತ ಎಂ.ಪಿ. ಶಂಕರ್ ಭೂಮಿಯೇ ನಡುಗುವಂತೆ ಕುಡಿದಿದ್ದು ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ. ಅದರಲ್ಲಿ ಅವರ ಪಾತ್ರ ಹೆಸರು ವೀರಬಾಹು. ಏ ದಿತ್ತಿರಿ ದಿತ್ತಿರಿ ಎನ್ನುತ್ತಿದ್ದರೆ ಜನ ಥಿಯೇಟರ್‌ನಲ್ಲೇ ಲಗಾಟಿ ಹೊಡೆಯುತ್ತಿದ್ದರು.

  ಆದರೆ, ಎಸ್.ಮಹೇಂದರ್ ಅವರ ವೀರಬಾಹು ಚಿತ್ರದಲ್ಲಿ ಆ ಮಟ್ಟದ ಲಗಾಟಿಗಿರಿ ಇಲ್ಲದಿದ್ದರೂ ಜನರಿಂದ ಒಂದಷ್ಟು ಚಪ್ಪಾಳೆಗಳು ಗಿಟ್ಟಬಹುದು ಎನ್ನುವುದು ಸೇಫರ್ ಸೈಡ್ ಮಾತು!ಒಬ್ಬ ಅನಾಥ ಹುಡುಗ ಸ್ಮಶಾನ ಕಾಯುವ ಕೆಲಸದಲ್ಲಿ ತೊಡಗಿರುತ್ತಾನೆ. ಆದರೆ, ಅದೇ ಊರಗೌಡನ ಮಗಳು ಅವನನ್ನು ಪ್ರೀತಿಸುತ್ತಾಳೆ.

  ಅವರು ಬಾಲ್ಯದಲ್ಲಿ ಒಟ್ಟಿಗೇ ಇದ್ದುದರಿಂದ ಅವಳು ಆಟೊಮೆಟಿಕಲೀ ಅವನನ್ನು ಪ್ರೀತಿಸುತ್ತಾಳೆ. ಆದರೆ, ಅದು ಅವಳಪ್ಪನಿಗೆ ಇಷ್ಟವಿರುವುದಿಲ್ಲ. ಮುಂದೇನಾಗಬಹುದು ಎನ್ನುವುದು ವೀರಬಾಹು ವಿ-ಚಿತ್ರಕತೆ! ವಿಜಯ್ ಎಂದಿನಂತೇ ಚಳಿ ಬಿಟ್ಟು ನಟಿಸಿದ್ದಾರೆ.

  ರಂಗಾಯಣ ರಘು ಮತ್ತು ಅವರ ಸ್ಮಶಾನ-ಸದೃಶ ದ್ಯಶ್ಯಗಳು ಅಲ್ಲಲ್ಲಿ ಜನರನ್ನು ಹಿಡಿದು ಕೂರಿಸುತ್ತದೆ. ನಿಧಿ ಸುಬ್ಬಯ್ಯರದ್ದು ಮಾಮೂಲಿ ನಟನೆ. ಉಳಿದಂತೇ ಅವಿನಾಶ್ ಇತ್ಯಾದಿ ನಟರು ಪಾತ್ರ ಮತ್ತು ಚಿತ್ರಕ್ಕೆ ಬೆಂಗಾವಲಾಗಿ ನಿಲ್ಲುತ್ತಾರೆ. ಹರಿಕೃಷ್ಣ ಹಾಡುಗಳು ತಕ್ಕಮಟ್ಟಿಗೆ ಓಕೆ. ಕೊರಿಯಾಗ್ರಫಿ ಚೆನ್ನಾಗಿದೆ.

  ಸಂಭಾಷಣೆಯಲ್ಲಿ ಒಂದಷ್ಟು ಪಂಚ್ ಇದೆ. ವಿಜಿ ಹೊಡೆದಾಟಗಳ ಮಟ್ಟಿಗೆ ಮಾತನಾಡುವಂತಿಲ್ಲ!ಮಹೇಂದರ್ ತುಂಬಾ ಗ್ಯಾಪ್ ನಂತರ ನಿರ್ದೇಶನಕ್ಕೆ ಕೈ ಹಾಕಿರುವುದರಿಂದ ಒಂದಷ್ಟು ಕೈಚಳಕ ತೋರಿದ್ದಾರೆ. ಅಷ್ಟನ್ನು ಬಿಟ್ಟರೆ ಕತೆ ಇಲ್ಲದ ಕಲರ್‌ಫುಲ್ ಕಣಜ ಈ ವೀರಬಾಹು!

  English summary
  Here is the Kannada movie Veer Bahu review. The movie leads Duniya Vijay,Nidhi Subbaiah, Rangayana Raghu, Avinash, Achyuth Kumar etc., The movie is an mass entertainer. After a long gap S Mahender is back in this film. But nothing special in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X