For Quick Alerts
  ALLOW NOTIFICATIONS  
  For Daily Alerts

  ಆಕ್ಷನ್ ಪ್ರಧಾನ ಹಿಂದಿ ಸಿಂಗಂ ಚಿತ್ರ ವಿಮರ್ಶೆ

  By * ರಾಜೇಶ್ ಕಾಮತ್
  |

  ರೋಹಿತ್ ಶೆಟ್ಟಿ ವೃತ್ತಿ ಜೀವನದಲ್ಲಿ ಉತ್ತಮ ನಿರ್ದೇಶನದ ಚಿತ್ರ ಇದೆನ್ನಬಹುದು. ಮೂಲ ಕಥೆಯಲ್ಲಿ ರಾಜಿ ಮಾಡಿಕೊಳ್ಳದೆ ಆಕ್ಷನ್, ಡೈಲಾಗ್‌ಗೆ ಹೆಚ್ಚಿನ ಒತ್ತು ನೀಡಿ ಒಂದು ಪಕ್ಕಾ ಮಸಾಲ ಚಿತ್ರವನ್ನು ನೀಡಿದ್ದಾರೆ. ಅಜಯ್ ದೇವಗನ್, ಕಾಜಲ್ ಅಗರವಾಲ್, ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ತಮಿಳಿನ ಸೂಪರ್ ಹಿಟ್ 'ಸಿಂಗಂ' ಚಿತ್ರದ ರಿಮೇಕ್. ತಮಿಳಿನಿಂದ ಕನ್ನಡಕ್ಕೆ ರಿಮೇಕ್ ಗೊಂಡ 'ಕೆಂಪೇಗೌಡ' ಚಿತ್ರವೂ ಭರ್ಜರಿ ಯಶಸ್ಸು ಕಂಡಿತ್ತು.

  ಮಹಾರಾಷ್ಟ್ರ ಗೋವಾ ಗಡಿಭಾಗದ ಸಣ್ಣ ಊರು ಶಿವಗಡ್. ನಾಯಕ ಬಾಜಿರಾವ್ ಸಿಂಗಂ (ಅಜಯ್ ದೇವಗನ್) ಒಬ್ಬ ನಿಷ್ಟಾವಂತ, ಧೈರ್ಯಶಾಲಿ ಪೋಲೀಸ್ ಅಧಿಕಾರಿ. ತನ್ನದೇ ಶೈಲಿಯಲ್ಲಿ ಕಾರ್ಯ ನಿರ್ವಹಿಸಿಕೊಂಡು ಹೋಗುವ ನಾಯಕ ಏಕಕಾಲಕ್ಕೆ 50 ಜನ ರೌಡಿ ಗಳನ್ನು ಹೊಡೆದುರುಳಿಸಬಲ್ಲ. ನಾಯಕ ಇದ್ದ ಮೇಲೆ ಖಳನಾಯಕ ಇರಲೇ ಬೇಕಲ್ಲವೇ. ಊರಿನ ಮುಗ್ಧ ಜನರನ್ನು ವಂಚಿಸಿ, ಹಣ ವಸೂಲು ಮಾಡುವುದನ್ನೇ ತನ್ನ ದಂಧೆಯನ್ನಾಗಿಸಿಕೊಂಡ ನಟೋರಿಯಸ್ ರೌಡಿ ಕಮ್ ರಾಜಕಾರಣಿ ಜಯಕಾಂತ್ ಶಿಕ್ರೆ (ಪ್ರಕಾಶ್ ರಾಜ್).

  ನಾಯಕನಿರುವ ಊರಿಗೆ ನಾಯಕಿ ಕಾವ್ಯ (ಕಾಜಲ್ ಅಗರವಾಲ್) ಪ್ರವೇಶವಾಗುತ್ತೆ. ನಾಯಕನ ಸದ್ಗುಣಗಳಿಗೆ ಮಾರು ಹೋಗಿ ಆತನನ್ನು ಪ್ರೀತಿಸಲು ಆರಂಭಿಸುತ್ತಾಳೆ. ನಂತರ ಡ್ಯೂಯಟ್. ರೌಡಿ ಜಯಕಾಂತ್ ಶಿಕ್ರೆಯನ್ನು ಸದೆ ಬಡೆಯಲು ನಾಯಕ ಹಲವಾರು ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ. ಆ ಸವಾಲುಗಳನ್ನೆಲ್ಲಾ ನಾಯಕ ಹೇಗೆ ನಿಭಾಯಿಸಿಕೊಂಡು ಜಯಶಾಲಿಯಾಗುತ್ತಾನೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್.

