For Quick Alerts
  ALLOW NOTIFICATIONS  
  For Daily Alerts

  ತರತರತರ ಒಂಥರಾ ತಲೆ ಚಿಟ್ಟು ಹಿಡಿಸುವ ಚಿತ್ರ ಆಸ್ಕರ್

  By * ಸುನೀಲ್ ಮಾಗಡಿ
  |

  ಹನುಮಂತ ಎಂಬ ಹೆಸರಿಟ್ಟು, ಫ್ಯಾಮಿಲಿ ಕತೆ ಹೇಳಿದರೆ ಹೇಗಿರುತ್ತೆ? ಶೇಕ್ಸ್‌ಪಿಯರ್ ಎಂಬ ಹೆಸರಿನ ಸಿನಿಮಾ ತೆಗೆದು, ಅದರಲ್ಲಿ ಬರೀ ಡಿಸ್ಕೊ ಡ್ಯಾನ್ಸ್ ಇಟ್ಟರೆ ಹೆಂಗಿರುತ್ತೆ? ಬಸ್ ಸ್ಟ್ಯಾಂಡ್ ಎಂದು ಹೆಸರಿಟ್ಟು, ಅದರಲ್ಲಿ ಬರೀ ವಿಮಾನ ಯಾನ ತೋರಿಸಿದರೆ ಹೆಂಗೆ?

  ಬಿದ್ದೂ ಬಿದ್ದು ನಗಬೇಕೆನಿಸುತ್ತದೆ ಎನ್ನುವುದಾದರೆ ಖಂಡಿತ ಆಸ್ಕರ್ ಸಿನಿಮಾಗೆ ಹೋಗುವುದರ ಬಗ್ಗೆ ಯೋಚಿಸಬೇಡಿ. ಕಾರಣ ಇದರ ಹೆಸರು ಆಸ್ಕರ್. ಆದರೆ, ಇರುವುದೆಲ್ಲಾ ದೆವ್ವದ ಕತೆ. ಹೆಸರಿಗೂ ಕತೆಗೂ ಸಂಬಂಧವೇ ಇಲ್ಲ. ನಟ ಅಶೋಕ್‌ದು ಶೋಕ ವ್ಯಕ್ತಪಡಿಸುವಾಗಲೂ, ಸುಮ್ಮನೇ ಇರುವಾಗಲೂ, ನಗುವಾಗಲೂ ಒಂದೇ ಹಾವಭಾವ.

  ನಾಯಕಿ ಪ್ರಿಯಾಂಕಾ ದೆವ್ವದ ಚಿತ್ರಕ್ಕೆ ಹೇಳಿಮಾಡಿಸಿದಂತಿದ್ದಾಳೆ. ಅಷ್ಟೇ ಅಲ್ಲ, ಸದ್ಯದಲ್ಲೇ ಈಕೆ ಚಿತ್ರರಂಗದಿಂದ ದೆವ್ವದಂತೇ ಮಾಯವಾದರೂ ಆಶ್ಚರ್ಯವಿಲ್ಲ!

  ಒಂದಿಷ್ಟು ಮಂದಿಗೆ ಕಾಟ ಕೊಡುವ ದೆವ್ವದ ಹೆಸರಲ್ಲಿ ನಿರ್ದೇಶಕ ಕೃಷ್ಣ ಪ್ರೇಕ್ಷಕರಿಗೂ ಒಂದಷ್ಟು ಹೊತ್ತು ಕಾಟ ಕೊಡುತ್ತಾ ಹೋಗುತ್ತಾರೆ.

  ದೆವ್ವ ಮತ್ತು ದೆವ್ವದ ಸಿನಿಮಾ ಇಷ್ಟಪಡುವ ಪ್ರೇಕ್ಷಕರಿಗೆ ಆಸ್ಕರ್ ಹೇಳಿಮಾಡಿದ ಸಿನಿಮಾ. ಕೃಷ್ಣ ಮುಂದೆ ಹೆಣ್ಣುಮಕ್ಕಳು ಅಳುವ ಸಿನಿಮಾ ಮಾಡಿ ಅದಕ್ಕೆ ಬಾಸ್ಕರ್ ಎಂದು ಹೆಸರಿಟ್ಟರೆ ಅದು ತಮಾಷೆಯಾಗಿ ಪರಿಗಣಿಸಿ!

  English summary
  Here is the Kannada movie Oscar review. Krishna makes his directorial debut with "Oscar", a film which cannot be slotted in any genre. Krishna's script is unconvincing at many places.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X