  ಇಡೀ ಚಿತ್ರದ ಪ್ಲಸ್ ಪಾಯಿಂಟ್ ಅಂದರೆ ನಾಯಕ ಮತ್ತು ಖಳ ನಾಯಕರ ನಡುವಿನ ಡೈಲಾಗ್. ಫರದ್ - ಸಾಜಿದ್ ಅವರ ಸಂಭಾಷಣೆ ವಸ್ತುಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಜೈಸಿಂಗ್ ಅವರ ಸಾಹಸ ದೃಶ್ಯಗಳಂತೂ ಮೈನವಿರೇಳಿಸುತ್ತವೆ. ಯೂನಸ್ ಸಾಜವಾಲಾ ಅವರ ಚಿತ್ರಕಥೆ ಪೂರಕವಾಗಿದೆ. ಅಮೀರ್ ಮೊಹಿಲೆಯವರ ಬ್ಯಾಕ್ ಗ್ರೌಂಡ್ ಸಂಗೀತ ಉತ್ತಮವಾಗಿದೆ. ಸಣ್ಣ ಪುಟ್ಟ ವಿಚಾರಗಳಿಗೂ ಆದ್ಯತೆ ನೀಡುವ ಮೂಲಕ ನಿರ್ದೇಶಕ ರೋಹಿತ್ ಶೆಟ್ಟಿ ಗೆದ್ದಿದ್ದಾರೆ.

  ಚಿತ್ರದಲ್ಲಿ ಬೋರ್ ಹೊಡೆಯುವ ಸಂಗತಿ ಏನಂದರೆ ನಾಯಕ ಮತ್ತು ನಾಯಕಿಯರ ನಡುವಣ ದೃಶ್ಯಗಳು. ಅದೇಕೋ ಇವರಿಬ್ಬರ ಕೆಮಿಸ್ಟ್ರಿ ವರ್ಕ್ಔಟ್ ಆಗಿಲ್ಲ. ಚಿತ್ರಕ್ಕೆ ಸಂಗೀತ ನೀಡಿದ ಅಜಯ್ - ಅತುಲ್ಲ್ ಜೋಡಿ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಸಚಿವನ್ ಖೇದ್ಕರ್ ಅವರ ಹಾಸ್ಯ ನಗು ತರಿಸುವುದಿಲ್ಲ. ನಾಯಕಿಯ ಪಾತ್ರ ಅಷ್ಟಾಗಿ ಗಮನ ಸೆಳೆಯುವುದಿಲ್ಲ. ಕಾಜಲ್ ಅಗರವಾಲ್‌ಗೆ ಇದು ಬಾಲಿವುಡ್ ಪರ್ಫೆಕ್ಟ್ ಎಂಟ್ರಿ ಅಲ್ಲ ಅನ್ನಬಹುದು.

  ಅಜಯ್ ದೇವಗನ್ ಮತ್ತು ಪ್ರಕಾಶ್ ರಾಜ್ ಒಬ್ಬರೊಬ್ಬರನ್ನು ಮೀರಿಸುವಂತೆ ಪಾತ್ರವನ್ನು ತಮ್ಮ ತೆಕ್ಕೆಗೆ ಆಹ್ವಾನಿಸಿ ಕೊಂಡು ಅಭಿನಯಿಸಿರುವುದು ಪ್ರೇಕ್ಷಕನ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ.ಇನ್ನು ಚಿತ್ರದ ಪೋಷಕ ಪಾತ್ರದಲ್ಲಿರುವ ಸೋನಾಲಿ ಕುಲಕರ್ಣಿ, ಅಶೋಕ್ ಶರಫ್, ಗೋವಿಂದ್ ನಾಮದೇವ್, ಮುರಳಿ ಶರ್ಮಾ, ಅನಂತ್ ಜೋಗ್ ಮುಂತಾದವರ ನಿರ್ವಹಣೆ ಅಚ್ಚುಕಟ್ಟು.

  English summary
  Singham is one more addition to the list of masala entertainers like Wanted and Dabangg. This Rohit Shetty direction has successfully delivered an entertainment material. Read on the review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X